ಕುಮಟಾ: ಇಲ್ಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯ ದೇವರಹಕ್ಕಲಿನಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿ ದೇವ ಸನ್ನಿಧಿಯಲ್ಲಿ
ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ ಸಾಂಗತ್ಯ ಪ್ರಸ್ತುತ ಶಿಖರ ಮಂಟಪಯುಕ್ತ ದೇವ ಮಂದಿರದ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ಈ ಕುರಿತು ಮಾಹಿತಿ ನೀಡಲು ಇಂದು ಪತ್ರಿಕಾಗೋಷ್ಠಿ ಕರೆಯಲಾಗಿತ್ತು.

d5bdb44d 727b 4de2 850d 2de072fe58c8


ಈ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಎಂ.ಬಿ.ಪೈ
ಜಯದೇವ ಬಳಗಂಡಿ, ಎನ್.ಆರ್.ಗಜು, ಅರುಣ ಮಣಕೀಕರ, ಮಂಜುನಾಥ ನಾಯ್ಕ , ಈಶ್ವರ ಭಟ್ಟ, ಕಿರಣ ಪ್ರಭು ಮುಂತಾದವರು ಹಾಜರಿದ್ದರು.

ಪುರಾಣಪ್ರಸಿದ್ಧ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಇತಿಹಾಸದಲ್ಲಿ ಚತುರ್ಥವೆನಿಸಿರುವ ಪ್ರಸ್ತುತ ಮುಖ್ಯ ಕಟ್ಟಡ ನಿರ್ಮಾಣಗೊಂಡು 75 ವರ್ಷ ತುಂಬಿದ  ಪ್ರಯುಕ್ತ ಈ ಸಾಲಿನ ವಾರ್ಷಿಕ ವರ್ಧಂತಿ ಉತ್ಸವದ ಸಂದರ್ಭದಲ್ಲಿ ಅಮೃತ ಮಹೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ.   ಮಾ.10 ರಿಂದ 16 ರ ವರೆಗೆ ಏಳು ದಿನಗಳ ಕಾಲ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

   ಈ ದೇವಾಲಯವು ಸುಮಾರು ಏಳೆಂಟು ಶತಮಾನಗಳ ಪವಾಡ ಸದೃಶ ಐತಿಹ್ಯವನ್ನು ಹೊಂದಿದ್ದು ಜಾತಿ-ಮತ ಭೇದವಿಲ್ಲದೇ ಎಲ್ಲ ಹಿಂದುಗಳ ಆರಾಧನಾ ಜಾಗೃತಿ ಶಕ್ತಿ ಪೀಠವಾಗಿದೆ. ಅನಾದಿಕಾಲದ ಶ್ರೀ ದೇವಿಯ ಶಿಲಾ ವಿಗ್ರಹಹವು ಜೀರ್ಣವಾದ ಹಿನ್ನೆಲೆಯಲ್ಲಿ ಶ್ರೀ ದೇವಿಯ ನವಮೂರ್ತಿಯ ಪುನರ್ ಪ್ರತಿಷ್ಠಾ ಮಹೋತ್ಸವವು ಮಾರ್ಚ 10, 1984 ರಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಪೀಠದ ಶ್ರೀ ತೋಟಕಾಚಾರ್ಯ ಪರಂಪರೆಯ ಶ್ರೀ ಸಂಸ್ಥಾನ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳವರ ಅಮೃತಹಸ್ತದಿಂದ ಜರುಗಿರುತ್ತದೆ.  ಜೀರ್ಣಾವಸ್ಥೆಯಲ್ಲಿದ್ದಾಗ, ಅಂದಿನ ಧರ್ಮದರ್ಶಿಗಳು ಭಕ್ತಜನರ ಮುಕ್ತ ಸಹಕಾರದಿಂದ ಸುಭದ್ರವಾದ ಹಾಗೂ ಜಿಲ್ಲೆಯಲ್ಲಿಯೇ ಪ್ರಪ್ರಥಮವಾದ ಸಿಮೆಂಟ್ ಕಾಂಕ್ರಿಟ್‍ದಿಂದ ಕೂಡಿದ ಶಿಖರ ಮಂಟಪ ಸಹಿತ ಸುಂದರ ಭವ್ಯ ದೇವಮಂದಿರವನ್ನು 1942 ರಲ್ಲಿ ನಿರ್ಮಿಸಿದ್ದರು.  ಈಗ ಅದಕ್ಕೆ ಅಮೃತ ಯೋಗಸಿದ್ಧಿಸಿದ್ದು ಆ ಆಚರೆಣೆಗೆ ಮುಹೂರ್ತ ಒದಗಿಬಂದಿದೆ.  

    ಆಸ್ತಿಕರ ಪಾಲಿನ ಆರಾಧ್ಯ ದೈವ ದೈತ್ಯ ಸಂಹಾರಿಣ  ಶ್ರೀ ಶಾಂತಿಕಾ ಪರಮೇಶ್ವರಿ ದೇವರಲ್ಲಿ ಮಹೋತ್ಸವದ ಸಮಯದಲ್ಲಿ ಸಂತರ್ಪಣೆ ಸೇವೆ, ಸರ್ವಾಲಂಕಾರ ಸಹಿತ ಸರ್ವ ಸೇವೆ, ಪಂಚಫಲ ಸಮರ್ಪಣ ಸಹಿತ ಪುಷ್ಪಾಲಂಕಾರ, ಉದಯಾಸ್ತಮಾನ,  ಸ್ವ ಹಸ್ತೇ ಕುಂಕುಮಾರ್ಚನೆ ಹಾಗೂ ಸಪ್ತಶತಿ ಪಾರಾಯಣದಂತಹ ಸೇವೆಗಳನ್ನು  ಅಲ್ಲದೇ ಎಡನೀರು ಮಠದ ಆರಾಧ್ಯ ದೇವರಾದ ಶ್ರೀ ದಕ್ಷಿಣಾಮೂರ್ತಿ ಶ್ರೀ ಗೋಪಾಕೃಷ್ಣ ದೇವರಲ್ಲಿ ಸರ್ವಸೇವೆ, ತುಳಸಿ ಅರ್ಚನೆ, ಕಾರ್ತಿಕ ಪೂಜೆ ಮತ್ತು ಪಾದ್ಯಪೂಜೆ ಇತ್ಯಾದಿಗಳನ್ನು ಮಾಡಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳೆಲ್ಲರೂ ವರ್ಧಂತಿ ಉತ್ಸವದ ಸಂದರ್ಭದಲ್ಲಿ ಉಪಸ್ಥಿತರಿದ್ದು ದೇವರ ಅನುಗೃಹಕ್ಕೆ ಪಾತ್ರರಾಗಬೇಕೆಂದು ದೇವಳದ ವಹಿವಾಟ ಮೊಕ್ತೇಸರರಾದ ಕೃಷ್ಣ ಬಾಬಾ ಪೈ ಅವರು ವಿನಂತಿಸಿಕೊಂಡಿದ್ದಾರೆ.

ಶಾಂತಿಕಾ ಪರಮೇಶ್ವರಿ ಅಮೃತ ಮಹೋತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಇಲ್ಲಿದೆ.

10/03/2019 ರವಿವಾರ
ಧಾರ್ಮಿಕ ಕಾರ್ಯಕ್ರಮಗಳು: ಬೆಳಿಗ್ಗೆ 8 ಗಂಟೆಯಿಂದ
ಗಣೇಶಪೂಜೆ, ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ, ಪುಣ್ಯಾಹ, ನಾಂದಿ, ಕೌತುಕ ಪೂಜೆ, ಋತ್ವಿಕ ವರಣ, ಮಧುಪರ್ಕ, ಸಭಾಪೂಜೆ, ನವಗ್ರಹ, ಸುದರ್ಶನ, ಅಘೋರಾಸ್ತ್ರ, ಪಾಶುಪತಾಸ್ತ್ರ, ನವಾರ್ಣವ, ಗಣಪತಿ ಜಪ, ಶತಚಂಡಿ ಪಾರಾಯಣ, ಚತುರ್‍ದ್ರವ್ಯಗಳಿಂದ ಅಥರ್ವಶೀರ್ಷ ಹವನ, ದೇವಿ ಪೂಜಾ, ಮಂಗಳಾರತಿ,
ಸಾಯಂಕಾಲ: 5.30 ರಿಂದ ಶಾಂತಿಪಾಠ, ರಾಕ್ಷೋಘ್ನ ಹವನ, ವಾಸ್ತು ಹವನ, ಬಲಿ, ಅಗ್ನಿ ಜನನ. ಮಂಗಳಾರತಿ, ಪ್ರಸಾದ ವಿತರಣೆ.

RELATED ARTICLES  ಅಂಕೋಲಾದಲ್ಲಿ ಗುಂಡೇಟಿನಿಂದ ಸಾವು: ಬೆಚ್ಚಿಬಿದ್ದ ಜನತೆ.

ಸಾಂಸ್ಕøತಿಕ ಕಾರ್ಯಕ್ರಮಗಳು:
ದಿನಾಂಕ: 10/03/2019, ರವಿವಾರ, ಸಂಜೆ 6.30 ರಿಂದ
“ನಾದ ಸಂಗಮ”: ಕುಮಟಾ ಶ್ರೀ ವೆಂಕಟರಮಣ ದೇವ ಮತ್ತು ಶ್ರೀ ಶಾಂತಿಕಾ ಪರಮೇಶ್ವರಿ ದೇವಳಗಳ ವಾದ್ಯವೃಂದದ, ಜಿಲ್ಲೆಯ ಪ್ರಖ್ಯಾತ ಸೆಕ್ಸೋಫೋನ್ ವಾದಕ ರಂಗರಾಜ ಪಿಳ್ಳೆ ಮತ್ತು ಸಂಗಡಿಗರಿಂದ ವಾದ್ಯ ಪ್ರಸ್ತುತಿ.
“ನೃತ್ಯಲಹರಿ”: ವಿದೂಷಿ ವಿಜೇತಾ ಭಂಡಾರಿ, ನೃತ್ಯ ಸ್ವರಕಲಾ ಟ್ರಸ್ಟ್, ಕುಮಟಾ ತಂಡದವರಿಂದ ಭರತನಾಟ್ಯ ಪ್ರಸ್ತುತಿ
“ಯಕ್ಷಸಂಭ್ರಮ”-ರಾಜ್ಯದ ಪ್ರಖ್ಯಾತ ಕಲಾವಿದರಿಂದ ಲವಕುಶ ಯಕ್ಷಗಾನ:ಪ್ರಸ್ತುತಿ_ ಶಾಂತಿಕಾ ಯಕ್ಷಮಿತ್ರ ಬಳಗ, ಕುಮಟಾ

11/03/2019 ಸೋಮವಾರ
ಧಾರ್ಮಿಕ ಕಾರ್ಯಕ್ರಮಗಳು: ಬೆಳಿಗ್ಗೆ 8 ಗಂಟೆಯಿಂದ
ಶ್ರೀ ಗಣೇಶಪೂಜೆ, ಅಧಿವಾಸ ಹೋಮ, ಸ್ಥಾನಶುದ್ಧಿ, ಬಿಂಬಶುದ್ಧಿ ಹವನ, ಮೃತ್ಯುಂಜಯ ಹವನ, ಪ್ರಾಯಶ್ಚಿತ್ತ ಹವನ, ಶಾಂತಿ ಶಕ್ತಿ ಹವನ, ಶತಚಂಡಿ ಪಾರಾಯಣ, ಮಂಗಳಾರತಿ, ಪ್ರಸಾದ ವಿತರಣ.
ಸಾಯಂಕಾಲ: 5.30 ರಿಂದ ವೇದ ಘೋಷ, ಸಹಸ್ರಸ್ನಪನ, ಕಲಶ ಸ್ಥಾಪನಾ ಪೂಜಾ,. ಮಂಗಳಾರತಿ, ಪ್ರಸಾದ ವಿತರಣೆ.
ಸಾಂಸ್ಕøತಿಕ ಕಾರ್ಯಕ್ರಮಗಳು:
ದಿನಾಂಕ: 11/03/2019, ಸೋಮವಾರ, ಸಂಜೆ 6.30 ರಿಂದ
ಧರ್ಮಾಚರಣೆ ಮತ್ತು ಆಧ್ಯಾತ್ಮಿಕತೆ: ವಿದ್ವಾನ್  ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ ಪ್ರವಚನ
”ಭರತನಾಟ್ಯ ಪ್ರಸ್ತುತಿ’: ಶ್ರೇಯಾ ಎಂ.ಪೈ ಅವರಿಂದ
“ಸಂಗೀತ ಲಹರಿ”: ರಾಷ್ಟ್ರೀಯ ಮಟ್ಟದ  &ಟವಿ ಚ್ಯಾನೆಲ್ ನ ಲವ್ ಮೈ ಇಂಡಿಯಾ ಕಿಡ್ಸ್-2018 ರಲ್ಲಿ ವಿಜೇತ ಕರ್ನಾಟಕದ ಹೆಮ್ಮೆಯ ಬಾಲ ಕಲಾವಿದ ಗುರುಕಿರಣ ಹೆಗಡೆ, ಬೆಂಗಳೂರು ಮತ್ತು ಸಂಗಡಿಗರಿಂದ ಭಕ್ತಿ ಸಂಗೀತ ಪ್ರಸ್ತುತಿ.
ಸಾಯಂಕಾಲ: 5.30 ರಿಂದ ಶಾಂತಿಪಾಠ, ಕುಂಕುಮಾರ್ಚನೆ, ದುರ್ಗಾ ನಮಸ್ಕಾರ, ಮಂಗಳಾರತಿ, ಪ್ರಸಾದ ವಿತರಣೆ.
ರಾತ್ರಿ 9.30 ರಿಂದ: ತೆಂಕುತಿಟ್ಟು ಯಕ್ಷಗಾನ:  ಶ್ರೀ ಗೋಪಾಲಕೃಷ್ಣ ಯಕ್ಗಾನ ಕಲಾಮಂಡಳಿ, ಎಡನೀರು ಇವರಿಂದ

ಧಾರ್ಮಿಕ ಕಾರ್ಯಕ್ರಮಗಳು: 12/03/2019 ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ
ಶ್ರೀ ಗಣೇಶಪೂಜೆ, ಪುಣ್ಯಾಹ, ಅಧಿವಾಸ ಹೋಮ, ತತ್ವಕಲಾ, ಪ್ರಾಣ ಪ್ರತಿಷ್ಠಾ ಹವನ, ಸ್ನಪನ ಹವನ, ರುದ್ರಹೋಮ, ಸರ್ಪಹೋಮ, ಚಂಡೀ ಪಾರಾಯಣ, ನವಾಕ್ಷರೀ ಜಪ, ಸಹಸ್ರ ಕುಂಭಾಭಿಷೇಕ, ಮಂಗಳಾರತಿ, ಪ್ರಸಾದ ವಿತರಣೆ.

ದಿನಾಂಕ: 12/03/2019, ಮಂಗಳ ವಾರ, ಸಂಜೆ 6.30 ರಿಂದ
ತಬಲಾ ನಾದ: ಬಾಬಾ ಪ್ರಲ್ಹಾದ ಎಂ.ಪೈ, ಕುಮಟಾ ಇವರಿಂದ ಕರ್ಣರಂಜಿತ ತಬಲಾ ಸೋಲೊ ಪ್ರಸ್ತುತಿ
ಸಂಗೀತ ವೈವಿದ್ಯ: ಕರ್ನಾಟದಕಲ್ಲಿ ಖ್ಯಾತಿ ಪಡೆದ ಝೇಂಕಾರ ಮೆಲೋಡಿಸ್, ಭಟ್ಕಳ ಅವರಿಂದ ವೈವಿಧ್ಯಮಯ ವಿನೂತನ ಸಂಗೀತ ಪ್ರಸ್ತುತಿ
ಧಾರ್ಮಿಕ ಕಾರ್ಯಕ್ರಮಗಳು: 13/03/2019 ಬುಧವಾರ ಬೆಳಿಗ್ಗೆ 8 ಗಂಟೆಯಿಂದಶ್ರೀ ಗಣೇಶಪೂಜೆ, ಪುಣ್ಯಾಹ, ಅಧಿವಾಸ ಹೋಮ, ಚಂಡೀ ಪಾರಾಯಣ, ನವಗ್ರಹ ಹವನ, ದುರ್ಗಾ ಹವನ, ಶ್ರೀ ಲಲಿತಾ ತ್ರಿಪುರ ಸುಂದರೀ ಹವನ, ಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿತರಣೆ.  ಸಾಯಂಕಾಲ: 5.30 ರಿಂದ ವೇದ ಘೋಷ, ಶ್ರೀ ದೇವಿಯ ಪ್ರಾಕಾರ ಉತ್ಸವ ಅಷ್ಠಾವಧಾನ ಸೇವೆ, ಭಜನೆ. ಮಂಗಳಾರತಿ, ಪ್ರಸಾದ ವಿತರಣೆ.

ದಿನಾಂಕ:13/03/2019, ಬುಧವಾರ,
ಬೆಳಿಗ್ಗೆ 8 ಗಂಟೆಯಿಂದ:ಶ್ರೀ ಗಣೇಶ ಪೂಜಾ, ಪುಣ್ಯಾಹ, ಅಧಿವಾಸ ಹೋಮ, ಚಂಡೀ ಪಾರಾಯಣ, ನವಗ್ರಹ ಹವನ, ದುರ್ಗಾಹವನ, ಶ್ರೀ ಲಲಿತಾ ತ್ರಿಪುರ ಸುಂದರೀ ಹವನ, ಪುರ್ಣಾಹುತಿ, ಮಂಗಳಾರತಿ, ಪ್ರಸಾದ ವಿತರಣ.
ಸಂಜೆ 5.30 ರಿಂದ ವೇದಘೋಷ, ಭಜನೆ
ಸಂಜೆ 6.30 ರಿಂದ ಬಾನ್ಸುರಿ ವಾದನ: ಹರೀಶ್ ಆರ್.ಪ್ರಭು, ಕುಮಟಾ ಅವರಿಂದ ಸುಶ್ರಾವ್ಯ ಕೊಳಲು ವಾದನ
ಶ್ರೀ ಶಾಂತಿಕಾ ವಿಜಯ: ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ಆಕರ್ಷಕ ಕಥಾ ನೃತ್ಯರೂಪಕ-ರೋಟರಿ ನಾದಶ್ರೀ ಕಲಾ ಕೇಂದ್ರ, ಕುಮಟಾದ ವಿದ್ಯಾರ್ಥಿಗಳು ಮತ್ತು ಅತಿಥಿಕಲಾವಿದರಿಂದ( ನಿರ್ದೇಶನ: ವಿದೂಷಿ ನಯನಾ ಪ್ರಸನ್ನ ಮತ್ತು   ರೂಪಾ ಶ್ರೀಕಾಂತ ಪ್ರಭು, ಗೀತ ರೂಪಕ ರಚನೆ: ಪ್ರೊ.ಟಿ.ಜಿ.ಭಟ್ಟ, ಹಾಸಣಗಿ, ಸಂಗೀತ ಸಂಯೋಜನೆ: ಗೌರೀಶ ಯಾಜಿ ಮತ್ತು ಲಕ್ಷ್ಮೀ ಹೆಗಡೆ)

RELATED ARTICLES  ಶ್ರೀ ಯಶೋಧರ ನಾಯ್ಕ ಟ್ರಸ್ಟ್ ನಿಂದ ಆರೋಗ್ಯ ಮಾಹಿತಿ ಕಾರ್ಯಕ್ರಮ

ದಿನಾಂಕ: 14/3/2019: ಬೆಳಿಗ್ಗೆ 8 ಗಂಟೆಯಿಂದ
ಶ್ರೀ ಗಣೇಶಪೂಜೆ, ಪುಣ್ಯಾಹ, ಅಧಿವಾಸ ಹೋಮ, ನವಗ್ರಹ ಹೋಮ, ನವಾರ್ಣವ ಹೋಮ, ಶತಚಂಡಿ ಹೋಮ, ಅವಿಶಿಷ್ಟ ಹವನ, ಕೂಷ್ಮಾಂಡ ಬಲಿಪ್ರದಾನ. ಕೂಷ್ಮಾಂಡ ಬಲಿಪ್ರದಾನ, ಮಧ್ಯಾಹ್ನ 11.30 ಕ್ಕೆ ಸರಿಯಾಗಿ ಪೂರ್ಣಾಹುತಿ, ಸುಹಾಸಿನಿ-ಕುಮಾರಿಕಾ ಪೂಜಾ, ಮಹಾ ಕಲಶಾಭಿಷೇಕ, ಮಹಾಪೂಜಾ, ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣ, ಮಹಾ ಅನ್ನಸಂತರ್ಪಣೆ, ಆಶೀರ್ವಾದ ಗ್ರಹಣ, ಕರ್ಮ ಸಮಾಪ್ತಿ.
ಸಾಯಂಕಾಲ 5.30 ರಿಂದ ವೇದಘೋಷ, ಶ್ರೀದೇವಿಯ ಪ್ರಾಕಾರ ಉತ್ಸವ ಅಷ್ಠಾವಧನ ಸೇವೆ, ಭಜನೆ, ಮಂಗಳಾರತಿ, ಪ್ರಸಾದ ವಿತರಣ.
ಸಂಜೆ:6.30 ರಿಂದ: ನೃತ್ಯ ವೈಭವ: ಭರತನಾಟ್ಯ ಕಲಾವಿದೆ ಎಲ್.ಕೆ.ವಾಸವಿ, ಬೆಂಗಳೂರು ಇವರಿಂದ ಆಕರ್ಷಕ ನೃತ್ಯ ಪ್ರಸ್ತುತಿ
ಭಕ್ತಿಗಾನ:ಪ.ಪೂ.ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ, ಎಡನೀರು ಮಠ ರವರಿಂದ ಸುಶ್ರಾವ್ಯ ಸಂಗೀತ ಕಾರ್ಯಕ್ರಮ

ದಿನಾಂಕ:15/03/2019, ಶುಕ್ರವಾರ 
ಬೆಳಿಗ್ಗೆ 8 ಗಂಟೆಯಿಂದ
ಶ್ರೀ ಗಣೇಶಪೂಜೆ, ಸಂಕಲ್ಪ, ಪುಣ್ಯಾಹ, ನವಗ್ರಹ ಹೋಮ, ಶ್ರೀ ಲಕ್ಷ್ಮೀನಾರಾಯಣ ಹೋಮ, ಪುರುಷ ಸೂಕ್ತ,  ಶ್ರೀಸೂಕ್ತ ಹೋಮ,  ಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿತರಣ. 
ದಿನಾಂಕ:15/03/2019, ಶುಕ್ರವಾರ, ಸಂಜೆ 6.30 ರಿಂದ
ಗುರುವಂದನಾ ಸಮಾರಂಭ: ಎಡನೀರು ಮಠಾಧೀಶ ಪ.ಪೂ.ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರಿಗೆ ಗೌರವ –ವಂದನೆ, ಸನ್ಮಾನ ಕಾರ್ಯಕ್ರಮ, ಲಯ-ಲಾವಣ್ಯ: ಖ್ಯಾತ ಕಲಾವಿದ ವಿದ್ಯಾನ್ ಶ್ರೀ ಅನಂತಕೃಷ್ಣ ಶರ್ಮಾ ಬೆಂಗಳೂರು ಅವರ ಮಾರ್ಗದರ್ಶನದಲ್ಲಿ ಅನುಭವಿ ಯುವ ವಾದ್ಯ ಕಲಾವಿದರಿಂದ ಕರ್ಣರಂಜಿತ ವಿಶಿಷ್ಠ ತಾಳ-ವಾದ್ಯಗಳ ಪ್ರಸ್ತುತಿ

ದಿನಾಂಕ: 16/3/2019: ಬೆಳಿಗ್ಗೆ 8 ಗಂಟೆಯಿಂದ
ಶ್ರೀ ಗಣೇಶಪೂಜೆ, ಶ್ರೀ ಸತ್ಯನಾರಾಯಣ ವ್ರತ, ಸಂಕಲ್ಪ-ಪೂಜಾ, ಮಂಗಳಾರತಿ, ಪ್ರಸಾದ ವಿತರಣ. ಸಂಜೆ 5.30 ರಿಂದ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ರಜತ ರಥಾರೂಢ ನಗರೋತ್ಸವ, ಉತ್ಸವದ ನಂತರ ಅಷ್ಠಾವಧಾನ ಸೇವೆ, ಮಂಗಳಾರತಿ, ಪ್ರಾರ್ಥನೆ, ಪ್ರಸಾದ ವಿತರಣ.
ಬೆಳಿಗ್ಗೆ 10 ಗಂಟೆಯಿಂದ: ಶ್ರೀ ಸಂಸ್ಥಾನ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇ ಸ್ವಾಮೀಜಿ ಮತ್ತು ಶಿಷ್ಯಸ್ವಾಮಿ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶುಭಾಗಮನ, ಸಾನಿಧ್ಯ.
ದಿನಾಂಕ:16/03/2019, ಶನಿವಾರ, ಸಂಜೆ 6.30 ರಿಂದ
ಭಕ್ತಿ ಸಂಗೀತ:ಖ್ಯಾತ ಹಾಡುಗಾರ ಶ್ರೀ ಶ್ರೀಕಾಂತ ಪಟಗಾರ ಅವರ ನೇತೃತ್ವದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ. ಕುಮಟಾದವರಿಂದ ಅಭಂಗ-ದಾಸವಾಣ  ಪ್ರಸ್ತುತಿ
ಯಕ್ಷವೈಭವ: ಸಿರಿಕಲಾ ಮೇಳ (ರಿ) ಬೆಂಗಳೂರು ಮತ್ತು ಅತಿಥಿ ಕಲಾವಿರಿಂದ ಕಾಳಿದಾಸ ಯಕ್ಷಗಾನ (ಸಂಯೋಜನೆ: ಶ್ರೀ ಸುರೇಶ ಹೆಗಡೆ ಕಡತೋಕಾ)