ಮೇಷ ರಾಶಿ    

ಸ್ವತಃ ಔಷಧಿ ತೆಗೆದುಕೊಳ್ಳುವುದು ಔಷಧ ಅವಲಂಬನೆಯನ್ನು ಉಂಟುಮಾಡಬಹುದು. ಯಾವುದೇ ಔಷಧ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಇಲ್ಲದಿದ್ದಲ್ಲಿ ಔಷಧ ಅವಲಂಬನೆಯ ಸಾಧ್ಯತೆ ಅಧಿಕವಾಗಿದೆ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಇಂದು ನಿಮಗೆ ಗೊತ್ತಿರುವವರ ಮೇಲೆ ನೀವು ಯಾವುದೇ ನಿರ್ಧಾರ ಹೇರಲು ಪ್ರಯತ್ನಿಸಿದಲ್ಲಿ ನೀವು ನಿಮ್ಮದೇ ಹಿತಾಸಕ್ತಿಗೆ ಧಕ್ಕೆ ತರುತ್ತೀರಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಪರಿಸ್ಥಿತಿಯನ್ನು ತಾಳ್ಮೆಯಿಂದ ನಿರ್ವಹಿಸುವುದೊಂದೇ ದಾರಿ. ನಿಮ್ಮ ಸಂಗಾತಿಯ ಅನುಪಸ್ಥಿತಿ ಕಾಡುವ ಸಾಧ್ಯತೆಯಿದೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಮಹಿಳೆಯರು ಶುಕ್ರನಿಂದ ಮತ್ತು ಪುರುಷರು ಮಂಗಳನಿಂದ, ಆದರೆ ಇದು ಶುಕ್ರ ಹಾಗು ಮಂಗಳಗಳು ಒಬ್ಬರಲ್ಲೊಬ್ಬರು ಲೀನವಾಗುವ ದಿನ.

ವೃಷಭ ರಾಶಿ

ಇತ್ತೀಚೆಗೆ ನಿಮ್ಮಲ್ಲಿ ಕೆಲವರು ಓವರ್‌ಟೈಮ್ ಮಾಡುತ್ತಿರುತ್ತಾರೆ ಹಾಗೂ ನಿಮ್ಮ ಚೈತನ್ಯ ಉಡುಗುತ್ತಿರುತ್ತದೆ- ಇಂದು ನೀವು ಒತ್ತಡ ಹಾಗೂ ಸಂದಿಗ್ಧತೆಯನ್ನು ಬಯಸುವುದಿಲ್ಲ. ಇಂದು ಸುಮ್ಮನೆ ಕುಳಿತುಕೊಳ್ಳುವ ಬದಲು -ಏಕೆ ಏನನ್ನಾದರೂ ಮಾಡಬಾರದು – ಇದು ನಿಮ್ಮ ಗಳಿಕೆಯ ಶಕ್ತಿಯನ್ನು ಸುಧಾರಿಸುತ್ತದೆ. ಸೋದರಿಯ ಪ್ರೀತಿ ನಿಮ್ಮನ್ನು ಉತ್ತೇಜಿಸುತ್ತದೆ. ಅದರೆ ನೀವು ಚಿಕ್ಕ ವಿಷಯಳಿಗೆ ತಾಳ್ಮೆ ಕಳೆದುಕೊಳ್ಳಬಾರದು ಏಕೆಂದರೆ ಅದು ನಿಮ್ಮ ಆಸಕ್ತಿಗಳನ್ನು ಹಾಳು ಮಾಡುತ್ತದೆ. ಪ್ರಣಯ ನಿಮ್ಮ ಪ್ರೀತಿಪಾತ್ರರು ಇಂದು ಅತಿಯಾದ ಬೇಡಿಕೆಗಳನ್ನಿಡುವುದರಿಂದ ಪ್ರಣಯದಲ್ಲಿ ಹಿನ್ನೆಡೆಯಿರುತ್ತದೆ. ಪ್ರವಾಸಗಳು ಮತ್ತು ಪ್ರಯಾಣಗಳು ಆನಂದ ತರುತ್ತವೆ ಮತ್ತು ಹೆಚ್ಚು ಶಿಕ್ಷಣ ನೀಡುತ್ತವೆ. ಇಂದು ನಿಮ್ಮ ಜೀವನ ಸಂಗಾತಿಯ ವಟಗುಟ್ಟುವಿಕೆಯಿಂದಾಗಿ ನಿಮಗೆ ಸಿಟ್ಟು ಬರಬಹುದು, ಆದರೆ ಅವನು / ಅವಳು ನಿಮಗೆ ನಿಜವಾಗಿಯೂ ಏನಾದರೂ ಒಳ್ಳೆಯದನ್ನು ಮಾಡುತ್ತಾರೆ.

ಮಿಥುನ ರಾಶಿ

ಮೋಜಿಗಾಗಿ ಹೊರಹೋಗುವವರಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ಒಂದು ಹಳೆಯ ಸಂಪರ್ಕ ನಿಮಗೆ ಕೆಲವು ಸಮಸ್ಯೆಗಳನ್ನು ಸೃಷ್ಟಿಸಬಹುದು ಇವತ್ತು ಡೇಟ್‌ಗೆ ಹೋದಲ್ಲಿ ವಿವಾದಾತ್ಮಕ ವಿಷಯಗಳನ್ನು ಕೆದಕುವುದನ್ನು ತಪ್ಪಿಸಿ. ಅನಕೂಲಕರ ಗ್ರಹಗಳು ಇಂದು ನೀವು ಸಂತೋಷ ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ. ನಿಮ್ಮ ಜೀವನ ಸಂಗಾತಿ ಕೆಲವು ಅಚ್ಚರಿಗಳ ಜೊತೆ ನಿಮ್ಮ ಕೆಟ್ಟ ಮನಸ್ಥಿತಿಯನ್ನು ಸರಿಪಡಿಸುತ್ತಾರೆ.

ಕರ್ಕ ರಾಶಿ

ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ನಿಮಗೆ ಆಕರ್ಷಕವಾಗಿ ತೋರುವ ಯಾವುದೇ ಹೂಡಿಕೆಯ ಯೋಜನೆಯ ಬಗ್ಗೆ ಹೆಚ್ಚು ಕಂಡುಹಿಡಿಯಲು ಮೇಲ್ಮೈಗಿಂತ ಕೆಳಗೆ ಆಳವಾಗಿ ಕೆದಕಿ. ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಸ್ನೇಹ ಆಳವಾದ ಹಾಗೆ ಪ್ರಣಯ ನಿಮ್ಮೆಡೆ ಬರುತ್ತದೆ. ನೀವು ಅತುರದ ನಿರ್ಣಯಗಳನ್ನು ಕೈಗೊಂಡರೆ ಮತ್ತು ಅನಗತ್ಯ ಕ್ರಮಗಳನ್ನು ಕೈಗೊಂಡರೆ ಈ ದಿನ ನಿಮ್ಮನ್ನು ನಿರಾಸೆಗೊಳಿಸುತ್ತದೆ. ಕೆಲಸದಲ್ಲಿ ನಿಮ್ಮ ಮೇಲಿನವರು ಇಂದು ದೇವದೂತರಂತೆ ಕೆಲಸ ಮಾಡುವಂತೆ ಕಾಣುತ್ತದೆ.

RELATED ARTICLES  ಜೋಗ ಜಲಪಾತದ ಬುಡದಲ್ಲಿ ನಾಪತ್ತೆಯಾಗಿದ್ದ ಕೋತಿ ರಾಮ ಅಲಿಯಾಸ್ ಜ್ಯೋತಿರಾಜ್ ಪತ್ತೆ..!

ಸಿಂಹ ರಾಶಿ

ನಿಮ್ಮ ಆರೋಗ್ಯದ ಸಲುವಾಗಿಯಾದರೂ ಕೂಗಬೇಡಿ. ನಿಮ್ಮ ಅವಾಸ್ತವಿಕ ಯೋಜನೆ ಹಣದ ಕೊರತೆಗೆ ಕಾರಣವಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ಒಂದು ಶಾಂತಿಯುತ ಮತ್ತು ಶಾಂತ ದಿನವನ್ನು ಆನಂದಿಸಿ – ಜನರು ಸಮಸ್ಯೆಗಳೊಡನೆ ನಿಮ್ಮನ್ನು ಸಮೀಪಿಸಿದರೆ – ಅವರನ್ನು ನಿರ್ಲಕ್ಷಿಸಿ ಮತ್ತು ನಿಮ್ಮ ಮನಸ್ಸಿನಲ್ಲಿ ಈ ಚಿಂತೆ ಬೇರೂರಲು ಅವಕಾಶ ನೀಡಬೇಡಿ. ಇಂದು, ನೀವು ನಿಮ್ಮ ಪ್ರಿಯತಮೆ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿದುಕೊಳ್ಳುತ್ತೀರಿ. ನೀವು ಒಂದು ಪರಿಸ್ಥಿತಿಯಿಂದ ಓಡಿಹೋದಲ್ಲಿ – ಇದು ನಿಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಸರಿಸುತ್ತದೆ. ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಖಂಡಿತವಾಗಿಯೂ ವಿಶ್ವಾಸದ ಕೊರತೆಯಿರುತ್ತದೆ. ಮದುವೆಯ ಸಂಬಂಧವೂ ಬಿರುಕು ಬಿಡುತ್ತದೆ.

ಕನ್ಯಾ ರಾಶಿ

ನಿಮ್ಮ ಬಗ್ಗೆ ನಿಮಗೇ ಉತ್ತಮ ಅಭಿಪ್ರಾಯ ಬರಲು ಕೆಲಸಗಳನ್ನು ಮಾಡಲು ಒಂದು ಅದ್ಭುತ ದಿನ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ. ಇಂದು ನಿಮ್ಮ ಹೃದಯ ಬಡಿತವು ನಿಮ್ಮ ಸಂಗಾತಿಯೊಡನೆ ಲಯದಲ್ಲಿ ಪ್ರೀತಿಯ ಸಂಗೀತವನ್ನು ನುಡಿಸುತ್ತದೆ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ, ನಿಮ್ಮ ಸಂಗಾತಿ ಇಂದು ನಿಮಗೆ ಇದನ್ನು ಸಾಬೀತು ಮಾಡುತ್ತಾಳೆ.

ತುಲಾ ರಾಶಿ

ನಿಮ್ಮ ಜಗಳಗಂಟ ನಡವಳಿಕೆ ನಿಮ್ಮ ಸಂಬಂಧವನ್ನು ಶಾಶ್ವತವಾಗಿ ಹಾಳು ಮಾಡಬಹುದಾದ್ದರಿಂದ ಅದನ್ನು ನಿಯಂತ್ರಣದಲ್ಲಿಡಿ. ನೀವು ತೆರೆದ ಮನಸ್ಸನ್ನು ಹೊಂದುವ ಮೂಲಕ ಮತ್ತು ಯಾರಾದರ ವಿರುದ್ಧ ಪೂರ್ವಾಗ್ರಹವನ್ನು ಕೈಬಿಡುವ ಮೂಲಕ ಇದರಿಂದ ಹೊರಬರಬಹುದು. ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ಕುಟುಂಬದವರು, ಮಕ್ಕಳು ಮತ್ತು ಸ್ನೇಹಿತರೊಂದಿಗೆ ಕಳೆದ ಸಮಯ ನಿಮ್ಮ ಚೈತನ್ಯವನ್ನು ಮರಳಿ ನೀಡಲು ಮುಕ್ತವಾಗಿರುತ್ತದೆ. ಸ್ನೇಹ ಕಳೆದುಕೊಳ್ಳುವ ಸಾಧ್ಯತೆಗಳು ಇಂದು ಹೆಚ್ಚಾಗಿರುವುದರಿಂದ ಎಚ್ಚರಿಕೆಯಿಂದಿರಿ. ನೀವು ಇಂದು ಜನರೊಡನೆ ಬೆರೆಯಲು ಬಿಡುವಿನ ವೇಳೆಯನ್ನು ಹೊಂದಿದ್ದೀರಿ ಮತ್ತು ನೀವು ಅಧಿಕವಾಗಿ ಮಾಡಬಯಸುವ ವಿಷಯಗಳನ್ನು ಮಾಡುತ್ತೀರಿ. ನಿಮ್ಮ ಸಂಗಾತಿ ಇಂದು ನಿಮ್ಮನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸಬಹುದಾಗಿದ್ದು ಇದರಿಂದ ನಿಮಗೆ ಸ್ವಲ್ಪ ನೋವಾಗಬಹುದು.

RELATED ARTICLES  ವಿದ್ವಾನ್ ಉಮಾಕಾಂತ್ ಭಟ್ಟರಿಗೆ ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ

ವೃಶ್ಚಿಕ ರಾಶಿ

ಇಂದು ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಹಣಕಾಸು ಸ್ಥಿತಿ ಊಹಾಪೋಹ ಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ. ಕುಟುಂಬದಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯ ಆರೋಗ್ಯ ಸ್ವಲ್ಪ ಒತ್ತಡಕ್ಕೆ ಕಾರಣವಾಗಬಹುದು. ಪ್ರೀತಿ ಇಂದ್ರಿಯಗಳ ಮಿತಿಯನ್ನು ಮೀರಿದ್ದಾಗಿದೆ, ಆದರೆ ನಿಮ್ಮ ಇಂದ್ರಿಯಗಳು ಇಂದು ಪ್ರೀತಿಯ ಭಾವಪರವಶತೆಯನ್ನು ಅನುಭವಿಸುತ್ತವೆ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ಇಂದು, ನಿಮ್ಮ ಸಂಗಾತಿಯು ಪ್ರಪಂಚದಲ್ಲಿ ನೀವೊಬ್ಬರೇ ಇರುವ ಹಾಗೇ ನಡೆದುಕೊಳ್ಳುತ್ತಾರೆ.

ಧನು ರಾಶಿ

ನಿಮ್ಮ ನೀಡುವ ವರ್ತನೆ ಪರೋಕ್ಷವಾಗಿ ನಿಮಗೆ ಆಶೀರ್ವಾದವೇ ಆಗುತ್ತದೆ, ಏಕೆಂದರೆ ನೀವು ಅನುಮಾನ, ನಿರಾಸೆ, ವಿಶ್ವಾಸರಾಹಿತ್ಯ ಅಹಂಭಾವ ಮತ್ತು ಅಸೂಯೆಯಂಥ ಅನೇಕ ದುರ್ಗುಣಗಳಿಂದ ಮುಕ್ತಿ ಹೊಂದುವ ಸಾಧ್ಯತೆಗಳಿವೆ. ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ಮನೆಯಲ್ಲಿನ ಪರಿಸ್ಥಿತಿಗಳಿಂದ ನಿಮಗೆ ಅಸಮಾಧಾನ ಉಂಟಾಗಬಹುದು. ಪ್ರೇಮ ಜೀವನ ಭರವಸೆ ತರುತ್ತದೆ ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಇಂದು ನೀವು ನಿಮ್ಮ ಸಂಗಾತಿಯ ಜೊತೆಗೆ ಒಂದು ಸಂತೋಷಕರ ಮಾತುಕತೆಯನ್ನು ಹೊಂದುತ್ತೀರಿ, ಮತ್ತು ನೀವು ಪರಸ್ಪರರನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಅರಿತುಕೊಳ್ಳುತ್ತೀರಿ.

ಮಕರ ರಾಶಿ

ನಿಮ್ಮ ಅಧಿಕ ಚೈತನ್ಯದ ಹೊರತಾಗಿಯೂ ನೀವು ಇಂದು ನಿಮ್ಮೊಡನೆ ಇರಲಾರದ ಯಾರನ್ನಾದರೂ ನೆನಪಿಸಿಕೊಳ್ಳುತ್ತಿದ್ದೀರಿ. ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ಇಂದು ಮನೆಯಲ್ಲಿ ನೀವು ಇತರರನ್ನು ಮುಜುಗರಪಡಿಸದೇ ನಿಮ್ಮ ಕುಟುಂಬದ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಯತ್ನಿಸಬೇಕು. ನಿಮ್ಮ ಪ್ರೀತಿಪಾತ್ರರು ಸ್ವಲ್ಪ ಕಿರಿಕಿರಿಗೊಂಡಂತೆ ತೋರುತ್ತದೆ – ಇದು ನಿಮ್ಮ ಮನಸ್ಸಿನ ಮೇಲೆ ಒತ್ತಡವನ್ನು ಹಚ್ಚಿಸುತ್ತದೆ. ನೀವು ಒಂದು ಪರಿಸ್ಥಿತಿಯಿಂದ ಓಡಿಹೋದಲ್ಲಿ – ಇದು ನಿಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಸರಿಸುತ್ತದೆ. ನೀವು ಅಥವಾ ನಿಮ್ಮ ಸಂಗಾತಿಗೆ ಇಂದು ಹಾಸಿಗೆಯಲ್ಲಿ ಗಾಯವಾಗಬಹುದಾಗಿದೆ, ಆದ್ದರಿಂದ ಸೌಮ್ಯವಾಗಿ ವರ್ತಿಸಿ.

ಕುಂಭ ರಾಶಿ

ತಂದೆಯು ನಿಮ್ಮನ್ನು ಆಸ್ತಿಯ ಉತ್ತರಾಧಿಕಾರಿತ್ವದಿಂದ ತಪ್ಪಿಸಬಹುದು. ಆದರೆ ಧೃತಿಗೆಡಬೇಡಿ. ಅಭ್ಯುದಯ ಮನಸ್ಸಿಗೆ ಮುದ ನೀಡಿದರೆ ಅಭಾವ ಅದನ್ನು ಬಲಗೊಳಿಸುತ್ತದೆಂದು ನೆನಪಿಡಿ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಸ್ನೇಹಿತರು ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬೆಂಬಲ ನೀಡಬಹುದು. ನಿಮ್ಮ ಧೈರ್ಯ ಪ್ರೀತಿಯನ್ನು ಗೆಲ್ಲಬಹುದು. ಸಮಸ್ಯೆಗಳನ್ನು ಹತ್ತಿಕ್ಕುವ ಮನಸ್ಸಿರುವವರೆಗೂ ಯಾವುದೂ ಅಸಾಧ್ಯವಲ್ಲ. ನಿಮಗೆ ಮತ್ತು ನಿಮ್ಮ ಸಂಗಾತಿಗೆ ಇಂದು ಅದ್ಭುತ ಸುದ್ದಿ ಸಿಗುತ್ತವೆ.

ಮೀನ ರಾಶಿ

ನಿಮ್ಮ ಆರೋಗ್ಯ ಸುಧಾರಿಸವುದನ್ನು ಪ್ರಾರಂಭಿಸಲು ಅತ್ಯುತ್ತಮ ದಿನ. ಬ್ಯಾಂಕ್ ವ್ಯವಹರಗಳಲ್ಲಿ ಕಾಳಜಿ ವಹಿಸಬೇಕು. ಕುಟುಂಬದ ಸದಸ್ಯರು ನಿಮ್ಮ ಜೀವನದಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿರುತ್ತಾರೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ದ್ವೇಷಿಸಿದರೂ ನೀವು ಪ್ರೀತಿ ತೋರಿಸಬೇಕು. ನಿಮ್ಮ ಸ್ಪರ್ಧಾತ್ಮಕ ಸ್ವಭಾವ ನೀವು ಪ್ರವೇಶಿಸುವ ಯಾವುದೇ ಸ್ಪರ್ಧೆಯಲ್ಲೂ ನಿಮ್ಮನ್ನು ಗೆಲ್ಲಿಸುತ್ತದೆ. ನಿಮ್ಮ ಸಂಗಾತಿಯ ಸೋಮಾರಿತನ ಇಂದು ನಿಮ್ಮ ಅನೇಕ ಕೆಲಸಗಳಿಗೆ ತೊಂದರೆಯುಂಟುಮಾಡಬಹುದು.