ಕುಮಟಾ- ಇತ್ತೀಚೆಗೆ ನಿಧನರಾದ ಬಡಗುತಿಟ್ಟಿನ ಯಕ್ಷಗಾನ ಹಿರಿಯ ಮೇರು ನಟ ಜಲವಳ್ಳಿ ವೆಂಕಟೇಶರಾವ್ ಹಾಗೂ ಹವ್ಯಾಸಿ ಯಕ್ಷಗಾನ ಹಿರಿಯ ಕಲಾವಿದ ಬರ್ಗಿಯ ಎನ್.ಎಂ. ಪಟಗಾರ ಇವರಿಗೆ ಕಲಾಗಂಗೋತ್ರಿ ಕುಮಟಾ ಇವರಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು.

ಇಲ್ಲಿನ ಎ.ಪಿ.ಎಂ.ಸಿ. ರೈತ ಭವನದಲ್ಲಿ ನಡೆದ ಶೃದ್ಧಾಂಜಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಕಲಾವಿದ ಡಾ|| ಎಂ.ಆರ್. ನಾಯಕ ಇವರು ಮಾತನಾಡಿ ಜಲವಳ್ಳಿ ವೆಂಕಟೇಶರಾವ್ ಇವರು ಯಕ್ಷಗಾನ ಪಾತ್ರದಲ್ಲಿ ಮಾತಿಗಿಂತ ಗತ್ತುಗಾರಿಕೆಯ ಮೂಲಕ ಪ್ರೇಕ್ಷಕರ ಮನಮುಟ್ಟಿದ ಅಪೂರ್ವ ಕಲಾವಿದ್ದರಾಗಿದ್ದರು. ತಮ್ಮ ಗತ್ತುಗಾಂಭೀರ್ಯ, ಮುಖವಣ ್ಕೆ, ಅಬ್ಬರದ ಸ್ವರದ ಮೂಲಕ ಪಾತ್ರ ಪೋಷಣೆ ಮಾಡುತ್ತಿದ್ದರು. ಯಕ್ಷಗಾನದಲ್ಲಿ ಆಂಗಿಕ, ವಾಚಿಕ, ಸಾತ್ವಿಕ ಹಾಗೂ ಆಹಾರ್ಯ ಗುಣಗಳ ಪ್ರತೀಕವಾಗಿದ್ದರು. ಯಕ್ಷಗಾನ ಲೋಕದ ಅಭಿನವ ಶನಿಯೆಂದೇ ಪ್ರಖ್ಯಾತರಾಗಿದ್ದರು. ಜಲವಳ್ಳಿ ವೆಂಕಟೇಶರಾವ್ ಹಾಗೂ ಬರ್ಗಿಯ ಹವ್ಯಾಸಿ ಕಲಾವಿದ ಎನ್.ಎಂ. ಪಟಗಾರ ಇವರ ನಿಧನ ಯಕ್ಷಲೋಕಕ್ಕೆ ತುಂಬಲಾರದ ನಷ್ಟ ಎಂದರು.

RELATED ARTICLES  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಲಿದೆ ಬಿಜೆಪಿ: ವಿಕ್ರಮಾರ್ಜುನ ತಿಂಗಳೆ ವಿಶ್ವಾಸ

ಕಲಾಗಂಗೋತ್ರಿಯ ಉಪಾಧ್ಯಕ್ಷರಾದ ಗಣೇಶ ಭಟ್ಟ ಇವರು ಮಾತನಾಡಿ ಜಲವಳ್ಳಿ ವೆಂಕಟೇಶರಾವ್ ಇವರು ಯಕ್ಷಗಾನ ಲೋಕದಲ್ಲಿ ಚಿಟ್ಟಾಣ ಯವರೊಂದಿಗೆ ಸಮಕಾಲೀನರಾಗಿ ಮೆರೆದ ಅಪ್ರತಿಮ ಕಲಾವಿದರಾಗಿದ್ದರು. ಕಲಾಗಂಗೋತ್ರಿ ಹಾಗೂ ಜಲವಳ್ಳಿಯವರ ನಡುವೆ ಅವಿನಾಭಾವ ಸಂಬಂಧವಿತ್ತು. ದಿ|| ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಹಾಗೂ ಕಲಾಗಂಗೋತ್ರಿ ಪ್ರಶಸ್ತಿಗಳೆರಡನ್ನು ಪಡೆದ ಏಕೈಕ ಯಕ್ಷಗಾನ ಕಲಾವಿದರಾಗಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಹಿರಿಯ ಸಂಘಟಕರಾದ ಶ್ರೀಧರ ಶಾಸ್ತ್ರಿ, ಅಶೋಕ ಕಾಮತ, ಶ್ರೀಪತಿ ನಾವುಡ, ಪುರಸಭಾ ಸದಸ್ಯ ಎಂ.ಟಿ. ನಾಯ್ಕ, ಎಸ್.ಟಿ. ಭಟ್ಟ ಇನ್ನಿತರರು ನುಡಿನಮನ ಸಲ್ಲಿಸಿದರು. ಕಲಾಗಂಗೋತ್ರಿ ಪ್ರಧಾನ ಕಾರ್ಯದರ್ಶಿ ಆರ್.ಡಿ. ಪೈ ಸ್ವಾಗತಿಸಿ ವಂದಿಸಿದರು. ಪ್ರಾರಂಭದಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು.

RELATED ARTICLES  ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು : ಕಾರವಾರದಲ್ಲಿ ಇಬ್ಬರ ದುರ್ಮರಣ