ಕಾರವಾರ:ಇಂದು ತಾಲೂಕಿನ ಕಿನ್ನರ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅನಂತ ಕುಮಾರ್ ಹೆಗಡೆ ರಾಹುಲ್ ಗಾಂಧಿಯವರ ಕುರಿತಾಗಿ ಠೀಕೆ ಮಾಡುವ ಮೂಲಕ ಎಂದಿನಂತೆ ತಮ್ಮ ವರಸೆ ತೋರಿದರು.
ತಮ್ಮ ಪಕ್ಷ ಸೈನ್ಯವನ್ನ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿಲ್ಲ, ದೇಶದ ಸೈನ್ಯವನ್ನ ಪ್ರಶ್ನೆ ಮಾಡುವ ನೈತಿಕತೆ ಯಾರಿಗೂ ಇಲ್ಲ ಎಂದ ಅವರು ರಾಹುಲ್ ಗಾಂಧಿ ರಫೇಲ್ ಯುದ್ದ ವಿಮಾನವನ್ನ ಮೂರು ಚಕ್ರದ ಸೈಕಲ್ ಎಂದು ಕೊಂಡಿದ್ದಾರೆ ಎಂದು ಹೆಗಡೆ ಟೀಕಿಸಿದ್ದಾರೆ. ರಾಹುಲ್ ಪಾಂಡಿತ್ಯದ ಬಗ್ಗೆ ತಾನು ಚರ್ಚೆ ಮಾಡಲು ಬರುವುದಿಲ್ಲ, ಈ ಬಾರಿ ಚುನಾವಣೆಯಲ್ಲಿ ತಾನು ಅಭಿವೃದ್ದಿ ಮತ್ತು ದೇಶ ರಕ್ಷಣೆ ವಿಚಾರವನ್ನ ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ ಎಂದರು.
ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಚುನಾವಣೆ ಆಯೋಗ ಎಲ್ಲವನ್ನ ವೀಕ್ಷಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸೈನ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಸಂಪೂರ್ಣ ಅಧಿಕಾರವನ್ನ ಕೊಟ್ಟಿದೆ ಎಂದರು. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ರಾಷ್ಟ್ರೀಯ ಪಕ್ಷ, ತನ್ನ ವಿರುದ್ಧ ಸಮರ್ಥ ಅಭ್ಯರ್ಥಿಯನ್ನ ನಿಲ್ಲಿಸುತ್ತಾರೆ ಎನ್ನುವ ವಿಶ್ವಾಸ ತನಗಿದೆ ಎಂದು ಅವರು ಹೇಳಿದರು.