ಬೆಂಗಳೂರು: ಲೋಕಸಭೆ ಚುನಾವಣಾ ವೇಳಾ ಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಏಪ್ರಿಲ್‌ 23, 24 ಮತ್ತು 25ರಂದು ನಿಗದಿಯಾಗಿದ್ದ 2019ನೇ ಸಾಲಿನ ಸಿಇಟಿ ದಿನಾಂಕವನ್ನು ಪರಿಷ್ಕರಿಸಿದ್ದು ಏಪ್ರಿಲ್‌ 29ರಿಂದ ಮೇ 1 ರವರೆಗೆ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

RELATED ARTICLES  ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಗೆಲ್ಲುತ್ತೇನೆ: ಸಿದ್ದರಾಮಯ್ಯ

ಎಂಜಿನಿಯರಿಂಗ್‌ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ(ಸಿಇಟಿ) ಪರೀಕ್ಷೆಯನ್ನು ಈ ಮೊದಲು ಏಪ್ರಿಲ್‌ 23ರಿಂದ 25ರವರೆಗೆ ನಡೆಸಲು ನಿರ್ಧರಿಸಲಾಗಿತ್ತು.

RELATED ARTICLES  ಸತ್ಕಾರ್ಯಗಳೇ ಸುಖನಿದ್ದೆಯ ಗುಟ್ಟು: ರಾಘವೇಶ್ವರ ಸ್ವಾಮೀಜಿ

ಆದರೆ ಏಪ್ರಿಲ್ 23ರಂದು ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಇರುವುದರಿಂದ ಯುವ ಮತದಾರರಿಗೆ ಮತದಾನ ಮಾಡಲು ತೊಂದರೆಯಾಗುವ ಹಿನ್ನೆಲೆಯಲ್ಲಿ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. 2019ನೇ ಸಾಲಿನ ಸಿಇಟಿಗೆ ಒಟ್ಟಾರೆ 2,02,430 ಅರ್ಜಿಗಳು ಬಂದಿವೆ ಎಂದು ವರದಿಯಾಗಿದೆ.