ಮೇಷ

ಗುರುವಿನ ಸ್ಥಾನ ಬದಲಾವಣೆಯು ನಿಮ್ಮ ವೃತ್ತಿಯಲ್ಲೂ ಪ್ರಭಾವ ಬೀರುತ್ತಲಿದೆ. ಬದಲಾದ ವಾತಾವರಣದಲ್ಲಿ ಕೆಲಸ ಮಾಡಲು ತಯಾರಿ ನಡೆಸಿರಿ ಮತ್ತು ನೂತನ ಕಾರ್ಯ ವಿಧಾನಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕಾಗುತ್ತದೆ.ನಿಮ್ಮ ವರ್ಚಸ್ಸನ್ನು ಹಾಳುಗೆಡವಲು ಸಂಚು ನಡೆಯುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲವು ವಿಚಾರಗಳಲ್ಲಿ ನಿರ್ಬಂಧ ಹೇರಿಕೊಳ್ಳುವುದು ಒಳ್ಳೆಯದು. ಇಲ್ಲವೆ ಇದ್ದಲ್ಲಿ ಜನ ದುರುಪಯೋಗ ಮಾಡಿಕೊಳ್ಳುವರು.

ನಿಮ್ಮ ಬಳಿಯಲ್ಲಿ ವಿವಿಧ ತೆರನಾದ ಜನರು ಬರುವರು. ಅವರುಗಳಲ್ಲಿ ಕೆಲವರು ತಮ್ಮ ಸ್ವಾರ್ಥ ಪೂರೈಸಿಕೊಳ್ಳಲು ಬರುವರು. ಅಂಥವರನ್ನು ಎಚ್ಚರದಿಂದ ಸಾಗಹಾಕಿ.

ವೃಷಭ

ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಇದೆ. ನಿಮ್ಮ ಅಂತಃಶಕ್ತಿಯನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳಿ. ಮೇಲಧಿಕಾರಿಗಳಿಂದ ನಿಮಗೆ ಹೆಚ್ಚಿನ ಪ್ರಶಂಸೆ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.ನಿಮಗೆ ತಿಳಿದುದಕ್ಕಿಂತಲೂ ಜಾಸ್ತಿಯಾಗಿ ತಿಳಿದರೂ ತಿಳಿಯದಂತೆ ನಟಿಸುವ ಜನರಿರುವುದರಿಂದ ಎಚ್ಚರದಿಂದ ಇರಬೇಕು. ಆದಾಗ್ಯೂ ಗುರುವು ನಿಮಗೆ ಸಕಾಲದಲ್ಲಿ ಎಚ್ಚರಿಕೆಯನ್ನು ನೀಡುವರು.

ನಿಮ್ಮ ಸಾಮಾಜಿಕ ಕಳಕಳಿಯು ಬಹು ಮೆಚ್ಚುಗೆಗೆ ಪಾತ್ರವಾಗುವುದು ಮತ್ತು ನಿಮ್ಮ ಮಾರ್ಗದರ್ಶನವನ್ನು ನೆರೆಹೊರೆಯ ಮಂದಿ ಬಯಸುತ್ತಾರೆ. ಇದರಿಂದ ಅತಿ ಹೆಚ್ಚಿನ ಪ್ರಶಂಸೆ ಪಡೆಯುವಿರಿ.

ಮಿಥುನ

ಧನಕಾರಕ ಗುರುವು ರಿಪು ಸಂಚಾರದಲ್ಲಿ ಸಂಚರಿಸುವುದರಿಂದ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಧನನಾಶಕ್ಕೆ ಕಾರಣವಾಗುವ ಯಾವುದೇ ಕಾರ್ಯಗಳನ್ನು ಹಮ್ಮಿಕೊಳ್ಳದಿರುವುದು ಕ್ಷೇಮ.

ಅತಿಆಸೆ ಗತಿ ಗೆಡಿಸಿತು ಎನ್ನುವಂತೆ ಆಕಾಶಕ್ಕೆ ಏಣಿ ಹಾಕುವ ದುಃಸಾಹಸಕ್ಕೆ ಕೈಹಾಕದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಕಲಿತರೆ ಜೀವನದಲ್ಲಿ ಯಶಸ್ಸನ್ನು ಹೊಂದುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಕೆಲಸದ ಸ್ಥಳದಲ್ಲಿ ಕೆಲವರು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುವರು. ಅವರನ್ನು ಚಾತುರ್ಯದಿಂದಲೇ ದೂರ ಇಡುವುದು ಒಳ್ಳೆಯದು. ಇಲ್ಲವೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಮಾಡುವುದು ಕ್ಷೇಮ.

ಕಟಕ

ನಿಮ್ಮದು ಚಾಣಾಕ್ಷ ತನದ ಕಾರ್ಯ ವಿಧಾನವಾಗಿದೆ. ಇದಕ್ಕೆ ಪೂರಕವಾಗಿ ಗುರು ಹಿರಿಯರ ಆಶೀರ್ವಾದವೂ ಇರುವುದರಿಂದ, ಹಿಡಿದ ಕೆಲಸವನ್ನು ಅರ್ಧಕ್ಕೆ ಕೈಬಿಡಿದಿರಿ. ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ.ನೀವು ತಳೆಯುವ ನಿರ್ಧಾರವನ್ನು ವಿರೋಧಿಸುವವರು ಬಹಳ ಮಂದಿ. ಹಾಗಂತ ನೀವು ನಿಮ್ಮ ವಿಚಾರಧಾರೆಯಿಂದ ಹಿಂದಕ್ಕೆ ಸರಿಯದಿರುವುದು ಒಳಿತು. ನಂತರ ನಿಮ್ಮ ತೀರ್ಮಾನವನ್ನು ಎಲ್ಲರೂ ಕೊಂಡಾಡುವರು.ತೀರಾ ಸರಳವಾದ ಮಾರ್ಗದಿಂದ ಧನಲಾಭದ ದಾರಿ ತೆರೆದುಕೊಳ್ಳವುದೆಂಬ ನಿಮ್ಮ ದಡ್ಡತನವನ್ನು ಕೈಬಿಟ್ಟರೆ ಒಳಿತಾಗುವುದು. ಕಠಿಣ ಪರಿಶ್ರಮವಿಲ್ಲದೆ ಹಣಕಾಸು ಸುಲಭವಾಗಿ ದೊರೆಯುವುದಿಲ್ಲ.

ಸಿಂಹ

ನಾಲಿಗೆ ಒಳ್ಳೆಯದಿದ್ದರೆ ನಾಡೇ ಒಳ್ಳೆಯದು ಎನ್ನುವಂತೆ ನೀವು ಆಡುವ ಮಾತು ಪರರನ್ನು ನೋಯಿಸದಿರಲಿ. ಶಾಂತವಾದ ಮಾತುಗಳಿಂದ ಕೆಲಸಗಾರರ ಮನಸ್ಸನ್ನು ಗೆಲ್ಲಿ. ಇದರಿಂದ ನಿಮಗೆ ಒಳಿತಾಗುವುದು.ಬರೀ ಹಗುರ ಮಾತನಾಡುತ್ತ ದಿನವನ್ನು ಕಳೆಯಿರಿ. ನಿಮ್ಮ ವಿದ್ವತ್, ಪಾಂಡಿತ್ಯಕ್ಕೆ ಬೆಲೆ ನೀಡಿ ನಿಮ್ಮನ್ನು ಜನರು ಆದರಿಸುವರು. ಹಾಗಾಗಿ ಸಣ್ಣತನ ತೋರಿ ಹಗುರ ಆಗದಿರಿ. ನಿಮ್ಮ ನಡೆ-ನುಡಿಯಲ್ಲಿ ಗಾಂಭೀರ್ಯತೆಯನ್ನು ರೂಢಿಸಿಕೊಳ್ಳಿರಿ.ಸಮಾಜದಲ್ಲಿ ಜನಾನುರಾಗಿಗಳಾಗುವಂತಹ ವಿಶಿಷ್ಟ ಅವಕಾಶವೊಂದನ್ನು ನೀವು ಸಂಪಾದಿಸಿದ್ದೀರಿ. ಅನುಪಮ ಶಕ್ತಿಯೊಂದು ನಿಮ್ಮ ಬೆಂಗಾವಲಿಗೆ ನಿಲ್ಲುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

RELATED ARTICLES  ವರ್ಷದ ಕೊನೆಯಲ್ಲಿ ವಾಹನ ಸವಾರರಿಗೆ ಗುಡ್ ನ್ಯೂಸ್ : ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ.

ಕನ್ಯಾ

ಪರಾಕ್ರಮ ಶಾಲಿಗೆ ಭಗವಂತ ಸಹಾಯಹಸ್ತ ಚಾಚುವನು. ಅಂತೆಯೇ ಕೆಲಸ ಕಾರ್ಯಗಳನ್ನು ಅರ್ಧ ಮನಸ್ಸಿನಿಂದ ಮಾಡದಿರಿ. ಆತ್ಮಬಲದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ.ವಿರೋಧಿಗಳನ್ನು ಮಾತಿನ ಮೂಲಕ ಸೋಲಿಸುವ ಚಾಕಚಕ್ಯತೆ ನಿಮ್ಮಲ್ಲಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ. ಅಪರಿಚಿತರ ಬಳಿ ವ್ಯವಹರಿಸುವಾಗ ಮಾತ್ರ ಎಚ್ಚರದಿಂದ ಇರಿ.ಸಾಗುವ ದೂರವನ್ನು ಕ್ರಮಿಸುವ ಶಕ್ತಿ ನಿಮಗಿದೆ. ನೀವು ಕ್ರಮಿಸುವ ದಾರಿ ನೇರವಾಗಿದ್ದು ಕಠಿಣ ತರವಾಗಿರುವುದು. ಅದಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂಬುದನ್ನು ಅರಿಯಿರಿ. ಭಗವಂತನ ನಾಮಸ್ಮರಣೆ ನಿಮಗೆ ಮಾರ್ಗಸೂಚಿ ಆಗುವುದು.

ಅದೃಷ್ಟ ಸಂಖ್ಯೆ:6

ತುಲಾ

ಗುರುವಿನ ಒಲುಮೆ ಇರುವಾಗ ಯಾರು ಮುನಿದರೇನು? ನಿಮ್ಮ ಮೇಲೆ ಎಷ್ಟೇ ಭಾರ ಬಂದರೂ ಅದನ್ನು ನಿಭಾಯಿಸಿ ವರ್ತಮಾನವನ್ನು ನಿಯಂತ್ರಿಸಬಲ್ಲಿರಿ. ಇದರಿಂದ ಕುಟುಂಬ ಸದಸ್ಯರ ಮೆಚ್ಚುಗೆಗೆ ಪಾತ್ರರಾಗುವಿರಿ.ಹೊಸ ಯೋಜನೆಗಳು ಜೀವನದಲ್ಲಿ ಹೊಸದೇ ಆದ ಚೈತನ್ಯವನ್ನು ತುಂಬಿಕೊಡುವುದು. ಇದರಿಂದ ಮನೆಯ ಸದಸ್ಯರು ಹಾಗೂ ಸಂಗಾತಿಯೂ ಹೆಚ್ಚು ಸಂತೋಷಪಡುವರು. ಭಗವಂತನು ನೀಡಿದ್ದನ್ನು ತೃಪ್ತಿಯಿಂದ ಸ್ವೀಕರಿಸಿ ಜೀವನವನ್ನು ಸುಖಮಯವಗಿ ಕಳೆಯಿರಿ.ಬಹಳ ದಿನಗಳಿಂದಲೂ ಅಪೂರ್ಣವಾಗಿದ್ದ ನಿಮ್ಮ ಸಂಶೋಧನೆಯ ಕೆಲಸಗಳಿಗೆ ಸುಖಕರ ಅಂತ್ಯ ಕಂಡು ಬರುವವು. ನಿಮಗೆ ಮಾರ್ಗದರ್ಶನ ನೀಡುತ್ತಿದ್ದ ವ್ಯಕ್ತಿಯು ಸರಿಯಾದ ಮಾರ್ಗದರ್ಶನ ನೀಡುವರು.

ವೃಶ್ಚಿಕ

ಅನಗತ್ಯ ಖರ್ಚು ವೆಚ್ಚಗಳು ಜಾಸ್ತಿ ಆಗುವ ಸಂಭವವಿದೆ. ಆದಷ್ಟು ಮಿತವ್ಯಯದ ಕಡೆ ಗಮನ ಹರಿಸಿ. ಮನೆಯಿಂದ ಹೊರಗೆ ಹೊರಡುವಾಗ ಹಿರಿಯರ ಅಪ್ಪಣೆ ಪಡೆದು ಹೊರಡಿ.ಮಾತು ಆಡಿದರೆ ಆಯಿತು. ಮುತ್ತು ಒಡೆದರೆ ಹೋಯಿತು ಎನ್ನುವಂತೆ ನಿಮ್ಮ ಸಂಕಷ್ಟದ ದಿನಗಳಲ್ಲಿ ಬಹು ಎಚ್ಚರಿಕೆಯಿಂದ ಎದುರಾಳಿಯನ್ನು ಎದುರಿಸಬೇಕು. ಬಾಯಿತಪ್ಪಿ ಆಡಿದ ಮಾತಿಗೆ ವಿಪರೀತವಾದ ದಂಡ ತೆರಬೇಕಾಗುವುದು.ನಿಮಗೆ ಕೇವಲ ಕಷ್ಟಗಳೇ ಆಗಿ ಬೇಸರ ಬಂದಿರುವ ಸಾಧ್ಯತೆ ಇದೆ. ಇದರಿಂದ ಮನಸ್ಸು ಗಲಿಬಿಲಿಗೊಂಡು ವಾಹನದಲ್ಲಿ ಸಂಚರಿಸುವಾಗ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಮನಸ್ಸು ವ್ಯಘ್ನವಾಗಿರುವಾಗ ವಾಹನ ಚಲಾಯಿಸದಿರಿ.

RELATED ARTICLES  ವಿಧಾನಸೌಧ ವಜ್ರಮಹೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣ

ಧನಸ್ಸು

ಅನೇಕರು ಹೊಸದೇ ಆದ ವಹಿವಾಟನ್ನು ಆರಂಭಿಸಲು ನಿಮಗೆ ಸಲಹೆ ನೀಡುವರು. ಆದರೆ ಅದಕ್ಕೆ ಕಾಲ ಪಕ್ವವಾಗಿಲ್ಲ. ಮನೆಗೆದ್ದು ಮಾರುಗೆಲ್ಲು ಎನ್ನುವಂತೆ ಮೊದಲು ಮನೆಯವರ ವಿಶ್ವಾಸವನ್ನು ಗಳಿಸಿಕೊಳ್ಳಿರಿ.ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ ಈದಿನದ ಪರಿಸ್ಥಿತಿ. ನೀವು ಮಾಡದೇ ಇರುವ ಕೆಲಸದ ಬಗ್ಗೆ ಅಪವಾದಗಳನ್ನು ಎದುರಿಸಬೇಕಾಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ.ಜನ್ಮಶನಿಯು ಎಲ್ಲಾ ಕೆಲಸಗಳಲ್ಲಿ ಮಂದ ಪ್ರಗತಿಯನ್ನುಂಟು ಮಾಡುತ್ತಿರುವನು. ನಿಧಾನವೇ ಪ್ರಧಾನ. ಶನಿಮಹಾರಾಜನ ಆಟಗಳಿಗೆ ತಲೆಬಾಗದೆ ವಿಧಿಯಿಲ್ಲ. ಆಂಜನೇಯ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ.

ಮಕರ

ದಿನದಿಂದ ದಿನಕ್ಕೆ ನೀವು ನಡೆಯುವ ಹಾದಿ ಕಠಿಣವಾಗಿದೆ. ಆದರೆ ಆ ಹಾದಿಯಲ್ಲಿಯೇ ಸಾಗುವುದು ಅನಿವಾರ್ಯವಾಗಿರುವಾಗ ರಕ್ಷಾ ಕವಚಗಳನ್ನು ಧರಿಸಿಕೊಂಡಂತೆ ಮನದಲ್ಲಿ ಭಗವಂತನ ನಾಮಸ್ಮರಣೆಯಿಂದ ರಕ್ಷ ಣೆ ಪಡೆಯಿರಿ.ಒಂದೇ ಒಂದು ಸಣ್ಣ ತಪ್ಪಿನಿಂದ ನಿಮ್ಮ ಮಹತ್ತರವಾದ ಕೆಲಸ ಹಾಳಾಗುವ ಸಂಭವ. ಅದಕ್ಕೆ ಆಸ್ಪದ ಕೊಡದೆ ಗುರು ಹಿರಿಯರ ಹಿತವಚನದಂತೆ ನಡೆದುಕೊಳ್ಳಿರಿ. ಎಲ್ಲವೂ ಒಳಿತಾಗುವುದು.

ಆದಷ್ಟು ಎಚ್ಚರದಿಂದ ಇರಿ. ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಕೆಲವರು ಮೂಗು ತೂರಿಸುತ್ತಾ ಇಲ್ಲಸಲ್ಲದ ಸಲಹೆಗಳನ್ನು ನೀಡಿ ನಿಮ್ಮ ದಾರಿ ತಪ್ಪಿಸಲು ಹೊಂಚು ಹಾಕುತ್ತಿರುವರು. ನಿಮ್ಮ ಬುದ್ಧಿಶಕ್ತಿಯನ್ನು ನಂಬಿ ಕೆಲಸ ಮಾಡಿ.

ಕುಂಭ

ನಿಮ್ಮ ಹೆಚ್ಚಿನ ಶಕ್ತಿಯನ್ನು ಸಕಾರಾತ್ಮಕವಾದ ರೀತಿಯಲ್ಲಿ ಪ್ರದರ್ಶಿಸಲು ಅತ್ಯಂತ ಸೂಕ್ತ ದಿನವಾಗಿದೆ. ನಿಮ್ಮ ಮೇಲೆ ನೀವು ವಿಶ್ವಾಸ ಕಳೆದುಕೊಳ್ಳದಿರಿ. ಎಲ್ಲವೂ ಒಳಿತಾಗುವುದು. ಗುರುವಿನ ರಕ್ಷ ಣೆ ಮಾಡಿ.ಸತ್ಪಾತ್ರರಿಗೆ ದಾನ ಮಾಡಬೇಕೆಂಬ ನಿಮ್ಮ ಯೋಚನೆ ಸರಿ. ಆದರೆ ಯಾವುದಕ್ಕೂ ಅವಸರ ಬೇಡವೇ ಬೇಡ. ಭಗವಂತ ನಿಮ್ಮ ಎಲ್ಲಾ ಕಾರ್ಯಗಳಿಗೂ ಅಭಯ ಹಸ್ತವನ್ನು ನೀಡುವರು.ನಿಮ್ಮ ಪ್ರತಿಭೆಯನ್ನು ಧಾರಾಳವಾಗಿ ಪ್ರದರ್ಶಿಸಲು ಎಲ್ಲಾ ರೀತಿಯ ಅವಕಾಶಗಳು ಹೇರಳವಾಗಿ ಬರುವವು. ಎಣ್ಣೆ ಬಂದಾಗ ಕಣ್ಣುಮುಚ್ಚಿಕೊಂಡರು ಎಂಬಂತೆ ಆಗಬಾರದು. ತಾನಾಗಿ ಬಂದ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ.

ಮೀನ

ಸೋಲಿಗಾಗಿ ಚಿಂತಿಸದೆ ಹೊಸದಾದ ಒಂದು ಕಾರ್ಯಕ್ರಮ ರೂಪಿಸಿಕೊಳ್ಳುವಿರಿ. ಇದರಿಂದ ನಿಮಗೆ ಒಳಿತಾಗುವುದು ಮತ್ತು ಮನೋ ಅಭಿಲಾಷೆಯು ಪೂರ್ಣಗೊಳ್ಳುವವು. ಗುರುವಿನ ಅನುಗ್ರಹ ನಿಮಗೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಬಲವನ್ನು ತಂದುಕೊಡುವುದು. ದೂರವಾಗಿದ್ದ ಮಿತ್ರರು ಹತ್ತಿರ ಬರುವರು. ನಿಮ್ಮ ಕೆಲಸಗಳು ದಿನದಿಂದ ದಿನಕ್ಕೆ ಪ್ರಗತಿಯತ್ತ ಸಾಗುವುದು.ನಿಮ್ಮದು ಮೀನಿನಂತೆ ಚುರುಕಾದ ನಡೆನುಡಿ ಇದ್ದರು ಗಾಳಕ್ಕೆ ಸಿಕ್ಕ ಮೀನಿನಂತೆ ಒದ್ದಾಡುವಿರಿ. ವಿವೇಚನೆ ಬಳಸಿ ಕಾರ್ಯ ಪ್ರವೃತ್ತರಾಗಿ. ಅನವಶ್ಯಕ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಡಿ.