ಭಟ್ಕಳ : ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಭಾಷಾ ಸಂಘದ ಸಹಯೋಗದಲ್ಲಿ ಸಂತ ಶಿಶುನಾಳ ಷರೀಫ್ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀಧರ ಶೇಟ್ ಮಾತನಾಡಿ ಸಂತ ಶಿಸುನಾಳ ಷರೀಫ ಓರ್ವ ದಾರ್ಶನಿಕ, ಚಿಂತಕ, ಸಮಾಜ ಸುಧಾರಕ, ಮಾತ್ರವಲ್ಲ ತಮ್ಮ ತತ್ವಪದಗಳ ಮೂಲಕ ಜೀವನಪಾಠವನ್ನು ಸಾರ್ಥಕ ಬದುಕಿನ ತತ್ವವನ್ನು ಬೋಧಿಸಿದ ಮಹಾನುಭಾವ.ವ್ಯಕ್ತಿ ಮತ್ತು ಸಮಾಜದಲ್ಲಿನ ಕೊರತೆಗಳನ್ನು ನೀಗುವಲ್ಲಿ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು. ಷರೀಫರ ಕೋಡಗನ ಕೋಳಿ ನುಂಗಿತ್ತ, ಸೋರುತಿಹುದು ಮನೆಯ ಮಾಳಗಿ, ತರವಲ್ಲ ತಗಿ ನಿನ್ನ ತಂಬೂರಿ, ಬಿದ್ದಿಯಬ್ಬೆ ಮುದುಕಿ ಬಿದ್ದಿಯಬ್ಬೆ ಎಂಬ ಗೀತೆಗಳನ್ನು ಉಲ್ಲೇಖಿಸಿ ಅತ್ಯಂತ ಗೂಢವಾಗಿ ವಿವಿಧ ಪ್ರತಿಮೆಗಳ ಮೂಲಕ ಜೀವನ ಮೌಲ್ಯವನ್ನು ಬೋಧಿಸುತ್ತವೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಆರ್.ನರಸಿಂಹ ಮೂರ್ತಿ ಮಾತನಾಡಿ ಶಿಶುನಾಳ ಷರೀಫರವರ ಬದುಕು, ಅವರ ಬರೆಹ ಎಲ್ಲರಿಗೂ ಮಾರ್ಗದರ್ಶಿ. ಅವರ ತತ್ವ ಪದಗಳ ಹಿಂದಿನ ಚಿಂತನೆಗಳನ್ನು ಅರ್ಥೈಸಿಕೊಂಡು ಬದುಕಲ್ಲಿ ಅಳವಡಿಸಿಕೊಂಡಾಗ ಸಾರ್ಥಕ ಬದುಕು ನಮ್ಮದಾಗುತ್ತದೆ. ವಿದ್ಯಾರ್ಥಿಗಳ ವಿಚಾರ, ಚಿಂತನೆಗಳನ್ನು ವಿಸ್ತರಿಸಿಕೊಳ್ಳಲು ಪುರಕವಾಗುವ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿದ ಭಾಷಾ ಸಂಘ ಹಾಗೂ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಸಾಪ ತಾಲೂಕಾಧ್ಯಕ್ಷ, ಹಾಗೂ ಭಾಷಾ ಸಂಘದ ಕಾರ್ಯಾಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿ ಕನ್ನಡ ನೆಲದ ಸಾಹಿತ್ಯ ಪರಂಪರೆಯನ್ನು ಪರಿಚಯಿಸುವುದು ಹಾಗೂ ಲೋಕದ ಒಳಿತಿಗಾಗಿ ನೂರಾರು ತತ್ವಪದಗಳನ್ನು ನೀಡಿದ ಕರ್ನಾಟಕದ ಕಬೀರರೆಂದೇ ಹೆಸರಾದ, ಮೊದಲ ಮುಸ್ಲೀಂ ಅನುಭಾವಿ ಕವಿಯಾದ ಶಿಶುನಾಳ ಷರೀಫರ ಬದುಕು, ಅವರ ತತ್ವಪದಗಳನ್ನು ಮತ್ತು ಅದರ ಹಿಂದಿನ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವುದು ಇಂತಹ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.

RELATED ARTICLES  ಸ್ವಚ್ಛತೆ ಮಾಡಿದಲ್ಲೇ ಕಸ ಎಸೆಯುತ್ತಿರುವ ನಾಗರಿಕರು - ಯುವಾ ಬ್ರಿಗೇಡ್ ಕಳವಳ

ಶಿಶುನಾಳ ಷರೀಫ್ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಪ್ರಶಿಕ್ಷಣಾರ್ಥಿ ಸುಮನಾ, ಸಿಂಧು ನಾಯ್ಕ,ಮಂಗಲಾ ಶೇಟ್,ರೋಹಿಣಿ, ರಾಧಿಕಾ ಮತ್ತು ಭಾರತಿ ನಾಯ್ಕ ಮುಂತಾದವರರು ಷರೀಫರ ಗೀತೆಗಳನ್ನು ಪ್ರಸ್ತುತ ಪಡಿಸಿದರೆ ಸಹನಾ ಬಂಢಾರಿ ಗೀತೆಗಳ ಹಿನ್ನೆಲೆಯನ್ನು ತಿಳಿಸಿದರು. ಪವಿತ್ರಾ ನಾಯ್ಕ ಷರೀಫರ ಬದುಕಿನ ಬಗೆಗೆ ಪರಿಚಯಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾಷಾ ಸಂಘದ ಕಾರ್ಯದರ್ಶಿ ಪಿ.ಜಿ,ಚೈತನ್ಯ ಅತಿಥಿಗಳನ್ನು ಪರಿಚಯಿಸಿದರು.

RELATED ARTICLES  ಮಳೆಯಲ್ಲಿ ಕೊಚ್ಚಿಹೋಗಿದೆ ಕಾರವಾರದ ಈ ರಸ್ತೆ; ತಪ್ಪುತ್ತಿಲ್ಲ ಜನತೆಯ ಬವಣೆ

ಭಾಷಾ ಸಂಘದ ಸದಸ್ಯೆ ಕು.ವಿದ್ಯಾ ನಾಯ್ಕ ಸ್ವಾಗತಿಸಿದರೆ ಸಿಂಧು ಹಾಗೂ ಸಂಗಡಿಗರು ಷರೀಫರ ತತ್ವ ಪದಗಳ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಂತ .ಭಾಷಾ ಸಂಘದ ಸದಸ್ಯೆ ಕು, ಚಂದ್ರಪ್ರಭಾ ಕೊಡಿಯಾ ಕಾರ್ಯಕ್ರಮ ನಿರೂಪಿಸಿದರೆ ರಾಧಿಕಾ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.