ಕುಮಟಾ:ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವು ಕುಮಟಾ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಗ್ರಾ.ಪಂ ದೇವಗಿರಿ, ಜನತಾ ವಿದ್ಯಾಲಯ ಧಾರೇಶ್ವರ, ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಧಾರೇಶ್ವರ, ಧರ್ಮಸ್ಥಳ ಸಂಘ ಹಾಗೂ ಸ್ತ್ರೀಶಕ್ತಿ ಸಂಘ ಧಾರೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಜನತಾ ವಿದ್ಯಾಲಯ ಧಾರೇಶ್ವರದ ಸಭಾಭವನದಲ್ಲಿ ಇಂದು ಜರುಗಿತು ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಮೋಹನ್ ಕುಮಾರಿ ಎನ್. ಬಿ. ರವರು ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರು ಎಲ್ಲಾ ಕ್ಷೇತ್ರಗಳ‍ಲ್ಲೂ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂದು ಕರೆ ನೀಡಿದರು.

RELATED ARTICLES  ಬೆಂಕಿ ಅನಾಹುತ : ಸುಟ್ಟು ಕರಕಲಾದ ಭತ್ತದ ಗೊಣವೆ

ಅಧ್ಯಕ್ಷತೆಯನ್ನು ಎನ್.ಎಸ್. ಹೆಗ್ಡೆ ಅಧ್ಯಕ್ಷರು ವಕೀಲರ ಸಂಘ ಕುಮಟಾ ವಹಿಸಿದ್ದರು ಹಾಗೇ ವೇದಿಕೆಯಲ್ಲಿ ಶ್ರೀ ಮಂಜುನಾಥ್. ಎಚ್. ನಾಯ್ಕ ಸಹಾಯಕ ಸರ್ಕಾರಿ ಅಭಿಯೋಜಕರು, ದೇವಗಿರಿ ಗ್ರಾ.ಪಂ ಅಧ್ಯಕ್ಷರಾದ ಸುರೇಶ್. ಟಿ. ನಾಯ್ಕ್ ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಆನಂದು ಶಾನಭಾಗ. ಕೋಶಾಧ್ಯಕ್ಷರಾದ ನಾಗರಾಜ ಶೇಟ್,ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕರಾದ ಶ್ರೀಮತಿ ಲಕ್ಷ್ಮೀ ಕಸ್ಮಾಡಿ.ದಿನಕರ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಜಗದೀಶ ಗುನಗಾ,ಗ್ರಾ.ಪಂ ಪಿಡಿಒ ಶ್ರೀ ವಿನಯ್ ಕುಮಾರ್ ನಾಯ್ಕ್, ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ರಮಾ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ವಾರ್ಷಿಕ ಕ್ರೀಡಾಕೂಟ 2020

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶ್ರೀಮತಿ ರಾಘವಿ ನಾಯಕ್ ರವರು ಮಹಿಳೆಯರಿಗೆ ಸಂಬಂಧಿಸಿದ ಕಾನೂನಿನ ಕುರಿತು ಮಾಹಿತಿ ನೀಡಿದರು. ಹಾಗೆ ಮತ್ತೋರ್ವ ಉಪನ್ಯಾಸಕರಾದ ಶ್ರೀ ಎಂ. ಎಸ್. ಭಟ್ ರವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ಮಾಹಿತಿ ನೀಡಿದರು..ಕಾರ್ಯಕ್ರಮದಲ್ಲಿ ಜನತಾ ವಿದ್ಯಾಲಯ ಮತ್ತು ದಿನಕರ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಊರ ನಾಗರಿಕರು ಹಾಜರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿಯರಾದ ಪ್ರತಿಭಾ ನಾಯ್ಕ ನಿರೂಪಿಸಿದರು, ಪ್ರತಿಭಾ ಭಾಗವತ್ ಸ್ವಾಗತಿಸಿದರು, ಶ್ರೀಮತಿ ರಮಾ ಭಟ್ಟ ವಂದಿಸಿದರು .