ಅಂಕೋಲಾ : ಶ್ರೀ ದತ್ತಾತ್ರೇಯ ದೇವಸ್ಥಾನ ಲೋಕಲ್ ಸ್ಥಾಯಿ ಕಮೀಟಿ ಲಕ್ಷ್ಮೇಶ್ವರ ಅಂಕೋಲಾ ತಮಗೆಲ್ಲ ಈ ಮೂಲಕ ತಿಳಿಸುವುದೆನೆಂದರೆ ಇದೇ ಬರುವ ಮಾರ್ಚ.11 ಸೋಮವಾರದಂದು ದತ್ತಾತ್ರೇಯ ದೇವರ ವರ್ಧಂತಿ ಉತ್ಸವ ನಡೆಯಲಿದೆ. ಬೆಳಿಗ್ಗೆಯಿಂದ ಅಭಿಷೇಕ, ಪೂಜೆ ನಡೆಯಲಿದ್ದು ನಂತರ ಮಹಾಪ್ರಸಾದ ವಿತರಣೆ, ಹಾಗೂ ಸಂಜೆ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ವಿತರಣೆ ಹಾಗೂ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದ್ದು, ತಾವೆಲ್ಲರು ಕುಟುಂಬ ಸಮೇತರಾಗಿ ಬಂದು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ದೇವರ ಆಶೀರ್ವಾದ ಮತ್ತು ಪ್ರಸಾದವನ್ನು ಸ್ವೀಕರಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿಕೊಂಡಿದ್ದಾರೆ.