ಕುಮಟಾ:-ಭಾರತೀಯ ಸಂಪ್ರದಾಯಗಳ ತಳಹದಿಯಲ್ಲಿ ಅತ್ಯುತ್ಕøಷ್ಟ ಶಿಕ್ಷಣ ನೀಡುತ್ತಿರುವ ಕುಮಟಾ ತಾಲೂಕಿನ ಕಲಭಾಗದ ವಿದ್ಯಾಗಿರಿಯಲ್ಲಿ ಇರುವ ಕೊಂಕಣ ಎಜ್ಯುಕೇಶನ್ ಟ್ರಸ್ಟನ ರಂಗಾದಾಸ ಶಾನಭಾಗ ಹೆಗಡೆಕರದ ಬಾಲಮಂದಿರ, ಎಲ್.ಕೆ.ಜಿ, ಯು.ಕೆ.ಜಿ, ಸರಸ್ವತಿ ವಿದ್ಯಾಕೇಂದ್ರದಲ್ಲಿ ಒಂದನೇ ತರಗತಿ, ಸಿ.ವಿ.ಎಸ್.ಕೆ ಪ್ರೌಢ ಶಾಲೆಯಲ್ಲಿ ಎಂಟನೆ ತರಗತಿ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದ ಮಹೇಶ ಪಿ.ಯು ನಿರ್ವಹಣೆಯ ಬಿ.ಕೆ.ಭಂಡಾರಕರವರ ಸರಸ್ವತಿ ಕೊಂಕಣ ಮಹೇಶ ಪಿ.ಯು. ಕಾಲೇಜಿನಲ್ಲಿ ಪ್ರವೇಶಾತಿ ಪ್ರಕ್ರಿಯೆಗಳು ಪ್ರಾರಂಭವಾಗಿದೆ..ಆಸಕ್ತರು ಸಂಸ್ಥೆಯ ಕಾರ್ಯಾಲಯವನ್ನು ಸಂಪಕಿಸಬಹುದು.ಅಥವಾ 9448519939, 9482212898 ಗೆ ಸಂಪರ್ಕಿಸಲು ಕೋರಲಾಗಿದೆ.
ವಿಶಿಷ್ಟ ಅಷ್ಟ ಭುಜಾಕೃತಿಯ ವರ್ಗಕೋಣೆಗಳ ಜೊತೆಗೆ ವರ್ಣಮಯ ಭಿತ್ತಿಚಿತ್ರದ ಗೋಡೆಗಳು,ವಿನೂತನ ಕಲಿಕಾ ಸಾಮಗ್ರಿಗಳನ್ನು ಒಳಗೊಂಡು ಆಧುನಿಕ ಶಿಕ್ಷಣಕ್ಕೆ ಹೊಂದಿಸಲಾದ ಸ್ಮಾರ್ಟ ಕ್ಲಾಸ್ ಸುಂದರ ನೈಸರ್ಗಿಕ ಪರಿಸರದಲ್ಲಿ ವೈವಿದ್ಯಮಯ ಆಟೋಪಕರಣಗಳ ಹೂತೋಟದ ಹೊರಾಂಗಣ ಹೊಂದಿರುವ ರಂಗಾದಾಸ ಶಾನಭಾಗ ಹೆಗಡೆಕರ ಬಾಲಮಂದಿರ ಮಗುವಿನ ಸರ್ವತೋಮುಖ ಬೆಳವಣಿಗೆಗೆ ನಾಂದಿ ಹಾಡುತ್ತಿದೆ.
ಕನ್ನಡ, ಇಂಗ್ಲೀಷ, ಸಂಸ್ಕøತ, ಹಿಂದಿ, ಕೊಂಕಣ ಭಾಷಾ ವಿಷಯಗಳನ್ನು ಕಲಿಸುವ ಮೂಲಕ ಭಾರತೀಯ ಸಂಸ್ಕಾರಗಳನ್ನು ನೀಡುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಭಾ ಕಾರಂಜಿಯಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಜಿಲ್ಲೆಯಲ್ಲಿಯೇ ಪ್ರತಿ ವರ್ಷ ದಾಖಲೆಯ ಸಾಧನೆ ಮಾಡಿ ತನ್ನದೇ ಹೆಸರು ಗಳಿಸಿರುವ ಸರಸ್ವತಿ ವಿದ್ಯಾ ಕೇಂದ್ರದಲ್ಲಿಯೂ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದೆ.
ಪ್ರಥಮ ಭಾಷಾ ವಿಷಯವಾಗಿ ಇಂಗ್ಲೀಷ/ಸಂಸ್ಕøತ ಕಲಿಕೆಗೆ ಅವಕಾಶ ಹೊಂದಿರುವ ಪ್ರತಿ ವರ್ಷ100% ಫಲಿತಾಂಶ ದಾಖಲಿಸಿ ವಿಜ್ಞಾನ ವಸ್ತು ಪ್ರದರ್ಶನ, ಪ್ರತಿಭಾ ಕಾರಂಜಿ, ರಸಪ್ರಶ್ನೆಗಳಲ್ಲಿ ರಾಜ್ಯ ಮಟ್ಟದ ಸಾಧನೆ ಹೊಂದಿರುವ ವಿಶಾಲ ಕ್ರೀಡಾಂಗಣ ಹಾಗೂ ಅಟಲ್ ಟೆಂಕರಿಂಗ್ ಲ್ಯಾಬ್ ಸೌಲಭ್ಯ ಹೊಂದಿರುವ ತಾಲೂಕಿನ ಏಕೈಕ ಪ್ರೌಢ ಶಾಲೆ ಸಿ.ವಿ.ಎಸ್.ಕೆ ಪೌಢಶಾಲೆಯಾಗಿರುವುದು ಸಂಸ್ಥೆಯ ಹೆಮ್ಮೆ.
ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸಿರುವ ಮಹೇಸ ಪಿಯು ಅವರಿಂದ ಜಿಲೆಯಲ್ಲಿಯೇ ಪ್ರಥಮ ಬಾರಿಗೆ ಸಂಪೂರ್ಣ ಆಧುನಿಕೃತ ಶಿಕ್ಷಣ ವ್ಯವಸ್ಥೆ ಹೊಂದಿರುವ CET,JEE,NEET .
ಪರೀಕ್ಷಾ ತರಬೇತಿ ವ್ಯವಸ್ಥೆ ಹೊಂದಿರುವ ಸರಸ್ವತಿ ಕೊಂಕಣ ಮಹೇಶ ಪಿ.ಯು.ಕಾಲೇಜಿನಲ್ಲಿ ಸೈನ್ಸ , ಹಾಗೂ ರಾಜ್ಯಮಟ್ಟದಲ್ಲಿ 8 ನೇ ರ್ಯಾಂಕ್ ನೊಂದಿಗೆ ಶೇ.100 ರ ಫಲಿತಾಂಶ ದಾಖಲಿಸಿರುವ ನುರಿತ ಉಪನ್ಯಾಸಕರನ್ನೊಳಗೊಂಡ ವಾಣ ಜ್ಯ ಪಿ.ಯು.ಕಾಲೇಜ್ ವಿಭಾಗದಲ್ಲಿಯೂ ದಾಖಲಾತಿ ಪ್ರಾರಂಭವಾಗಿದೆ.
“ಗ್ರಾಮೀಣ ಕೃಪಾಂಕದ ಸೌಲಭ್ಯ”
ಒಂದರಿಂದ ಹತ್ತನೇ ತರಗತಿಯವರೆಗೆ ನಮ್ಮ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಅಭ್ಯರ್ಥಿ ದಾಖಲೆ ದೊರೆಯಲಿದ್ದು ಇದು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಉದ್ಯೋಗ ಆಯ್ಕೆ ಪ್ರಕ್ರಿಯೆಗಳಿಗೆ ಅನುಕೂಲ ಆಗಲಿದೆ.
ವಿಶೇಷ ಸೌಲಭ್ಯಗಳು
25 ವರ್ಷಗಳಿಂದ ಶಿಕ್ಷಣದಲ್ಲಿ ವೈವಿದ್ಯತೆಯ ಮೂಲಕ ಹೆಸರುಗಳಿಸಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ ವಿದ್ಯಾರ್ಥಿಗಳಿಗೆ ಗೋಕರ್ಣ, ಹೊನ್ನಾವರ, ಬಾಡ, ಚಂದಾವರ, ನವಿಲಗೋಣ. ಈ ಎಲ್ಲಾ ಭಾಗಗಳಿಗೆ ಸುಸಜ್ಜಿತ ಶಾಲಾ ಬಸ್ ವ್ಯವಸ್ಥೆ ಕಲ್ಪಿಸಿದೆ. ನರ್ಸರಿ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಅವಧಿಯಲ್ಲಿಯೇ ಬಸ್ ವ್ಯವಸ್ಥೆ ಪ್ರಾರಂಭಿಸಿರುವುದು ಇನ್ನೊಂದು ವಿಶೇಷ. ಶುದ್ಧ, ಹಾಗೂ ಸ್ವಾದಿಷ್ಟ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿರುವ ಮೂಲಕ ಜನ ಮೆಚ್ಚುಗೆ ಗಳಿಸಿದೆ. ವಿಶಾಲ ಕ್ರೀಡಾಂಗಣ, ಸ್ಮಾರ್ಟ ಕ್ಲಾಸ್, ಕ್ರೀಡೋಪಕರಣಗಳು, ವಿಜ್ಞಾನ ಲ್ಯಾಬ್‍ಗಳನ್ನು ಒದಗಿಸಿರುವ ಕೊಂಕಣ ಎಜ್ಯುಕೇಶನ್ ನುರಿತ ಹಾಗೂ ಅನುಭವಿ ಶಿಕ್ಷಕ ವೃಂದದವರನ್ನು ಹೊಂದಿದೆ.