ಸಿದ್ದಾಪುರ: ತಾಲೂಕಿನ ಪ್ರಸಿದ್ಬುರುಡೆ ಫಾಲ್ಸಗೆ ಪ್ರವಾಸಕ್ಕೆ ತೆರಳಿದ್ದ ಯುವಕರು ನೀರು ಪಾಲಾದ ಘಟನೆ ವರದಿಯಾಗಿದೆ.
ಪ್ರವಾಹಕ್ಕೆ ಬಂದು ಈಜಲು ನೀರಿಗಿಳಿದ ಶಿರಸಿಯ ಮುರುಳಿ, ಸಿದ್ಧಾಪುರದ ಅಭಿಷೇಕ ನಾಯ್ಕ ಹಾಗೂ ಕೇರಳ ಮೂಲದ ಸಾಯಿ ನೀರುಪಾಲಾಗಿದ್ದಾರೆ ಎನ್ನಲಾಗಿದೆ.
ಇವರು ಸಿದ್ದಾಪುರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಗಳು ಎನ್ನಲಾಗುತ್ತದೆ.
ಬುರುಡೆ ಫಾಲ್ಸ್ ಗೆ ಸಿದ್ದಾಪುರ ಪೊಲೀಸರು ದೌಡಾಯಿಸಿ, ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಪ್ರಕರಣ ದಾಖಲಾಗಿದೆ.