ಕಾರವಾರ: ಲೋಕಸಭಾ ಚುಣಾವಣೆಗೆ ರಾಜ್ಯ ಮೈತ್ರಿ ಸರಕಾರದ ಸೀಟು ಹಂಚಿಕೆ ಬಹುತೇಖ ಅಂತಿಮಗೊಂಡಿದ್ದು, 28 ಲೋಕಸಭಾ ಸ್ಥಾನಗಳಿಗೆ ಸ್ಥಾನ ಹಂಚಿಕೆಗೊಂಡಿದೆ ಎಂಬ ಮಾಹಿತಿ ದೊರೆತಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ಮಾತುಕತೆ ಫಲಪ್ರದವಾಗಿದ್ದು, ಜೆಡಿಎಸ್ 8 ಮತ್ತು ಕಾಂಗ್ರೆಸ್ 20 ಸ್ಥಾನಗಳನ್ನು ಹಂಚಿಕೊಂಡಿವೆ.

RELATED ARTICLES  ಕುಮಟಾದ ಅಳ್ವೆಕೋಡಿ ಸಮೀಪ ಟೆಂಪೊ ಪಲ್ಟಿ : ಕಂಗಾಲಾದ ಜನತೆ

ಮಂಡ್ಯ, ಹಾಸನ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ಉತ್ತರ, ವಿಜಯಪುರ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ.

ಉತ್ತರ ಕನ್ನಡಕ್ಕೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನು ಇಳಿಸುವ ಯೋಜನೆ ನಡೆದಿದೆ. ರಾಜ್ಯದಲ್ಲಿ 20 ಸೀಟುಗಳನ್ನು ಕಾಂಗ್ರೆಸ್ ಮತ್ತು 8 ಸ್ಥಾನಗಳಿಂದ ಜೆಡಿಎಸ್ ಸ್ಪರ್ಧಿಸಲಿದೆ.

RELATED ARTICLES  ವಾಕಿಂಗ್ ಹೊರಟಿದ್ದ ವ್ಯಕ್ತಿಗೆ ಹಂದಿ ಕಚ್ಚಿ ಗಾಯ.

ಜಿಲ್ಲೆಯಲ್ಲಿ ಹಾಲಿ ಸಂಸದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹವಾ ಇದ್ದು, ಈ ಬಾರಿಯೂ ಗೆಲ್ಲುವ ವಿಶ್ವಾಸದೊಂದಿಗೆ ಸ್ಪರ್ಧಿಸಲಿದ್ದಾರೆ. ಜೆಡಿಎಸ್ನಿಂದ ಆನಂದ ಅಸ್ನೋಟಿಕರ್ ರೇಸ್ ನಲ್ಲಿದ್ದಾರೆ. ಅಸ್ನೋಟಿಕರ್ ಕಳೆದ ವಿಧಾನಸಭಾ ಚುಣಾವಣೆಯಲ್ಲಿ ರೂಪಾಲಿ ನಾಯ್ಕರೆದುರು ಸ್ಪರ್ಧಿಸಿ ಸೋತಿದ್ದರು.