ಕುಮಟಾ: ಇಲ್ಲಿಯ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಜರುಗುತ್ತಿರುವ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಸಂಪೂರ್ಣ ಉಚಿತವಾಗಿ ಏರ್ಪಡಿಸಲಾಗಿತ್ತು. ಸುಮಾರು ಎರಡು ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಸೂಕ್ತ ಚಿಕಿತ್ಸೆ ಉಚಿತ ಜೌಷಧಗಳನ್ನು ಪಡೆದು ಉಪಕೃತರಾದರು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಪ್ರಾಯೋಜಕಿ ಹಾಗೂ ಶ್ರೀನಿವಾಸ ಚ್ಯಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷೆ ಮೀರಾ ಶಾನಭಾಗ ಮಾತನಾಡುತ್ತಾ ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ ಸಾಧನೆಗೆ ಆಯುರ್ವೇದವೇ ರಹದಾರಿಯಾಗಿದ್ದು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಇದನ್ನೂ ಮೇಳೈಸಿ ಅರಿವು ಹಾಗೂ ಚಿಕಿತ್ಸೆ ಸಾಮಾನ್ಯವರ್ಗದವರಿಗೂ ಲಭ್ಯವಾಗುವಂತೆ ಮಾಡಿರುವ ಸಂಘಟಕರ ಹೃದಯವಂತಿಕೆಯನ್ನು ಪ್ರಶಂಸಿಸಿದರು. ಆಯುರ್ವೇದ ತಜ್ಞೆ ವೈದ್ಯೆ ಡಾ.ಸುಗಂಧಿ ಶೆಟ್ಟಿ ಭಾರತದ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದ ಸಾರ್ವಕಾಲಿಕ, ಸರ್ವಶ್ರೇಷ್ಠ ಹಾಗಾಗಿ ಈ ಆಧುನಿಕ ಯುಗದಲ್ಲೂ ತನ್ನದೇ ಆದ ಮಹತ್ವ ಪಡೆದಿದೆ ಎಂಬುದು ಹೆಗ್ಗಳಿಕೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಸಾಕಷ್ಟು ಸಂಶೋಧನೆಗಳಿಂದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುತ್ತಿದ್ದು, ತ್ವರಿತ ಆರಾಮ ಹಾಗೂ ಆರೋಗ್ಯ ವರ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರಿಂದ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವಲ್ಲಿ ಆಯುರ್ವೇದ ಮುಂಚೂಣಿಯಲ್ಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟಕರಾದ ಎಂ.ಬಿ.ಪೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದೇವಸ್ಥಾನದ ವಹಿವಾಟ ಮೊಕ್ತೇಸರ ಕೃಷ್ಣ ಬಾಬಾ ಪೈ ಅಧ್ಯಕ್ಷತೆವಹಿಸಿದ್ದರು. ಪ್ರಾಯೋಜಕರಾದ ನಿರ್ಮಲಾ ಹೇಮ್ಕರ್ ಕಲಾವರ್ ಮುಂಬಯಿ, ಎಡನೀರು ಮಠದ ಆಡಳಿತಾಧಿಕಾರಿ ಜಯರಾಮ ಎಡನೀರು. ಮುಖ್ಯ ಪುರೋಹಿತ ನಾರಾಯಣ ಉಮಾಶಿವ ಉಪಾಧ್ಯಾ, ಪುರಸಭಾ ಸದಸ್ಯ ಎಂ.ಟಿ.ನಾಯ್ಕ ವೇದಿಕೆಯಲ್ಲಿದ್ದರು. ಮಂಜುನಾಥ ನಾಯ್ಕ ನಿರೂಪಿಸಿದರೆ, ಜಯದೇವ ಬಳಗಂಡಿ ನಿರ್ವಹಿಸಿದರು. ಕಿರಣ ಪ್ರಭು ವಂದಿಸಿದರು.
ದೊಡ್ಡ ಪ್ರಮಾಣದಲ್ಲಿ ಔಷಧಿ ಒದಗಿಸಿದ ರಾಜ್‍ಕೋಟ್‍ನ ಆಯುಲ್ಯಾಬ್, ಇಂಡೋರಿನ ಆರ್ಯಾ ಔಷಧಿ ಫರ್ಮಾಕ್ಯೂಟಿಕಲ್ಸ್, ಮುಂಬಯಿಯ ಸೊಲುಮಿಕ್ಸ್ ಹರ್ಬಾಕ್ಯೂಟಿಕಲ್ಸ್, ಪಲಕ್ಕಾಡ್ ವೇದಸ್ ಆಯುರ್ವೇದ, ಶೃಂಗೇರಿಯ ಆಚಾರ್ಯಾ ಶುಸ್ರುತ ಡ್ರಗ್ಸ್ ಮತ್ತು ಫಾರ್ಮಾಕ್ಯುಟಿಕಲ್ಸ್, ಕುಮಟಾದ ಝಾಪ್ಮನ್ ಆಯುರ್ವೇದ, ಶ್ರೀ ಧನ್ವಂತರಿ ಫಾರ್ಮಾಕ್ಯೂಟಿಕಲ್ಸ್ ಡಿಸ್ಟ್ರಿಬ್ಯೂಟರ್ಸ್, ಶಿರಿಸಿಯ ಪಟವರ್ಧನ ಫಾರ್ಮಾಕ್ಯೂಟಿಕಲ್ ಡಿಸ್ಟ್ರಿಬ್ಯೂಟರ್ಸ್ ಕಂಪನಿಗಳಾಗಿದ್ದವು. ಕಿರಣ ಕಾಕಡೆ ಮುಂಬಯಿ, ಕಾಶಿನಾಥ ಜೆ.ನಾಯಕ, ಗೋವಾದವರು ಮುಖ್ಯ ಪ್ರಾಯೋಜಕರಾಗಿ ನೆರವಾದರು.
ಆಯುರ್ವೇದೀಯ ತಜ್ಞ ವೈದ್ಯರಾದ ಡಾ.ಪ್ರಕಾಶ ಶೆಟ್ಟಿ, ಡಾ. ಹರ್ಷ ಹೆಗಡೆ, ಡಾ.ನಾಗರಾಜ ಭಟ್, ಡಾ.ವಿನೋದಿನಿ ಯಾಜಿ, ಡಾ.ಸುನಿತಾ ಪಟಗಾರ, ಡಾ.ಪ್ರಿಯಾ ಪೈ, ಡಾ.ಮಧುಕೇಶ್ವರ ಹೆಗಡೆ, ಡಾ.ಗೌತಮ ಪಂಡಿತ, ಡಾ.ನಿಮಿತಾ ಉಪಸ್ಥಿತರಿದ್ದು ರೋಗನಿದಾನ, ಪರಿಹಾರ ಬೋಧನೆ, ಚಿಕಿತ್ಸೆ, ಔಷಧ ನೀಡಿದರು. ರಕ್ಷಾ ಗುನಗಾ ಸಹಕರಿಸಿದರು. ಶ್ರೀನಿವಾಸ ಚ್ಯಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎ.ಪಿ.ಶಾನಭಾಗ, ಡಾ.ಜಿ.ಜಿ.ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.