ಕರ್ಜೂರದ ರುಚಿ ಕಂಡವರು ತಿನ್ನೋದನ್ನು ಬಿಡೋದಿಲ್ಲ. ಈ ಕರ್ಜೂರದಲ್ಲಿ ಕಬ್ಬಿಣ, ಖನಿಜಾಂಶ, ಕ್ಯಾಲ್ಸಿಯಂ, ಅಮೈನೊ ಆ್ಯಸಿಡ್, ರಂಜಕ ಹಾಗೂ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಮಧುಮೇಹಿಗಳಿಗೆ ಇದು ಒಳ್ಳೆಯದು.

ದೇಹದಲ್ಲಿ ರಕ್ತ ಕಡಿಮೆಯಿರುವವರು ಪ್ರತಿದಿನ ಕರ್ಜೂರವನ್ನು ತಿನ್ನುವುದು ಬಹಳ ಒಳ್ಳೆಯದು. ಇದ್ರಲ್ಲಿರುವ ಕಬ್ಬಿಣಾಂಶ ರಕ್ತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಕರ್ಜೂರದಲ್ಲಿರುವ ವಿಟಮಿನ್ ಬಿ ಕೂದಲಿಗೆ ಒಳ್ಳೆಯದು. ನಿಯಮಿತವಾಗಿ ಕರ್ಜೂರ ಸೇವನೆ ಮಾಡುವುದ್ರಿಂದ ಕೂದಲುದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕಡಿಮೆ ತೂಕವುಳ್ಳವರು ಅವಶ್ಯವಾಗಿ ಕರ್ಜೂರ ತಿನ್ನಬೇಕು. ಇದ್ರಲ್ಲಿರುವ ವಿಟಮಿನ್, ಸಕ್ಕರೆ ಅಂಶ, ಜೀವಸತ್ವಗಳು ತೂಕ ಏರಲು ಸಹಾಯ ಮಾಡುತ್ತವೆ.

ಕರ್ಜೂರ ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ತಾಮ್ರವನ್ನು ಒಳಗೊಂಡಿರುವುದ್ರಿಂದ ಮೂಳೆಗಳು ಬಲ ಪಡೆಯುತ್ತವೆ.

ಮಲಬದ್ಧತೆ ಸಮಸ್ಯೆಯುಳ್ಳವರು  ಅವಶ್ಯವಾಗಿ ಕರ್ಜೂರ ಸೇವನೆ ಮಾಡಬೇಕು. ರಾತ್ರಿ ನಾಲ್ಕು ಕರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಸೇವನೆ ಮಾಡುತ್ತ ಬಂದರೆ ಕೆಲವೇ ದಿನಗಳಲ್ಲಿ ಫಲಿತಾಂಶ ನೋಡಬಹುದಾಗಿದೆ.

ಕರ್ಜೂರ ಸೇವನೆಯಿಂದಾಗುವ ಪ್ರಯೋಜನಗಳು:

1. ಕರ್ಜೂರ ಸೇವನೆಯಿಂದ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಚಳಿಗಾಲದಲ್ಲಿ ಶೀತ ಗಾಳಿಯಿಂದ ಉಂಟಾಗಬಹುದಾದ ಸಮಸ್ಯೆಗಳಿಂದ ದೂರವಿರಿಸುವುದಲ್ಲದೆ, ಅಸ್ತಮಾ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ನಿಮಗೆ ಶೀತದ ಸಮಸ್ಯೆ ಇದ್ದರೆ, ಒಂದು ಲೋಟ ಹಾಲಿಗೆ 5-6 ಕರ್ಜೂರ ಸೇರಿಸಿ, 5 ಕಾಳು ಕರಿ ಮೆಣಸು, 1 ಏಲಕ್ಕಿ ಮತ್ತು ಒಂದು ಚಮಚ ತುಪ್ಪ ಸೇರಿಸಿ ಚೆನ್ನಾಗಿ ಕುಡಿಸಿ ರಾತ್ರಿ ಮಲಗುವ ಮುನ್ನ ಅದನ್ನು ಕುಡಿದರೆ ಶೀತದಿಂದ ಪರಿಹಾರ ಪಡೆಯಬಹುದು.

RELATED ARTICLES  ನಿಮಗೆ ಆಹಾರ ಅಲರ್ಜಿ ಆಗುತಿದ್ಯಾ? ಹಾಗಾದರೆ ಅದರ ಪರಿಹಾರಕ್ಕೆ ಇಲ್ಲಿದೆ ನೋಡಿ ಮನೆ ಮದ್ದು….!

2. ಕರ್ಜೂರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಫೈಬರ್ ಇದೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಕೆಲವು ಕರ್ಜೂರವನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಅದನ್ನು ಸೇವಿಸಿ. ಕರ್ಜೂರ ಸೇವನೆಯಿಂದ ಕರುಳು ಮತ್ತು ದೇಹಕ್ಕೆ ಶಕ್ತಿ ಸಿಗುತ್ತದೆ. ಇದಲ್ಲದೆ ಕರ್ಜೂರಗಳಲ್ಲಿ ನಿರ್ದಿಷ್ಟವಾದ ಪದಾರ್ಥಗಳು ಈಸ್ಟ್ ಗೆ ಜನ್ಮ ನೀಡುತ್ತದೆ. ಅದು ಕರುಳನ್ನು ಶಕ್ತಿಯುತವಾಗಿಸಿ ಹೆಚ್ಚು ಸಕ್ರಿಯಗೊಳಿಸುತ್ತದೆ.

3. ಕರ್ಜೂರ ಸೇವನೆ ರಕ್ತ ಹೀನತೆ ಸಮಸ್ಯೆಗೆ ಪರಿಹಾರವಾಗಿದೆ. ರಕ್ತದ ಕೊರತೆಯಿದ್ದರೆ ಕರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಹಾಲು ಅಥವಾ ತುಪ್ಪದೊಂದಿಗೆ ಸೇವಿಸಿ. ಕರ್ಜೂರದ ಬಳಕೆಯಿಂದಾಗಿ ಲೋ ಬಿಪಿ ತೊಂದರೆಯಿಂದ ಕೂಡ ಪರಿಹಾರ ಕಂಡುಕೊಳ್ಳಬಹುದು. ಲೋ ಬಿಪಿ ಇರುವವರು 3-4 ಕರ್ಜೂರವನ್ನು ಬಿಸಿ ನೀರಿನಲ್ಲಿ ತೊಳೆದು ಹಸುವಿನ ಹಾಲಿನೊಂದಿಗೆ ಕುದಿಸಿ. ಈ ರೀತಿ ಕುದಿಸಿರುವ ಹಾಲನ್ನು ಬೆಳಿಗ್ಗೆ, ಸಂಜೆ ಕುಡಿಯುವುದರಿಂದ ಲೋ ಬಿಪಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

RELATED ARTICLES  ಕೈ ಯಿಂದ ಊಟಮಾಡಿದರೆ ಏನಾಗುತ್ತೆ ಗೊತ್ತಾ.?

4. ಕರ್ಜೂರದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಕರ್ಜೂರವನ್ನು ನಿಯಮಿತವಾಗಿ ತಿನ್ನುವ ಮೂಲ ಕ್ಯಾಲ್ಸಿಯಂ ಕೊರತೆ ನಿವಾರಣೆಯಾಗುತ್ತದೆ. ಕರ್ಜೂರ ಸೇವನೆಯಿಂದ ಹಿಮೊಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. , ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ಸೆಲೆನಿಯಮ್ ತುಂಬಿರುವ ಕರ್ಜೂರವನ್ನು ಗರ್ಭಿಣಿಯರು ತಿನ್ನುವುದರಿಂದ ಬಹಳ ಪ್ರಯೋಜನಕಾರಿಯಾಗಿದೆ.

5. ಶೀತ ವಾತಾವರಣದಲ್ಲಿ ಸಂಧಿವಾತದ ನೋವು ಅಸಹನೀಯವಾಗಿರುತ್ತದೆ. ಕರ್ಜೂರ ಸೇವನೆ ಈ ನೋವಿನಿಂದ ಪರಿಹಾರ ನೀಡುತ್ತದೆ. 

6. ಹಸಿವನ್ನು ಹೆಚ್ಚಿಸಲು ಕರ್ಜೂರದಲ್ಲಿರುವ ಬೀಜವನ್ನು ತೆಗೆದು ಹಾಲಿನಲ್ಲಿ ಬೇಯಿಸಿ. ತಣ್ಣಗಾದ ಬಳಿಕ ಅದನ್ನು ಸೋಸಿ ಸೇವಿಸಿ. ಈ ಹಾಲು ತುಂಬಾ ಪೌಷ್ಟಿಕವಾಗಿದ್ದು, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

7. ಕರ್ಜೂರ ಸೇವನೆಯಿಂದ ಟಾಕ್ಸಿನ್ಸ್ ನಿಂದ ದೂರವಿರಬಹುದು. 

8. ಕರ್ಜೂರ ಸೇವನೆಯಿಂದ ಮುಖದ ಹೊಳಪು ಹೆಚ್ಚುತ್ತದೆ.

9. ಕರ್ಜೂರ C ಜೀವಸತ್ವವನ್ನು ಹೊಂದಿರುತ್ತವೆ, ಇದು ಚರ್ಮವನ್ನು ರಿಂಕಲ್ಸ್ ನಿಂದ ರಕ್ಷಿಸುತ್ತದೆ.

10. ಪಾರ್ಶ್ವವಾಯು ಮತ್ತು ಎದೆ ನೋವನಿಂದ ದೂರವಿರಲು ಕೂಡ ಕರ್ಜೂರ ಸಹಾಯ ಮಾಡುತ್ತವೆ.

ನಿತ್ಯ ಕೇವಲ ಐದು ಕರ್ಜೂರವನ್ನು ಸೇವಿಸಿ ಹದಿನೈದು ದಿನಗಳಲ್ಲಿ ಇದರ ಪರಿಣಾಮ ಕಂಡುಬರುತ್ತದೆ.