ಹೊನ್ನಾವರ: ತಾಲೂಕಿನ ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸುಭಾಷ್ ಯುವಕ ಮಂಡಳಿ ಗುಣವಂತೆ, ಶ್ರೀ ಮೇಘಶ್ರೀ ಸೇವಾ ಸಂಸ್ಥೆ ಮಂಕಿ, ಒಕ್ಕಲಿಗರ ಯುವ ವೇದಿಕೆ ಹೊನ್ನಾವರ ಇವರ ಸಹಯೋಗದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಮಟ್ಟದ ಶಿವ ತಾಂಡವ ನೃತ್ಯ ಸ್ಪರ್ಧೆಯಲ್ಲಿ ಕುಮಾರಿ ಸಾನ್ವಿ ರಾವ್ ತೃತೀಯ ಸ್ಥಾನ ಗಳಿಸಿದ್ದಾಳೆ.
ಹೊನ್ನಾವರದ ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನಲ್ಲಿ 7 ನೇ ತರಗತಿ ಓದುತ್ತಿರುವ ಸಾನ್ವಿ, ಜಗದೀಶ್ ರಾವ್ ಮತ್ತು ವಿನುತಾ ಭಟ್ ದಂಪತಿಗಳ ಸುಪುತ್ರಿ.