ಹೊನ್ನಾವರ: ಕಾಂಗ್ರೆಸ್ ಯುವ ಮುಖಂಡ, ಉತ್ತರ ಕನ್ನಡ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ರವಿ.ಕೆ. ಶೆಟ್ಟಿ ಕವಲಕ್ಕಿ ಇವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿಯು, ಲೋಕಸಭಾ ಚುನಾವಣಾ ಪ್ರಚಾರ ಸಂಘಟಕರನ್ನಾಗಿ ನೇಮಕ ಮಾಡಿದೆ. ರವಿ ಶೆಟ್ಟಿ ಕವಲಕ್ಕಿಯವರನ್ನು ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ನಿಯೋಜಿಸಿದೆ.
ಉತ್ತಮ ಸಂಘಟಕರಾಗಿರುವ ರವಿ .ಕೆ. ಶೆಟ್ಟಿಯವರು ಇನ್ನು ಹೆಚ್ಚಿನ ರಾಜಕೀಯ ಸ್ಥಾನ-ಮಾನಗಳನ್ನು ಪಡೆದು ಪಕ್ಷ ಸಂಘಟನೆ ಮಾಡುವಂತಾಗಲಿ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಶುಭಹಾರೈಸಿದ್ದಾರೆ.
ಶ್ರೀ ರವಿ ಶೆಟ್ಟಿ ಕವಲಕ್ಕಿಯವರು ಪಕ್ಷಾಭಿಮಾನ ಹಾಗೂ ಸಾರ್ವಜನಿಕರೊಂದಿಗಿನ ಒಡನಾಟದಿಂದಾಗಿ ರಾಜಕೀಯದಲ್ಲಿ ಅತಿ ಎಳೆಯ ವಯಸ್ಸಿನಲ್ಲಿಯೇ ಹೆಚ್ಚಿನ ಸ್ಥಾನ ಮಾನ ಪಡೆದಿರುವ ಬಗ್ಗೆ ಹೆಮ್ಮೆ ಇದೆ ಎಂಬುದಾಗಿ ಕಾರ್ಯಕರ್ತರು ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.