ಮೇಷ ರಾಶಿ
ಉತ್ತಮ ಆರೋಗ್ಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮನ್ನು ಸಕ್ರಿಯಗೊಳಿಸುತ್ತದೆ. ನೀವು ಸ್ವಲ್ಪ ಹೆಚ್ಚುವರಿ ಹಣ ಮಾಡಲು ಯೋಜಿಸುತ್ತದ್ದಲ್ಲಿ ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮೇಲೆ ನಿಮ್ಮ ಅಭಿಪ್ರಾಯ ಹೇರುವುದು ಅವರನ್ನು ಅನಗತ್ಯವಾಗಿ ಸಿಟ್ಟಾಗಿಸಬಹುದಾದ್ದರಿಂದ ಅವರಿಗೆ ಒತ್ತಾಯ ಮಾಡಬೇಡಿ. ಡೇಟ್ ಕಾರ್ಯಕ್ರಮ ವಿಫಲವಾಗಬಹುದಾದ್ದರಿಂದ ನಿರಾಶೆಯಾಗಬಹುದು. ನೀವು ಕಷ್ಟಕರವೆಂದು ತೋರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗಿರುವ ಸಂಪರ್ಕಗಳನ್ನು ಬಳಸಬೇಕಾಗುತ್ತದೆ. ಇಂದು ನೀವು ನಿಮ್ಮ ಬುದ್ಧಿಯನ್ನು ಪರೀಕ್ಷಿಸುತ್ತೀರಿ -ನಿಮ್ಮಲ್ಲಿ ಕೆಲವರು ಚದುರಂಗ – ಪದಬಂಧ ಆಡುತ್ತೀರಿ ಹಾಗೂ ಇತರರು ಕಥೆ- ಕವನ ಬರೆಯುತ್ತೀರಿ ಹಾಗೂ ಕೆಲವರಿಗೆ ಇದು ಭವಿಷ್ಯದ ಯೋಜನೆಗಳಿಗೂ ಸಹಾಯವಾಗುತ್ತದೆ. ಸಂಬಂಧಿಕರಿಂದಾಗಿ ವ್ಯಾಜ್ಯವುಂಟಾಗುವ ಸಾಧ್ಯತೆಯಿದೆ, ಆದರೆ ಕೊನೆಯಲ್ಲಿ ಎಲ್ಲವೂ ಸುಂದರವಾಗಿಯೇ ಕೊನೆಗೊಳ್ಳುತ್ತದೆ.
ವೃಷಭ ರಾಶಿ
ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮ್ಮ ನಡೆಯಲ್ಲಿ ಉದಾರ ಮನೋಭಾವ ಹೊಂದಿರಿ ಮತ್ತು ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಉತ್ತಮವಾದ ಪ್ರೀತಿಯ ಕ್ಷಣಗಳನ್ನು ಕಳೆಯಿರಿ. ಇಂದು ನಿಮ್ಮ ಪ್ರಿಯತಮೆ ನಿಮ್ಮ ಸಜೀವ ದೇವತೆಯಾಗಲಿದ್ದಾಳೆ; ಈ ಕ್ಷಣಗಳನ್ನು ಆನಂದಿಸಿ. ಕೆಲಸದಲ್ಲಿ ಮತ್ತು ಮನೆಯಲ್ಲಿ ಒತ್ತಡ ನಿಮ್ಮ ಸಹನೆಯನ್ನು ಪರೀಕ್ಷಿಸಬಹುದು. ಹೆಚ್ಚಿನ ವಿಷಯಗಳು ನೀವು ಬಯಸಿದಂತೆ ಅಗುವ –ಒಂದು ಉಜ್ವಲವಾದ ಹಾಸ್ಯದಿಂದ ತುಂಬಿದ ದಿನ. ಇಂದು, ನಿಮ್ಮ ಸಂಗಾತಿಯು ಪ್ರಪಂಚದಲ್ಲಿ ನೀವೊಬ್ಬರೇ ಇರುವ ಹಾಗೇ ನಡೆದುಕೊಳ್ಳುತ್ತಾರೆ.
ಮಿಥುನ ರಾಶಿ
ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡಲು ನಿಮ್ಮ ಚೈತನ್ಯವನ್ನು ಬಳಸಿ. ಲೋಕೋಪಕಾರಕ್ಕಾಗಲ್ಲದಿದ್ದಲ್ಲಿ ಈ ನಶ್ವರ ದೇಹದ ಉಪಯೋಗವಾದರೂ ಏನು. ಗಡಿಬಿಡಯ ನಿರ್ಧಾರಗಳನ್ನು ಕೈಗೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ. ಪತ್ನಿಯೊಂದಿಗೆ ಶಾಪಿಂಗ್ ಅನ್ನು ಅಪಾರವಾಗಿ ಆನಂದಿಸುತ್ತೀರಿ. ಇದು ನಿಮ್ಮ ನಡುವಿನ ತಿಳುವಳಿಕೆಯನ್ನೂ ಹೆಚ್ಚಿಸುತ್ತದೆ. ಈ ದಿನ ನಿಮ್ಮ ಪ್ರೀತಿ ಜೀವನದ ವಿಚಾರದಲ್ಲಿ ಅಸಾಧಾರಣವಾಗಿದೆ. ಪ್ರೀತಿ ಮಾಡುತ್ತಿರಿ. ನಿಮ್ಮ ಗುರಿಗಳನ್ನು ಬೆನ್ನತ್ತಲು ಒಳ್ಳೆಯ ದಿನ. ಅವುಗಳನ್ನು ಮುಂಚಿತವಾಗಿ ಸಾಧಿಸಲು ಪಟ್ಟುಬಿಡದೆ ಕೆಲಸ ಮಾಡಲು ನಿಮ್ಮ ದೇಹವನ್ನು ರಿಚಾರ್ಜ್ ಮಾಡಿ. ಈ ವಿಷಯದಲ್ಲಿ ನೀವು ನಿಮ್ಮ ಸ್ನೇಹಿತರ ಸಹಾಯ ತೆಗೆದುಕೊಳ್ಳಬಹುದು. ಇದು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ವೈವಾಹಿಕ ಜೀವನವು ಅನೇಕ ಪ್ರಯೋಜನಗಳನ್ನು ಹೊಂದಿರುತ್ತದೆ, ಮತ್ತು ನೀವು ಇಂದು ಅವೆಲ್ಲವನ್ನೂ ಅನುಭವಿಸುತ್ತೀರಿ.
ಕರ್ಕ ರಾಶಿ
ನಿಮ್ಮ ದೈಹಿಕ ಬಲವನ್ನು ನಿರ್ವಹಿಸಲು ನೀವು ಕ್ರೀಡೆಯಲ್ಲಿ ಸಮಯ ಕಳೆಯುವ ಸಾಧ್ಯತೆಗಳಿವೆ. ತರಾತುರಿಯಲ್ಲಿ ಹೂಡಿಕೆಗಳನ್ನು ಮಾಡಬೇಡಿ – ನೀವು ಎಲ್ಲಾ ಸಾಧ್ಯವಿರುವ ಕೋನಗಳಿಂದ ಹೂಡಿಕೆಯನ್ನು ಪರಿಶೀಲಿಸದೇ ಹೋದರೆ ನಷ್ಟ ಖಚಿತ. ಸಂಗಾತಿ ಮತ್ತು ಮಕ್ಕಳು ಹೆಚ್ಚುವರಿ ಪ್ರೀತಿ ಮತ್ತು ಕಾಳಜಿ ತೋರಿಸುತ್ತಾರೆ. ಒಬ್ಬ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳನ್ನು ನಿರ್ವಹಿಸುವಾಗ ಜಾಣತನದ ಅಗತ್ಯವಿದೆ. ಧರ್ಮಕಾರ್ಯಗಳು / ಹವನಗಳು / ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳಲಾಗುವುದು. ನಿಮ್ಮ ಸಂಗಾತಿಯು ಇಂದು ನಿಮ್ಮನ್ನು ಸಂತೋಷಗೊಳಿಸುವಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆ.
ಸಿಂಹ ರಾಶಿ
ನಿಮ್ಮ ಭಯವನ್ನು ಗುಣಪಡಿಸಲು ಇದು ಒಳ್ಳೆಯ ಸಮಯ. ಇದು ಭೌತಿಕ ಚೈತನ್ಯವನ್ನು ಕಡಿಮೆ ಮಾಡುವುದಲ್ಲದೇ ಜೀವಿತಾವಧಿಯನ್ನೂ ಕಡಿಮೆ ಮಾಡುತ್ತದೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ. ನೀವು ಎಂದಾದರೂ ಶುಂಠಿ ಮತ್ತು ಗುಲಾಬಿಗಳ ಚಾಕೋಲೇಟ್ ಅನ್ನು ಆಘ್ರಾಣಿಸಿದ್ದೀರೇ? ನಿಮ್ಮ ಪ್ರೇಮ ಜೀವನ ಇಂದು ಈ ರೀತಿಯಾಗಿರುತ್ತದೆ. ಬಿಸಿನೆಸ್ ಮೀಟಿಂಗ್ಗಳಲ್ಲಿ ನೇರ ಮಾತಿನವರೂ ಮತ್ತು ಭಾವನಾತ್ಮಕರೂ ಆಗಿರಬೇಡಿ. ನಿಮ್ಮ ಮಾತಿನ ಮೇಲೆ ನಿಯಂತ್ರಣವಿಲ್ಲದಿದ್ದಲ್ಲಿ ನೀವು ಸುಲಭವಾಗಿ ನಿಮ್ಮ ಖ್ಯಾತಿಗೆ ಧಕ್ಕೆ ತಂದುಕೊಳ್ಳಬಹುದು. ನಿಮ್ಮ ಆಯಸ್ಕಾಂತೀಯ- ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ ಹೃದಯಗಳನ್ನು ಸೆರೆಹಿಡಿಯುತ್ತದೆ. ಕಣ್ಣುಗಳು ಎಲ್ಲವನ್ನೂ ಹೇಳುತ್ತವೆ, ಮತ್ತು ನೀವು ಇಂದು ನಿಮ್ಮ ಸಂಗಾತಿಯ ಜೊತೆ ಕಣ್ಣಿನಲ್ಲೇ ಭಾವನಾತ್ಮಕವಾಗಿ ಮಾತನಾಡುತ್ತೀರಿ.
ಕನ್ಯಾ ರಾಶಿ
ನೀವು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಒಂದು ದಿನ. ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ತೈಲದಿಂದ ನಿಮ್ಮ ದೇಹಕ್ಕೆ ಮಸಾಜ್ ಮಾಡಿ. ನಿಮ್ಮ ಸಮರ್ಪಣೆ ಮತ್ತು ಶ್ರಮವನ್ನು ಗಮನಿಸಲಾಗುತ್ತದೆ ಮತ್ತು ಇಂದು ನಿಮಗೆ ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ. ಕುಟುಂಬ ಸದಸ್ಯರಿಗೆ ಸಹಾಯ ಮಾಡಲು ಮುಕ್ತ ಸಮಯದ ಲಾಭ ತೆಗೆದುಕೊಳ್ಳಿ. ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ – ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷ ತರುತ್ತಾರೆ. ನೀವು ಪ್ರಮುಖ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಿ ವೃತ್ತಿಪರವಾಗಿ ಪ್ರಮುಖ ವಿಜಯಗಳನ್ನು ಸಾಧಿಸುತ್ತೀರಿ. ಸಮಸ್ಯೆಗಳನ್ನು ಹತ್ತಿಕ್ಕುವ ಮನಸ್ಸಿರುವವರೆಗೂ ಯಾವುದೂ ಅಸಾಧ್ಯವಲ್ಲ. ಇಂದು ನೀವು ವಿವಾಹದ ನಿಜವಾದ ಭಾವಪರವಶತೆಯನ್ನು ತಿಳಿಯುತ್ತೀರಿ.
ತುಲಾ ರಾಶಿ
ನಿಮ್ಮ ಇತರರನ್ನು ಶ್ಲಾಘಿಸುವ ಮೂಲಕ ಅವರ ಯಶಸ್ಸನ್ನು ಆನಂದಿಸುವ ಸಾಧ್ಯತೆಗಳಿವೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮಕ್ಕಳ ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಮಾಡಬಹುದು. ಇತರರ ಹಸ್ತಕ್ಷೇಪ ವ್ಯಾಜ್ಯವುಂಟುಮಾಡುತ್ತದೆ. ನಿಮ್ಮ ಶ್ರಮ ಕೆಲಸದಲ್ಲಿ ಇಂದು ಫಲ ನೀಡುತ್ತದೆ. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ನಿಮ್ಮ ಸಂಗಾತಿಯ ಬೇಡಿಕೆಗಳು ನಿಮಗೆ ಸ್ವಲ್ಪ ಒತ್ತಡವುಂಟುಮಾಡಬಹುದು.
ವೃಶ್ಚಿಕ ರಾಶಿ
ಇತರರ ವಿರುದ್ಧ ದ್ವೇಷ ಕಾರುವುದು ಮಾನಸಿಕ ಒತ್ತಡವನ್ನು ನೀಡುತ್ತದೆ. ಇವುಗಳು ಜೀವನವನ್ನು ವ್ಯರ್ಥಗೊಳಿಸುವುದರಿಂದ ಮತ್ತು ನಿಮ್ಮ ಸಾಮರ್ಥ್ಯವನ್ನು ಕೊಲ್ಲುವುದರಿಂದ ನೀವು ಈ ರೀತಿಯ ಆಲೋಚನೆಗಳನ್ನು ತಪ್ಪಿಸಬೇಕು. ದುಂದುಗಾರಿಕೆ ಮತ್ತು ಸಂಶಯಾಸ್ಪದವಾದ ಹಣಕಾಸು ಯೋಜನೆಗಳನ್ನು ತಪ್ಪಿಸಿ. ನಿಮ್ಮ ಕುಟುಂಬ ಸದಸ್ಯರು ಹೇಳಿದ್ದೆಲ್ಲವಕ್ಕೂ ನೀವು ಒಪ್ಪದಿರಬಹುದು – ಆದರೆ ನೀವು ಅವರ ಅನುಭವದಿಂದ ಕಲಿಯಲು ಪ್ರಯತ್ನಿಸಬೇಕು. ಇಂದು ಪ್ರೇಮನಿವೇದನೆ ತಿರುಗೇಟು ನೀಡಬಹುದಾದ್ದರಿಂದ ನಿಮ್ಮ ಸೋಲುಗಳಿಂದ ನೀವು ಪಾಠ ಕಲಿಯಬೇಕು ನೀವು ಒಂದು ದಿನದ ತಜೆಯ ಮೇಲೆ ಹೋಗುತ್ತಿದ್ದಲ್ಲಿ ಚಂತಿಸಬೇಡಿ – ವಿಷಯಗಳನ್ನು ನೀವಿಲ್ಲದಿರುವಾಗ ಚೆನ್ನಾಗಿಯೇ ಇರುತ್ತವೆ – ಯಾವುದೇ ವಿಚಿತ್ರ ಕಾರಣಕ್ಕಾಗಿ ಏನಾದರೂ ಸಮಸ್ಯೆ ಉಂಟಾದಲ್ಲಿ – ನೀವು ಹಿಂತಿರುಗಿದಾಗ ನೀವು ಅದನ್ನು ಸುಲಭವಾಗಿ ಬಗೆಹರಿಸಬಹುದು. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಸಂಗಾತಿಯ ಒಂದು ಕೆಲಸದ ಬಗ್ಗೆ ನಿಮಗೆ ಇರುಸುಮುರುಸಾಗಬಹುದು. ಆದರೆ ನಂತರ ನಿಮಗೆ ಇದು ಒಳ್ಳೆಯದಕ್ಕೇ ಆಯಿತೆಂದು ಅರಿವಾಗುತ್ತದೆ.
ಧನು ರಾಶಿ
ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ವೆಚ್ಚಗಳ ಮೇಲೆ ಮಿತಿ ಹೇರಿ. ನೀವು ನಿಮ್ಮ ದೈನಂದಿನ ಕಾರ್ಯಕ್ರಮಗಳಿಂದ ಬಿಡುವು ಮಾಡಿಕೊಂಡು ನಿಮ್ಮ ಸ್ನೇಹಿತರೊಂದಿಗೆ ಇಂದು ಹೊರಗೆ ಹೋಗಬೇಕು. ಪ್ರಣಯಕ್ಕೆ ಒಳ್ಳೆಯ ದಿನ. ನಿಮ್ಮ ಮೇಲಿನವರಿಗೆ ಇಂದು ನಿಮ್ಮ ಕೆಲಸದ ಗುಣಮಟ್ಟ ಒಳ್ಳೆಯ ಪ್ರಭಾವ ಬೀರಬಹುದು. ನಿಮ್ಮ ಸ್ಪರ್ಧಾತ್ಮಕ ಸ್ವಭಾವ ನೀವು ಪ್ರವೇಶಿಸುವ ಯಾವುದೇ ಸ್ಪರ್ಧೆಯಲ್ಲೂ ನಿಮ್ಮನ್ನು ಗೆಲ್ಲಿಸುತ್ತದೆ. ಇಂದು ನೀವು ವೈವಾಹಿಕ ಜೀವನದ ಭಾವಪರವಶತೆಯನ್ನು ಅನುಭವಿಸಲು ಸಾಕಷ್ಟು ಅವಕಾಶಗಳನ್ನು ಹೊಂದುತ್ತೀರಿ.
ಮಕರ ರಾಶಿ
ಇಂದು ನಿಮ್ಮ ವ್ಯಕ್ತಿತ್ವ ಒಂದು ಸುಗಂಧದಂತೆ ಕೆಲಸ ಮಾಡುತ್ತದೆ. ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ. ನಿಮ್ಮ ಪ್ರಿಯತಮೆ ಇಡೀ ದಿನ ನಿಮಗಾಗಿ ಪರಿತಪಿಸುತ್ತಾಳೆ. ಒಂದು ಅಚ್ಚರಿಯನ್ನು ಯೋಜಿಸಿ ಮತ್ತು ಇದನ್ನು ನಿಮ್ಮ ಜೀವನದ ಅತ್ಯಂತ ಸುಂದರ ದಿನವನ್ನಾಗಿ ಮಾಡಿ. ಆಕಾಶ ಪ್ರಕಾಶಮಾನವಾಗಿ ಕಾಣುತ್ತದೆ, ಹೂಗಳು ಹೆಚ್ಚು ವರ್ಣರಂಜಿತವಾಗಿ ತೋರುತ್ತದೆ, ನಿಮ್ಮ ಸುತ್ತಲೂ ಎಲ್ಲವೂ ಮಿನುಗುತ್ತದೆ; ಏಕೆಂದರೆ ನೀವು ಪ್ರೀತಿಯಲ್ಲಿದ್ದೀರಿ! ನೀವು ದಿನವನ್ನು ಅತ್ಯುತ್ತಮವಾಗಿಸಲು ನಿಮ್ಮ ಗುಪ್ತ ಗುಣಗಳನ್ನು ಬಳಸುತ್ತೀರಿ. ಸ್ಪರ್ಶ, ಚುಂಬನ, ಅಪ್ಪುಗೆಗಳು ವೈವಾಹಿಕ ಜೀವನದಲ್ಲಿ ಬಹಳ ವಿಶೇಷ ಸ್ಥಾನವನ್ನು ಹೊಂದಿರುತ್ತವೆ. ನೀವು ಅವುಗಳನ್ನು ಅನುಭವಿಸಲಿದ್ದೀರಿ.
ಕುಂಭ ರಾಶಿ
ನೀವು ಪರಿಸ್ಥಿತಿಯ ನಿಯಂತ್ರಣ ಹೊಂದುತ್ತಿದ್ದಂತೆ ನಿಮ್ಮ ಆತಂಕ ಕಣ್ಮರೆಯಾಗುತ್ತದೆ. ಇದು ಧೈರ್ಯದ ಮೊದಲ ಸ್ಪರ್ಶದಲ್ಲಿ ಕುಸಿದುಹೋಗುವ ಸಾಬೂನಿನ ಗುಳ್ಳೆಯಷ್ಟೇ ಗಟ್ಟಿಯೆಂದು ನೀವು ಅರ್ಥ ಮಾಡಿಕೊಳ್ಳುತ್ತೀರಿ. ಇಂದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳು ದೊರಕುತ್ತವೆ – ಯಾವುದೇ ಬದ್ಧತೆಗೊಳಗಾಗುವ ಮುನ್ನ ಸಾಧಕ ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಇಂದು ನೀವು ಹಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸಬೇಕು. ಪ್ರೀತಿಪಾತ್ರರಲ್ಲದೇ ನಿಮ್ಮ ಸಮಯ ಕೊಲ್ಲುವುದು ಕಷ್ಟ. ನಿಮ್ಮ ಶ್ರಮ ಮತ್ತು ಸಮರ್ಪಣೆ ನಿಮ್ಮ ಪರವಾಗಿ ಮಾತನಾಡುತ್ತವೆ ಮತ್ತು ನಿಮಗೆ ವಿಶ್ವಾಸ ಮತ್ತು ಬೆಂಬಲ ಗಳಿಸುತ್ತವೆ. ಅನಕೂಲಕರ ಗ್ರಹಗಳು ಇಂದು ನೀವು ಸಂತೋಷ ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ. ಈ ದಿನ ವೈವಾಹಿಕ ಜೀವನದಲ್ಲಿನ ಒಂದು ಕಠಿಣ ಹಂತದ ನಂತರ ನಿಮಗೆ ಬಿಡುವನ್ನು ಒದಗಿಸುತ್ತದೆ.
ಮೀನ ರಾಶಿ
ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ – ನೀವೇನೇ ಮಾಡಿದರೂ ಸಾಮಾನ್ಯವಾಗಿ ನೀವು ತೆಗೆದುಕೊಳ್ಳುವ ಅರ್ಧ ಸಮಯದಲ್ಲಿ ಅದನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ – ಇವು ನಿಮ್ಮ ಮನಸ್ಸಿನ ಮೇಲೆ ಒತ್ತಡ ತರುತ್ತವೆ. ಇಂದು ನಿಮ್ಮ ಪ್ರಿಯತಮೆ ಉಡುಗೊರೆಗಳ ಜೊತೆ ನಿಮ್ಮ ಸ್ವಲ್ಪ ಸಮಯವನ್ನೂ ಅಪೇಕ್ಷಿಸಬಹುದು. ನೀವು ಕೆಲಸ ಮಾಡುವ ಬಗ್ಗೆ ಖಚಿತವಾಗಿಲ್ಲದಿದ್ದರೆ ಯಾವ ಭರವಸೆಯನ್ನೂ ನೀಡಬೇಡಿ. ಇಂದು ಜನರು ಹೊಗಳಿಕೆಗಳನ್ನು ನೀಡುತ್ತಾರೆ-ಇವುಗಳನ್ನು ನೀವು ಯಾವಾಗಲೂ ಕೇಳಬಯಸಿರುತ್ತೀರಿ. ಹಾಗೆ, ನೀವು ನಿಮ್ಮ ಸಂಗಾತಿಯ ಮೇಲೆ ಇಂದು ಬಹಳ ಹಣ ಖರ್ಚು ಮಾಡುವಂತೆ ತೋರುತ್ತದೆ, ಆದರೆ ಒಳ್ಳೆಯ ಸಮಯವನ್ನಂತೂ ಹೊಂದಿರುತ್ತೀರಿ.