ಅಂಕೋಲಾ : ನಮ್ಮ ಸಂವಿಧಾನ ಪ್ರತಿಯೊಬ್ಬ ಮಹಿಳೆಯರಿಗೂ ಪುರುಷರಂತೆ-ಸಮಾನ ಹಕ್ಕು ಸ್ವಾತಂತ್ರ್ಯ ಅವಕಾಶವನ್ನು ದಯಪಾಲಿಸಿದೆ. ಪ್ರತಿಯೊಬ್ಬ ಮಹಿಳೆಯು ಸಂವಿಧಾನಾತ್ಮಕವಾದ ಈ ಅರಿವನ್ನು ಹೊಂದುವ ಮೂಲಕ ಸಾಮಾಜಿಕ, ಆರ್ಥಿಕ,ರಾಜಕೀಯವಾಗಿ ಮುಂದೆ ಬರುವುದರ ಜೊತೆ ತನ್ನ ಬದುಕಿನ ಸವಾಲುಗಳನ್ನು ಶೋಷಣೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ’ ಎಂದು ಖ್ಯಾತ ಸಾಹಿತಿ ಡಾ. ಎಚ್.ಎಸ್ ಅನುಪಮಾ ಅಭಿಪ್ರಾಯಪಟ್ಟರು.
ಜಿ.ಸಿ ಪದವಿ ಕಾಲೇಜಿನಲ್ಲಿ ಮಹಿಳಾ ಕಲ್ಯಾಣ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ‘ಸಂವಿಧಾನ ಮತ್ತು ಮಹಿಳೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಹಲವು ನಿದರ್ಶನ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಮಹಿಳಾ ಕಲ್ಯಾಣ ವಿಭಾಗದ ಪ್ರೋ. ಶಾರದಾ ಐರಾಣ ಸರ್ವರನ್ನು ಸ್ವಾಗತಿಸಿದರು.ಪ್ರೋ. ರೋಹಿಣ ನಾಯಕ ಅತಿಥಿಗಳನ್ನು ಪರಿಚಯಿಸಿದರು. ನ್ಯಾಯವಾದಿ ಪ್ರೋ. ಸಂಪದಾ ಗುನಗಾ ಚರ್ಚೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರಾಚಾರ್ಯರಾದ ಡಾ. ಇಮ್ತಿಯಾಜ್ ಅಹ್ಮದ ಖಾನ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ವಿದ್ಯಾರ್ಥಿನಿಯರಾದ ಕು. ಮಾಲತಿ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು. ಸಂದ್ಯಾ ನಾಯ್ಕ ಕಾರ್ಯಕ್ರಮ ನಿರುಪಿಸಿದಳು ಪ್ರೋ.ಸುಗಂಧಾ ನಾಯ್ಕ ಕೊನೆಯಲ್ಲಿ ಸರ್ವರ ಉಪಕಾರ ಸ್ವರಿಸಿದರು.