ಬೆಂಗಳೂರು : ಲೋಕಸಭಾ ಚುನಾವಣಾ ದಿನಾಂಕವನ್ನು ಏಪ್ರಿಲ್ 23ಕ್ಕೆ ನಿಗದಿಪಡಿಸಿರುವುದರಿಂದ ಏಪ್ರೀಲ್  23 ಮತ್ತು 24ರಂದು ನಡೆಯಬೇಕಿದ್ದ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳ ಸಭೆ  ಇಂದು ನಡೆಯಲಿದ್ದು, ಮಧ್ಯಾಹ್ನದೊಳಗೆ ಸಿಇಟಿ ಪರೀಕ್ಷೆ ಹೊಸ ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ. ಇಂಜಿನಿಯರಿಂಗ್‌ ಸೇರಿದಂತೆ ಇತರೆ ತಾಂತ್ರಿಕ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ಸಿಇಟಿ ವೇಳಾಪಟ್ಟಿ ಪ್ರಕಟಿಸಿತ್ತು. ಏಪ್ರೀಲ್  23ರಂದು ಜೀವಶಾಸ್ತ್ರ, ಗಣಿತ ಮತ್ತು ಏಪ್ರೀಲ್  24ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು.

  ಆದರೆ, ರಾಜ್ಯದಲ್ಲಿ ಏಪ್ರೀಲ್  23 ರಂದು ಚುನಾವಣೆ ನಡೆಯಲಿದೆ. ಅಧಿಕಾರಿಗಳು ಇಂದು ಚರ್ಚಿಸಿ ಹೊಸ ದಿನಾಂಕ ಘೋಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.