ಬ್ಯೆಂದೂರು: ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದಿರೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕಾವ್ಯಶ್ರೀ ಅವರ ನಿಗೂಡ ಸಾವಿನ ತನಿಖೆಗೆ ಆಗ್ರಹಿಸಿ ನಾವುಂದದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾವ್ಯಶ್ರೀ ಸಾವಿನ ಬಗ್ಗೆ ಯಾವುದೇ ಕಾರಣ ದೊರಕಿರುವುದಿಲ್ಲ.ಕಾವ್ಯಶ್ರೀ ನಿಗೂಢ ಸಾವಿನ ಬಗ್ಗೆ ಕುಲಂಕುಶವಾದ ತನಿಖೆಯಾಗಬೇಕು ಹಾಗೂ ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ವಿದ್ಯಾರ್ಥಿಗಳು ನಾವುಂದ ಪಂಚಾಯತ್ ಅಧ್ಯಕ್ಷರಿಗೆ  ಮನವಿ ಸಲ್ಲಿಸಿದರು.ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ ಮನವಿ ಸ್ವೀಕರಿಸಿದರು. ಅನೇಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

RELATED ARTICLES  ಕುಮಟಾದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಉತ್ತಮ‌ ಸ್ಪಂದನೆ: ಕ್ಷೇತ್ರದಲ್ಲಿ ಬಿರುಸಿನ ಪ್ರಚಾರಕ್ಕಿಳಿದ ಶಾರದಾ ಶೆಟ್ಟಿ