ಕುಮಟಾ : ಮಹಾಸತಿ ಗೆಳೆಯರ ಬಳಗ  ಅವರು ನಡೆಸಿರುವ ಕ್ರಿಕೆಟ್ ಟೂರ್ನಮೆಂಟ್ ಅನ್ನು ಬಿ.ಜೆ.ಪಿಯ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಸಂಚಾಲಕರಾದ ಪ್ರೊ. ಎಂ.ಜಿ ಭಟ್ಟ ಉದ್ಘಾಟಿಸಿದರು.

ಕಾರ್ಯಮದಲ್ಲಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ರೀಡೆ ಮನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ , ಅಲ್ಲದೆ ನಮ್ಮೊಳಗಿನ ಸಂಕುಚಿತ ಭಾವನೆಯನ್ನು ಹೊಡೆದು ಹಾಕಿ ವಿಶಾಲ ಮನೋಭಾವವನ್ನು ಬೆಳೆಸುತ್ತದೆ ಅದು ಸಂಘಟನೆಯ ವಿಶೇಷ. ಇಂದಿನ ಯುವಕರು ಕ್ರೀಡೆಗಳಲ್ಲಿ ಎಷ್ಟು ಆಸಕ್ತಿಯನ್ನು ಹೊಂದಿರುತ್ತಾರೆ ಆಸಕ್ತಿಯನ್ನು ದೇಶಪ್ರೇಮದ ಪ್ರದೇಶದ ಬಗ್ಗೆಯೂ ವಹಿಸಬೇಕು ಪ್ರತಿಯೊಬ್ಬರನ್ನು ರಾಷ್ಟ್ರಪ್ರೇಮ ದೇಶಪ್ರೇಮ ತುಂಬಿರಬೇಕು ಎಂದರು.

RELATED ARTICLES  ಮೋಹನ ಭಾಸ್ಕರ ಹೆಗಡೆ ಬರೆದ ಆಯುರ್ವೇದ ಯುಗಬಂಧು ಡಾ. ಗಿರಿಧರ ಕಜೆ ಕೃತಿ ಬಿಡುಗಡೆ

   ನಾವು ವಾಸಿಸುತ್ತಿರುವ ಸ್ಥಳದಲ್ಲಿ ಇರುವ ಕಷ್ಟದಲ್ಲಿ ಇರುವ ತೊಂದರೆ ಇರುವವರಿಗೆ ಸಹಾಯ ಮಾಡುವುದರ ಮೂಲಕ ಪ್ರಕಾರ ಮನೋಭಾವ ಹೊಂದಬೇಕು. ಇಂದು ಅನೇಕರಲ್ಲಿ ಸ್ವಾರ್ಥ ಬುದ್ಧಿ ತುಂಬಿತುಳುಕುತ್ತಿದೆ ಅದರಿಂದ ನಮ್ಮ ಯುವಕರು ಹೊರಗಡೆ ಬಂದು ವಿಶಾಲ ಮನೋಭಾವ ಹೊಂದಿರಬೇಕು. ಸಮಾಜ ಸೇವೆಗೆ ನಿಮ್ಮ ಗುರಿಯಾಗಲಿ ತನ್ಮೂಲಕ ದೇಶ ಸೇವೆ ನಿಮ್ಮಿಂದ ಆಗಲಿ. ನಿಮ್ಮ ಪ್ರತಿಯೊಂದು ಒಳ್ಳೆಯ ಕೆಲಸಗಳ ಹಿಂದೆ ನಾನು ಕೂಡ ನಿಮ್ಮೊಡನೆ ಇದ್ದೇನೆ ಎಂದು ಯುವಕರನ್ನು ಹುರಿದುಂಬಿಸುವ ಮಾತುಗಳನ್ನಾಡಿದರು.

RELATED ARTICLES  ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ: ಸತತ ಸಾಧನೆಯ ಹೆಮ್ಮೆ

ವೇದಿಕೆಯಲ್ಲಿ ವಿನಾಯಕ ನಾಯಕ್ ಫ್ರಾನ್ಸಿಸ್ ಫೆರ್ನಾಂಡಿಸ್ ಫರ್ನಾಂಡಿಸ್ ಗಜಾನನ ನಾಯ್ಕಹಾಗೂ ಜಿ ಐ.ಹೆಗಡೆ ಇದ್ದರು.