ಶಿರಸಿ: ಚುನಾವಣಾ ಸಂದರ್ಭದಲ್ಲಿ ಅಕ್ರಮ ಹಣ ಸಾಗಾಟದ ಆರೋಪದ ಮೇಲೆ ಶಿರಸಿ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ವಿರುದ್ದ ದೂರು ದಾಖಲಾಗಿದೆ ಎಂದು ವರದಿಯಾಗಿದೆ.
ಆದಾಯ ತೆರಿಗೆ ಅಧಿಕಾರಿಗಳ ದೂರಿನ ಅನ್ವಯ ಆರ್ .ವಿ ದೇಶಪಾಂಡೆ ಆಪ್ತರಾಗಿ ಗುರುತಿಸಿಕೊಂಡಿದ್ದ ಭೀಮಣ್ಣ ನಾಯ್ಕ ವಿರುದ್ಧ ಶಿರಸಿಯ ಎ.ಸಿ ಈಶ್ವರ್ ಉಳ್ಳಾಗಡ್ಡಿ ರವರು ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಹಿಂದೆ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಆರ್.ವಿ ದೇಶಪಾಂಡೆ ಆಪ್ತರೊಬ್ಬರು ಬೆಂಗಳೂರಿನ ನೆಲಮಂಗಲ ಚೆಕ್ ಪೋಸ್ಟ್ ಹತ್ತಿರ ಹಣ ಕೊಂಡೊಯ್ಯುವಾಗ ತೆರಿಗೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದು ಈ ಸಂದರ್ಭದಲ್ಲಿ ೧.೨೨,೭೪,೦೦೦ ಕೋಟಿ ಹಣ ವಶ ಪಡಿಸಿಕೊಳ್ಳಲಾಗಿತ್ತು ಈ ವಿಷಯ ಆಗ ಸುದ್ದಿ ಮಾಡಿತ್ತು. ಆದರೆ ಈಗ ಆ ವಿಷಯ ಮತ್ತೆ ಎದ್ದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಭೀಮಣ್ಣ ಅವರಿಗೆ ಸೇರಿದ್ದ ಎಕ್ಸ್ ಯುವಿ-500 (ಕೆ.ಎ-15 ಎಂ-9374) ಯಲ್ಲಿ ಕೋಟಿ ಕೋಟಿ ಹಣ ಸಾಗಾಟ ಮಾಡಿದ್ದ ಆರೋಪ ಇವರ ಮೇಲಿದ್ದು ಇದೀಗ ಶಿರಸಿಯ ಎಸಿ ರವರು ಶಿರಸಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೧೭೧ /E/H ನಡಿ ಪ್ರಕರಣ ದಾಖಲಾಗಿದೆ.