ಕುಮಟಾ: ವಿನಾಯಕ ಬ್ರಹ್ಮೂರು ನಿರ್ದೇಶನದ 6ನೇ ಕಿರುಚಿತ್ರ “ಆಚೆ”ಯ ಚಿತ್ರೀಕರಣ ಪ್ರಾರಂಭವಾಗಿದ್ದು ಇಂದು ಕೆಲ ಕಡೆಗಳಲ್ಲಿ ಚಿತ್ರೀಕರಣ ನಡೆಯಿತು.

ಇಂದು ಬೆಳಿಗ್ಗೆ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಹಾಗೂ ನೂತನ ವಾಹಿನಿ ಮತ್ತು ಜನಮಾಧ್ಯಮ ದಿನಪತ್ರಿಕೆಯ ಮುಖ್ಯಸ್ಥ ಕೃಷ್ಣ ಅಬ್ಬೆಮನೆ ಮಂಗಳವಾರ ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ನಂತರ ಕ.ಸಾ.ಪ. ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ, ಚಲನಚಿತ್ರ ಎಂಬುದು ಒಂದು ಚಳವಳಿ. ನಮ್ಮ ಜಿಲ್ಲೆಯಲ್ಲಿ ಹಿಂದಿನಿಂದ ಸಾಹಿತ್ಯ ಚಳವಳಿ ನಡೆಯುತ್ತ ಬಂದಿರುವಂತೆಯೇ, ಮುಂದಿನ ದಿನಗಳಲ್ಲಿ ಕಿರುಚಿತ್ರ ನಿರ್ಮಾಣ ಚಳವಳಿ ಆಗಬೇಕಿದೆ. ಈ ಚಳವಳಿಯ ಸಾರಥ್ಯ ವಹಿಸಿರುವ ವಿನಾಯಕ ಬ್ರಹ್ಮೂರರಿಗೆ ನಮ್ಮೆಲ್ಲರ ಬೆಂಬಲ ಅಗತ್ಯವಾಗಿದೆ. ಆಚೆ ಕಿರುಚಿತ್ರ ಯಶಸ್ಸು ಗಳಿಸಲಿ ಎಂದು ಶುಭಹಾರೈಸಿದರು.

RELATED ARTICLES  ನಾಳೆ ಕುಮಟಾದಲ್ಲಿ ನಾನು ಚೌಕಿದಾರ ಕಾರ್ಯಕ್ರಮ: ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಮೋದಿ.

ನಿರ್ದೇಶಕ ವಿನಾಯಕ ಬ್ರಹ್ಮೂರು ಮಾತನಾಡಿ, ಈ ಚಿತ್ರದಲ್ಲಿ ನುರಿತ ಕಲಾವಿದರು ಅಭಿನಯಿಸುತ್ತಿದ್ದಾರೆ. ಇದೊಂದು ಮನೋವೈಜ್ಞಾನಿಕ ಕಥಾಹಂದರವುಳ್ಳ ಕಿರುಚಿತ್ರವಾಗಿದ್ದು, ಜಿಲ್ಲೆಯ ಸ್ಥಳೀಯ ಸಂಪನ್ಮೂಲಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಚಿತ್ರಕ್ಕೆ ಸುನೀಲ ಹೆಗಡೆ ತಟ್ಟಿಸರ ಅವರ ಛಾಯಾಗ್ರಹಣವಿರಲಿದೆ. ರಂಗಭೂಮಿ ಕಲಾವಿದರಾದ ದಯಾನಂದ ಬಿಳಗಿ ಹಾಗೂ ಹರೀಶ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದು, ಮುಂಬೈ ಮೂಲದ ತೇಜಸ್ವಿನಿ ಅವರೊಂದಿಗೆ ತೆರೆಹಂಚಿಕೊಳ್ಳಲಿದ್ದಾರೆ ಎಂದು ಚಿತ್ರದ ಕುರಿತು ಮಾಹಿತಿ ನೀಡಿದರು.

ನೂತನ ವಾಹಿನಿ ಮತ್ತು ಜನಮಾಧ್ಯಮ ಪತ್ರಿಕೆಯ ಮುಖ್ಯಸ್ಥ ಕೃಷ್ಣ ಅಬ್ಬೆಮನೆ ಮಾತನಾಡಿ, ಈ ಹಿಂದೆ ವಿನಾಯಕ ಬ್ರಹ್ಮೂರು ಕಿರುಚಿತ್ರ ನಿರ್ಮಾಣಮಾಡುವ ಸಂದರ್ಭದಲ್ಲಿ ಟೈಮ್‍ಪಾಸ್‍ಗೆ ಎಂಬ ಭಾವನೆ ನನ್ನಲ್ಲಿ ಮೂಡಿತ್ತು. ಆದರೆ ಅವರ ಸತತ ಪರಿಶ್ರಮದ ಫಲವಾಗಿ ಇಂದು ಜಿಲ್ಲೆಯ ಜನತೆ ಅವರ ಸಾಮಥ್ರ್ಯ ವನ್ನು ಕಾಣುವಂತಾಗಿದೆ. ಆಚೆ ಕಿರುಚಿತ್ರ ಯಶಸ್ಸು ಕಾಣಲಿ ಎಂದರು.

RELATED ARTICLES  ಇಬ್ಬರು ಶಿರಸಿಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ :ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

ಈ ಸಂದರ್ಭದಲ್ಲಿ ರಂಗಭೂಮಿಯ ಖ್ಯಾತ ಕಲಾವಿದ ಹಾಗೂ ಆಚೆ ಚಿತ್ರದ ನಾಯಕ ದಯಾನಂದ ಬಿಳಗಿ, ನಾಟಕ ಕಲಾವಿದ ಹರೀಶ, ಜನಮಾಧ್ಯಮ ದಿನಪತ್ರಿಕೆ ಉಪಸಂಪಾದಕ ಪ್ರವೀಣ ಹೆಗಡೆ, ಜಯದೇವ ಬಳಗಂಡಿ, ಛಾಯಾಗ್ರಾಹಕ ಸುನೀಲ ಹೆಗಡೆ ತಟ್ಟಿಸರ, ಪವನಕುಮಾರ ಹೆಗಡೆ, ದತ್ತುಪಟಗಾರ, ಶರತ ಹೆಗಡೆ, ಹರ್ಷಿತ ಅಂಬಿಗ, ಅನಂತ ಹೆಗಡೆ ಸೇರಿದಂತೆ ಇನ್ನಿತರರು ಇದ್ದರು.