||ನಮಸ್ತೇಸ್ತು ಮಹಾಮಾಯೆ ಶ್ರೀಪೀಠೆ ಸುರ ಪೂಜಿತೆ||
||ಶಂಖಚಕ್ರ ಗಧಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ||
ಎಲ್ಲಾ ಹಬ್ಬಗಳಲ್ಲಿ ವರಮಹಾಲಕ್ಷ್ಮಿ
ಹಬ್ಬ ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು.
ಪ್ರತಿ ವರ್ಷ ಪೌರ್ಣಮಿಯ ಸಮೀಪದ ಶ್ರಾವಣ ಮಾಸದ ಎರಡನೇ
ಶುಕ್ರವಾರ ಬರುವ ಈ ವರಲಕ್ಷ್ಮಿ ವ್ರತವನ್ನು ಎಲ್ಲಾ
ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.
ಭವಿಷ್ಯೋತ್ತರ ಪುರಾಣದ ಪ್ರಕಾರ, ಲಕ್ಷ್ಮಿಯು ಕ್ಷೀರ
ಸಾಗರದಿಂದ ಅವತಾರ ತಾಳಿದಳೆಂದು ಹೇಳಲಾಗುತ್ತದೆ.
ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ
ವಾಸುಕಿಯ ಸಹಾಯದೊಂದಿಗೆ ಮಂದರ ಪರ್ವತವನ್ನು
ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ
ಶ್ವೇತವರ್ಣದಲ್ಲಿ ಉದ್ಭವಿಸುತ್ತಾಳೆ ಲಕ್ಷ್ಮೀ.
ಹಾಗಾಗಿ ಈ ವರಮಹಾಲಕ್ಷ್ಮಿ ವ್ರತದ ದಿನ ತಾಯಿಗೆ
ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ.
ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿರುವುದರಿಂದ ಹಬ್ಬದ
ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ,
ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಅಭ್ಯಂಜನವನ್ನು
ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ
ನೈವೇದ್ಯವನ್ನು ತಯಾರಿಸಲಾಗುತ್ತದೆ.
ಸಣ್ಣ ತಾಮ್ರದ ಬಿಂದಿಗೆ ಅಥವ ಬೆಳ್ಳಿ ಚೆಂಬನ್ನು ಕಳಶದ
ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ
ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಿ ಒಂದು
ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಳಶವನ್ನು
ಇಟ್ಟು, ಮಾವಿನ ಎಲೆ ಅಥವ ವೀಳ್ಯೆದೆಲೆಯನ್ನು ಕಳಶದ
ಸುತ್ತ ಜೋಡಿಸಿ ಅದರ ಮೇಲೆ ಅರಿಶಿನ ಹಚ್ಚಿದ
ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಸೀರೆ, ಒಡವೆಗಳೊಂದಿಗೆ
ಅಲಂಕರಿಸುತ್ತಾರೆ.
ಅವರವರ ಯಥಾಶಕ್ತಿಯಂತೆ ಲಕ್ಷ್ಮಿಯನ್ನು ಚಿನ್ನ, ಬೆಳ್ಳಿ,
ಹೂವುಗಳೊಂದಿಗೆ ಅಲಂಕರಿಸಿ ಪೂಜಿಸುತ್ತಾರೆ. ತಾಯಿಗೆ
ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು
ಹಾಗೂ ಬಿಲ್ವಪತ್ರೆ ಎಂದರೆ ತಾಯಿಗೆ ತುಂಬಾ ಪ್ರೀತಿ.
ಬಿಲ್ವವೃಕ್ಷದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆಂದು, ಬಿಲ್ವಪತ್ರೆಯಿಂದ
ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ನಂಬಿಕೆಯೂ ಇದೆ.
ವರಲಕ್ಷ್ಮಿ ಎಂದರೆ ವರಗಳನ್ನು ಕೊಡುವವಳು ಎಂದು ಕೂಡಾ
ಹೇಳುತ್ತಾರೆ.
ಸಾಮನ್ಯವಾಗಿ ಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿ
ಮಾಡಿದರೆ ಶ್ರೇಷ್ಠ ಎನ್ನುವುದು ನಂಬಿಕೆ. ಆದರೆ ಈ ಆಧುನಿಕ
ಜೀವನದ ಒತ್ತಡದಲ್ಲಿ ಯಾರಿಗೂ ಉಪವಾಸ ಮಾಡಲು
ಸಾಧ್ಯವಾಗದೆ ಇರುವುದರಿಂದ ಮುಂಜಾನೆಯಲ್ಲಿ ಯಾವುದೇ
ಘನಹಾರ ಸೇವಿಸದೆ ವ್ರತವನ್ನಾಚರಿಸುತ್ತಾರೆ.
ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ
ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ
ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ
ಇದೆ.
ಹೀಗಾಗಿ ನಮ್ಮ ಪೂರ್ವಿಕರು ಹೇಳುವ ಮಾತೆಂದರೆ, ಎಲ್ಲಿ
ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮಿಯು
ತಾಂಡವವಾಡುತ್ತಾಳೆ ಎಂದು ಎಲ್ಲದಕ್ಕಿಂತ ಇಲ್ಲಿ ಭಕ್ತಿ ಹಾಗೂ
ಶ್ರದ್ಧೆ ಮುಖ್ಯ.
ಇನ್ನು ವ್ರತದ ಬಗ್ಗೆ ಹೇಳಬೇಕೆಂದರೆ, ಒಮ್ಮೆ ವರಲಕ್ಷ್ಮಿ
ವ್ರತ ಮಾಡಿದರೆ ಅಷ್ಟಲಕ್ಷ್ಮಿಯರಿಗೆ ಪೂಜೆ ಸಲ್ಲಿಸಿದಷ್ಟು ಫಲ
ಸಿಗುತ್ತದೆಂದು ಹೇಳುತ್ತಾರೆ. ಲಕ್ಷ್ಮಿಗೆ ಪ್ರಿಯವಾದ
ಧಾನ್ಯವೆಂದರೆ ಕಡಲೆಬೇಳೆ.
ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದ ದಿನದಂದು
ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ
ಪಾಯಸ, ಹೋಳಿಗೆ ಪುಳಿಹೋಗರೇ .ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ
ಅರ್ಪಿಸುತ್ತಾರೆ.
ವ್ರತದ ನೇಮದ ಪ್ರಕಾರ ಪೂಜೆಯ ಸಿದ್ದತೆಗಳೆಲ್ಲ ಆದ ನಂತರ
ಮೊದಲು ವಿಘ್ನಕಾರಕನಾದ ಗಣಪತಿಯನ್ನು ಪೂಜಿಸಿ ನಂತರ
ವರಲಕ್ಷ್ಮಿ ವ್ರತವನ್ನು ಆರಂಭಿಸುತ್ತಾರೆ.
ಕುಂಕುಮಾರ್ಚನೆ ಮಾಡುವುದರೊಂದಿಗೆ ಲಕ್ಷ್ಮಿದೇವಿಯನ್ನು
ಆವಾಹನೆ ಮಾಡುತ್ತಾರೆ. ನಂತರ ಹನ್ನೆರಡು ಗಂಟಿನ
ದಾರವನ್ನು ದೇವರ ಮುಂದೆ ಇಟ್ಟು ಪುಜೆಯನ್ನು ಮಾಡಿ
ಸುಮಂಗಲಿಯರು ಅವರ ಕೈಗೆ ಕಟ್ಟಿಕೊಳ್ಳುತ್ತಾರೆ.
ಕಟ್ಟಿದ ದಾರವನ್ನು ಗೌರಿಹಬ್ಬದ ದಿನ ಗೌರಿವ್ರತ ಮಾಡಿ ಹಳೇ
ದಾರವನ್ನು ವಿಸರ್ಜಿಸಿ ಹೊಸ ದಾರವನ್ನು ಕಟ್ಟಿಕೊಳ್ಳುತ್ತಾರೆ.
ಹೀಗೆ ಮದುವೆಯಾದ ಹೆಣ್ಣು ಮಕ್ಕಳು ಮೊದಲನೆ ವರ್ಷದಿಂದ
ಒಂಬತ್ತು ವರ್ಷದವರೆಗೆ ಶ್ರದ್ಧೆಯಿಂದ ವ್ರತವನ್ನಾಚರಿಸಿ
ಒಂಬತ್ತನೇ ವರ್ಷ ಉದ್ಯಾಪನೆಯೊಂದಿಗೆ ವ್ರತವನ್ನು
ಮುಗಿಸುತ್ತಾರೆ.
ಈ ವರಮಹಾಲಕ್ಷ್ಮಿ ಹಬ್ಬದ ಮತ್ತೊಂದು ವಿಶೇಷತೆಯೇನೆಂದರೆ
ಜಾತಿ, ಮತ, ಭೇದವಿಲ್ಲದೆ ಹಿಂದೂ ಧರ್ಮದ ಎಲ್ಲರೂ ಆ
ತಾಯಿಯನ್ನು ವಿವಿಧ ರೀತಿಯಲ್ಲಿ ಪೂಜಿಸಿ ಅವಳನ್ನು
ಆರಾಧಿಸುತ್ತಾರೆ.
ಪೂಜೆಯ ನಂತರ ಶ್ರೀ ವರಮಹಾಲಕ್ಷ್ಮಿ ವ್ರತ ಕಥಾ ಶ್ರವಣ
ಮಾಡಿದವರಿಗೆ ದಾರಿದ್ರ್ಯ ಕಳೆದು, ಆಯಸ್ಸು, ಆರೋಗ್ಯ,
ಸಂಪತ್ತು, ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ
ನಂಬಿಕೆಯೂ ಇದೆ.
ಎಲ್ಲರೂ ಹಬ್ಬವನ್ನು ಸಡಗರ, ಸಂಭ್ರಮದೊಂದಿಗೆ ಆಚರಿಸಿ,
ವಿಷ್ಣುವಿನ ಹೃದಯವಾಸಿ ಲಕ್ಷ್ಮಿದೇವಿಯನ್ನು ಪೂಜಿಸಿ, ಶ್ರದ್ಧೆ
ಭಕ್ತಿಯೊಂದಿಗೆ ಅವಳನ್ನು ಆರಾಧಿಸಿ ಅವಳ ಕೃಪೆಗೆ ಪಾತ್ರರಾಗಿ.
|| ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತ ||
|| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
||
|| ಯಾ ದೇವಿ ಸರ್ವಭೂತೇಷು ಲಕ್ಷ್ಮಿ ರೂಪೇಣ ಸಂಸ್ಥಿತ ||
|| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಯಾ ದೇವಿ ಸರ್ವಭೂತೇಷು ವಿದ್ಯಾ ರೂಪೇಣ ಸಂಸ್ಥಿತ. ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ.
“ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ
ಶ್ರೀರಂಗಧಾಮೇಶ್ವರೀಂ| ದಾಸೀಭೂತಸಮಸ್ತದೇವವನಿತಾಂ
ಲೋಕೈಕದೀಪಾಂಕುರಾಮ್||
ಶ್ರೀಮನ್ಮಂದಕಟಾಕ್ಷಲಬ್ಧವಿಭವಬ್ರಹ್ಮೇಂದ್ರಗಂಗಾಧರಾಂ|
ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ
ಮುಕುಂದಪ್ರಿಯಾಮ್||”
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ರೋಧಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಥಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತುಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟ್ಯೈ ನಮಃ
ಓಂ ದಾರಿದ್ರ್ಯ ನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣ ಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮ ಗತಾನಂದಾಯೈ ನಮಃ
ಓಂ ವರಲಕ್ಷ್ಮ್ಯೈ ನಮಃ (90)
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ನಮಃ
ಓಂ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಙ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮ