ತ್ವಂ ಬ್ರಹ್ಮಾ ಸೃಷ್ಟಿಕರ್ತಾ ಚ ತ್ವಂ ವಿಷ್ಣು: ಪರಿಪಾಲಕ: |
ತ್ವಂ ಶಿವ: ಶಿವದೋsನಂತ: ಸರ್ವಸಂಹಾರಕಾರಕ: ||೧||

ಭಾವಾರ್ಥ:-ಸ್ವಾಮೀ;ಭಗವಂತನೇ;ನೀನು ಸೃಷ್ಟಿಕರ್ತ ಬ್ರಹ್ಮನೇ ಆಗಿರುವೆ. ಅಂತೆಯೇ ಜಗತ್ತಿನ ಪರಿಪಾಲಕನಾಗಿರುವ ವಿಷ್ಣುವೂ ಆಗಿರುವೆ. ಹಾಗೆಯೇ ಸಮಸ್ತವನ್ನೂ ಸಂಹರಿಸುವ ಅಂತ್ಯರಹಿತನೂ ಶುಭದಾಯಕನೂ ಆಗಿರುವ ಮಹಾದೇವ ಶಿವನೂ ಆಗಿರುವೆ.

ತ್ವಮೀಶ್ವರೋ ಗುಣಾತೀತೋ ಜ್ಯೋತಿರೂಪ:ಸನಾತನ: |
ಪ್ರಕೃತ: ಪ್ರಕೃತೀಶಶ್ಚ: ಪ್ರಾಕೃತ: ಪ್ರಕೃತೇ ಪರ: ||೨||

ಭಾವಾರ್ಥ:-ನೀನು ಆಳುವಾತನೂ, ತತ್ವ-ರಜ-ತಮೋ ಗುಣಗಳಿಗೆ ನಿಲುಕದವನೂ, ದೀಪ್ತಿರೂಪಿಯೂ ಆಗರುವೆ. ನೀನು ನಿಸರ್ಗವೂ ನಿಸರ್ಗದ ದೊರೆಯೂ ಆಗಿರುವೆ. ನೀನು ಮೂಲ ದ್ರವ್ಯ ಸ್ವರೂಪನಾದಾಗ್ಯೂ ಸ್ವಭಾವಧರ್ಮದಿಂದ ಹೊರತಾಗಿರುವೆ.

ನಾನಾರೂಪವಿಧಾತಾ ತ್ವಂ ಭಕ್ತಾನಾಂ ಧ್ಯಾನ ಹೇತವೇ |
ಯೇಷು ರೂಪೇಷು ಯತ್ಪ್ರೀತಿಸ್ತತ್ತದ್ರೂಪಂ ಬಿಭರ್ಷಿ ಚ  ||೩||

ಭಾವಾರ್ಥ:-ಭಕ್ತರು ಸ್ತುತಿಸಲೋಸುಗ ನೀನು ವಿವಿಧ ಅವತಾರಗಳನ್ನು ಧರಿಸಿರುವೆ. ಯಾವ್ಯಾವ ಅವತಾರಗಳಲ್ಲಿ ಯಾರ ಕುರಿತು ಮೆಚ್ಚುಗೆಯುಂಟಾಯಿತೋ ಅವರುಗಳಿಗಾಗಿ ಆಯಾ ಅವತಾರಗಳನ್ನು ತಾಳಿರುವೆ.

ಸೂರ್ಯಸ್ತ್ವಂ ಸೃಷ್ಟಿ ಜನಕ ಆಧಾರ: ಸರ್ವ ತೇಜಸಾಮ್ |
ಸೋಮಸ್ತ್ವಂ ಸಸ್ಯಪಾತಂ ಚ ಸತತಂ ಶೀತ ರಶ್ಮಿನಾ ||೪||

ಭಾವಾರ್ಥ:-ನೀನು ಬ್ರಹ್ಮಾಂಡದ ಉಗಮವಾದ ಸೂರ್ಯ ಸ್ವರೂಪನು.ಸಮಸ್ತ ಪೌರುಷಗಳಿಗೆ ಆಧಾರನಾಗಿರುವೆ.ನೀನು ಶೀತಲಕಿರಣಗಳಿಂದ ನಿರಂತರ ಸಸ್ಯ ಸಂಪತ್ತನ್ನು ಸಂರಕ್ಷಿಸುವ ಚಂದ್ರನೂ ಆಗಿರುವೆ.

ವಾಯುಸ್ತ್ವಂ ವರುಣಸ್ತ್ವಂ ಚ ವಿದ್ವಾಂಶ್ಚ ವಿದುಷಾಂ ಗುರು: |
ಮೃತ್ಯುಂಜಯೋ ಮೃತ್ಯುಮೃತ್ಯು: ಕಾಲಕಾಲೋ ಯಮಾಂತಕ:  ||೫||

ಭಾವಾರ್ಥ:-ವಾಯುವೇ ನೀನು.ನೀನೇ ವರುಣನು.ವಿದ್ವಾಂಸನೂ ವಿದ್ವಾಂಸರಿಗೆ ಗುರುವೂ ನೀನೇ ಆಗಿರುವೆ. ನೀನು ಕಾಲನನ್ನು ಗೆದ್ದವನು. ಕಾಲನಿಗೆ ಮಹಾಕಾಲನು. ಮೃತ್ಯುವಿಗೆ ನೀನು ಮೃತ್ಯು ಸ್ವರೂಪನು. ಯಮನಿಗೆ ನೀನು ಯಮನೂ ಆದವನು.

RELATED ARTICLES  ಖಾಸಗಿ ಬಸ್ ಡಿಕ್ಕಿ : ಸ್ಥಳದಲ್ಲಿಯೇ ಪಾದಾಚಾರಿ ಸಾವು : ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಸಾವು ಕಂಡ ಪಾದಾಚಾರಿ.

ವೇದಸ್ತ್ವಂ ವೇದಕರ್ತಾ ಚ ವೇದವೇದಾಂಗ ಪಾರಗ: |
ವಿದುಷಾಂ ಜನಕಸ್ತ್ವಂ ಚ ವಿದ್ವಾಂಶ್ಚ ವಿದುಷಾಂ ಗುರು:  ||೬||

ಭಾವಾರ್ಥ:-ವೇದಗಳು ನೀನು. ವೇದಕರ್ತಾರನೂ, ವೇದವೇದಾಂಗಾದಿಗಳ ಪಾರಂಗತನೂ ನೀನೇ ಆಗಿರುವೆ.  ಪಂಡಿತರ ಪಿತೃಸ್ವರೂಪನು ನೀನು. ಪಂಡಿತರ ಗುರುವೂ ನೀನೇ ಆಗಿರುವೆ.

ಮಂತ್ರಸ್ತ್ವಂ ಹಿ ಜಪಸ್ತ್ವಂ ಹಿ ತಪಸ್ತ್ವಂ ತತ್ಫಲಪ್ರದ: |
ವಾಕ್ ತ್ವಂ ರಾಗಾಧಿ ದೇವೀ ತ್ವಂ ತತ್ಕರ್ತಾ ತದ್ಗುರು: ಸ್ವಯಮ್ ||೭||

ಭಾವಾರ್ಥ:-ಜಪತಪಾದಿಮಂತ್ರಗಳು ನೀನೇ ಆಗಿರುವೆ.ಅಂತೆಯೇ ಅವುಗಳಿಗೆ ಫಲವನ್ನು ಒದಗಿಸುವಾತನೂ ನೀನೇ.ವಾಕ್ಕುವು ನೀನು.ಮಮತೆಗೆ ಅಧಿದೈವವು ನೀನು. ಜನ್ಮದಾತೃವೂ,ಗುರುವೂ ನೀನೇ ಆಗಿರುವೆ.

ಅಹೋ ಸರಸ್ವತೀ ಬೀಜ ಕಸ್ತ್ವಾಂ ಸ್ತೋತು ಮಹೇಶ್ವರ: |
ಇತ್ಯೇವ ಮುಕ್ತ್ವಾ ಶೈಲೇಂದ್ರಸ್ತಸ್ಥೌ ಧೃತ್ವಾ ಪದಾಂಬುಜಂ ||೮||

ಭಾವಾರ್ಥ:-ಸಂಬೋಧನಾ ಸರಸ್ವತಿಗೆ ಬೀಜ ಸ್ವರೂಪನಾಗಿರುವ ಒಡೆಯನೇ! ಇಲ್ಲಿ ನಿನ್ನನ್ನು ಅದಾರು ಸ್ತೋತ್ರಮಾಡಬಲ್ಲರು ಎನ್ನುತ್ತಾ ಪರ್ವತರಾಜನಾಗಿರುವ ಹಿಮವಂತನು ಮಹಾದೇವ ಶಿವನ ಅಡಿದಾವರೆಗಳನ್ನು ಶಿರದಲ್ಲಿ ಧರಿಸಿದನು.

ತತ್ರೋವಾಸ ತಮಾಭೋಧ್ಯ ಚಾವರುಹ್ಯ ವೃಷಾಚ್ಛಿವ: |
ಸ್ತೋತ್ರಮೇತನ್ಮಹಾಪುಣ್ಯಂ ತ್ರಿಸಂಧ್ಯಂ ಯ: ಪಠೇನ್ನರ: ||೯||

ಭಾವಾರ್ಥ:-ಭಗವಂತನಾಗಿರುವ ಶಿವನು ನಂದಿಯ ಮೇಲೆ ಕುಳಿತು ಆ ಪರ್ವತರಾಜನಿಗೆ ಉಪದೇಶಿಸತೊಡಗಿದನು. “ಯಾರು ಈ ಪರಮ ಪಾವನವಾಗಿರುವ ಸ್ತೋತ್ರಗಳನ್ನು ದಿನದ ಮೂರೂ ಸಂಧ್ಯಾಸಮಯಗಳಲ್ಲಿ ಪಠಿಸುತ್ತಾನೋ ಆತನು….

RELATED ARTICLES  ದಿನಾಂಕ 29-09-2018ರ ನಿಮ್ಮ ರಾಶಿ ಭವಿಷ್ಯ ನೀವು ತಿಳಿಯಿರಿ: ನಿಮ್ಮ ರಾಶಿಯ ಶುಭಾಶುಭಗಳ ವಿವಿರ ಇಲ್ಲಿದೆ.

ಮುಚ್ಚ್ಯತೇ ಸರ್ವ ಪಾಪೇಭ್ಯೋ ಭಯೇಭ್ಯಶ್ಚ ಭವಾರ್ಣವೇ |
ಅಪುತ್ರೋ ಲಭತೇ ಪುತ್ರಂ ಮಾಸಮೇಕಪಠೇದ್ಯದಿ  ||೧೦||

ಭಾವಾರ್ಥ:-ಸಂಸಾರಸಾಗರದಲ್ಲಿ ಇದ್ದವನಾದಾಗ್ಯೂ ಸಮಸ್ತ ಪಾಪಗಳಿಂದ ಹಾಗೂ ಭೀತಿಗಳಿಂದ ವಿಮುಕ್ತನಾಗುವನು.ಅಲ್ಲದೆ ಸಂತತಿ ವಿಹೀನನು ಒಂದು ಮಾಸ ಪಠಿಸಿದ್ದೇ ಆದರೆ ಸಂತತಿಯನ್ನು ಹೊಂದುವನು.

ಭಾರ್ಯಾಹೀನೋ ಲಭೇದ್ಭಾರ್ಯಾಂ ಸುಶೀಲಾಂ ಸುಮನೋಹರಾಮ್ |
ಚಿರಕಾಲಗತಂ ವಸ್ತು ಲಭತೇ ಸಹಸಾ ಧ್ರುವಮ್ ||೧೧||

ಭಾವಾರ್ಥ:-ಪತ್ನಿ ವಿರಹಿತನಿಗೆ ಸುಶೀಲಳೂ, ಪರಮಸುಂದರಿಯೂ ಆಗಿರುವ ಪತ್ನಿಯು ದೊರಕುವಳು. ಅಲ್ಲದೆ ಆತನು ಬಹುಸಮಯದಿಂದ ಕಳೆದುಕೊಂಡಿರುವ ವಸ್ತುಗಳನ್ನು ಕೂಡಾ ಆತ ಖಚಿತವಾಗಿ ಪಡೆಯುವನು.

ರಾಜ್ಯಭ್ರಷ್ಟೋ ಲಭೇದ್ರಾಜ್ಯಂ ಶಂಕರಸ್ಯ ಪ್ರಸಾದತ: |
ಕಾರಾಗಾರೇ ಸ್ಮಶಾನೇ ಚ ಶತ್ರುಗ್ರಸ್ತೇsತಿಸಂಕಟೇ  ||೧೨||

ಭಾವಾರ್ಥ:-ರಾಜ್ಯಾದಿ ಸ್ಥಾನಮಾನಾದಿಗಳನ್ನು ಕಳೆದುಕೊಂಡವನು ಭಗವಂತನಾದ ಮಹಾದೇವನ ಪರಮಪ್ರಸಾದದಿಂದ ರಾಜ್ಯವನ್ನು ಪುನರಪಿ ಪಡೆಯುವನು. ಬಂದೀಖಾನೆಯಲ್ಲಿ, ಸ್ಮಶಾನದಲ್ಲಿ, ವೈರಿಗಳವಶದಲ್ಲಿರುವಾಗ ಮತ್ತು ಅತಿ ದು:ಖಿತನಾಗಿರುವಾಗ…..

ಗಭೀರೇsತಿಜಲಾಕೀರ್ಣೇ ಭಗ್ನಪೋತೇ ವಿಷಾದತೇ |
ರಣಮಧ್ಯೇ ಮಹಾಭೀತೇ ಹಿಂಸ್ರಜಂತುಸಮನ್ವಿತೇ ||೧೩||

ಭಾವಾರ್ಥ:-ಅತ್ಯಧಿಕ ಜಲದಿಂದ ಕೂಡಿದ ಆಳವಾದ ಮಹಾಜಲಾಶಯದಲ್ಲಿ ನೌಕೆಯು ಒಡೆದಿರುವಾಗ, ವಿಷಭಕ್ಷಣೆಯಾದಾಗ,ಅತಿ ಘೋರಸಂಗ್ರಾಮದಲ್ಲಿ ಸಿಲುಕಿದಾಗ,ಘಾತುಕ ಪಶುಗಳಿಂದ ಕೂಡಿದಾಗ…….

ಯ: ಪಠೇಚ್ಛ್ರದ್ಧಯಾ ಸಮ್ಯಕ್ ಸ್ತೋತ್ರ ಮೇತಜ್ಜಗದ್ಗುರೋ|
ಸರ್ವತೋ ಮುಚ್ಯತೇ ಸ್ತುತ್ವಾ ಶಂಕರಸ್ಯ ಪ್ರಸಾದತ: ||೧೪||

ಭಾವಾರ್ಥ:- ಈ ಸ್ತುತಿಯನ್ನು ಪಠಿಸಿ ಮನುಜನು ಭಗವಾನ್ ಶಂಕರನ ಮಹಾಪ್ರಸಾದದಿಂದ ಸಮಸ್ತ ಭೀತಿಗಳಿಂದ ಮುಕ್ತನಾಗುವನು.
|| ಇತಿ ಹಿಮಾಲಯಕೃತ ಶಿವಸ್ತೋತ್ರಮ್ ||