ಕುಮಟಾ: ಪಟ್ಟಣದ ದೇವರಹಕ್ಕಲಿನ ಪುರಾಣ ಪ್ರಸಿದ್ಧ ಶ್ರೀ ಶಾಂತಿಕಾ ಪರಮೇಶ್ವರಿ ದೇವರ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ ಸಾಂಗತ್ಯ ಪ್ರಸ್ತುತ ಶಿಖರ ಮಂಟಪಯುಕ್ತ ದೇವ ಮಂದಿರದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕøತಿಕ ಕಾರ್ಯಕ್ರಮವನ್ನು ಎಡನೀರು ಮಠದ ಪ.ಪೂ.ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಗಳು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು. ಶ್ರೀ ದೇವರ ಆಡಳಿತ ಮಂಡಳಿ ಹಾಗೂ ಈ ಭಾಗದ ಭಜಕ ಜನರ ಆಗ್ರಹದ ಮೇರೆಗೆ ಆಗಮಿಸಿರುವುದಾಗಿಯೂ ಇಲ್ಲಿಯ ಆಸ್ತಿಕರ ಅವ್ಯಾಹತ ಭಕ್ತಿ ಹಾಗೂ ಪ್ರೀತಿ ದೇವಸ್ಥಾನದೊಂದಿಗಿನ ಹೊಂದಿರುವ ಅವಿನಾಭಾವ ಸಂಬಂಧವನ್ನು ಸ್ಮರಿಸುತ್ತಾ ಉತ್ತೋತ್ತರ ಅಭಿವೃದ್ಧಿ ಸಿದ್ಧಿಗಾಗಿ ತಮ್ಮ ಆರಾಧ್ಯ ದೈವ ಶ್ರೀ ದಕ್ಷಿಣಾಮೂರ್ತಿ ಶ್ರೀ ಗೋಪಾಲಕೃಷ್ಣ ದೇವರಲ್ಲಿ ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಪರವಾಗಿ ಎಂ.ಬಿ.ಪೈ ಸ್ವಾಗತಿಸಿದರು. ವಹಿವಾಟ ಮೊಕ್ತೇಸರ ಕೃಷ್ಣ ಬಾಬಾ ಪೈ ಫಲ- ಪುಷ್ಪಾರ್ಚನೆಗೈದರು. ವೇದಿಕೆಯಲ್ಲಿ ಅರ್ಚಕ ರಾಜು ಗುನಗಾ, ಪ್ರಧಾನ ಪುರೋಹಿತ ವಿದ್ವಾನ್ ನಾರಾಯಣ ಉಮಾಶಿವ ಉಪಾಧ್ಯ, ಗೋಕರ್ಣ ಮೊದಲಾದವರು ಉಪಸ್ಥಿತರಿದ್ದರು. ಮೊದಲ ದಿನದ ಸಾಂಸ್ಕøತಿಕ ಕಾರ್ಯಕ್ರಮವನ್ನು ಶ್ರೀ ವೆಂಕಟರಮಣ ದೇವ ಮತ್ತು ಶ್ರೀ ಶಾಂತಿಕಾ ಪರಮೇಶ್ವರಿ ದೇವಳಗಳ ವಾದ್ಯವೃಂದದ ಜಿಲ್ಲೆಯ ಪ್ರಖ್ಯಾತ ಸೆಕ್ಸೋಫೋನ್ ವಾದಕ ರಂಗರಾಜ ಪಿಳ್ಳೆ ಮತ್ತು ತಂಡದವರ ನಾದ ಸಂಗಮ ದೇವರ ಕುರಿತಾದ ವಾದ್ಯ ಸಂಗೀತ ನೆರೆದ ಶ್ರೋತೃವರ್ಗವನ್ನು ಮಂತ್ರಮುಗ್ದರನ್ನಾಗಿಸಿತು.

RELATED ARTICLES  JEE (MAIN) ಪರೀಕ್ಷೆಯಲ್ಲಿ ಸರಸ್ವತಿ ಪಿ.ಯು ಕಾಲೇಜು ವಿದ್ಯಾರ್ಥಿಗಳ ಸಾಧನೆ.

ನೃತ್ಯಸ್ವರ ಕಲಾ ಟ್ರಸ್ಟ್‍ನ ವಿದೂಷಿ ವಿಜೇತಾ ಭಂಡಾರಿ ನಿರ್ದೇಶನದ ಭರತನಾಟ್ಯ ಕಾರ್ಯಕ್ರಮ ನೃತ್ಯಲಹರಿ ಹೊಸ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು. ಈ ಭಾಗದ ಅರಳು ಕಲಾವಿದರಿಗೆ ವೇದಿಕೆಯನ್ನೊದಗಿಸಿದ್ದು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ರಾಜ್ಯದ ಪ್ರಖ್ಯಾತ ಕಲಾವಿದರಿಂದ ಲವಕುಶ ಯಕ್ಷಗಾನ ಪ್ರದರ್ಶನ ಯಕ್ಷ ಸಂಭ್ರಮ ನೂನತವಾಗಿ ರಚಿತವಾದ ಶ್ರೀ ಶಾಂತಿಕಾ ಯಕ್ಷ ಮಿತ್ರ ಬಳಗದವರ ಪ್ರಸ್ತುತಿ ರಸದೌತಣ ನೀಡಿತು.

RELATED ARTICLES  ಅವೈಜ್ಞಾನಿಕ ಚತುಷ್ಪತ ಕಾಮಗಾರಿ : ರೈತರ ಪ್ರತಿಭಟನೆ: ಮನವಿ ಸಲ್ಲಿಕೆ

ಸಂಪೂರ್ಣ ಸಾಂಸ್ಕøತಿಕ ಸಂಚಿಯ ಪರಿಚಯ, ನಿರೂಪಣೆ ಹಾಗೂ ನಿರ್ವಹಣೆಯನ್ನು ಈಶ್ವರ ಭಟ್ಟ, ಜಯದೇವ ಬಳಗಂಡಿ, ಎನ್.ಆರ್.ಗಜು, ಅರುಣ ಮಣಕೀಕರ, ಕಿರಣ ಪ್ರಭು ಮತ್ತು ಮಂಜುನಾಥ ನಾಯ್ಕ ನೆರವೇರಿಸಿದರು.