ಹೌದು ಪತಂಜಲಿ ಸೇವೆ ಇದೀಗ ಟೆಲಿಕಾಂ ಸಂಸ್ಥೆಗಳಿಗೂ ಲಗ್ಗೆ ಇಟ್ಟಿದೆ ಸೋಪು ಶಾಂಪೂ ಬಟ್ಟೆ ಹಾಗು ಇನ್ನಿತರ ಸಾಮಗ್ರಿಗಳಿಗೂ ಪಂತಂಜಲಿ ಇರುವುದು ಎಲ್ಲರಿಗು ತಿಳಿದಿರುವ ವಿಚಾರ ಆದ್ರೆ ಇದೀಗ ಟೆಲಿಕಾಂ ಸಂಸ್ಥೆಗೆ ಬಂದಿರುವುದು ಹೊಸ ವಿಚಾರ. ಯಾವ ರೀತಿಯಾಗಿ ಪತಂಜಲಿ ಆಫರ್ ಇದೆ ಅನ್ನೋದು ಇಲ್ಲಿದೆ ನೋಡಿ.

ಈ ಒಂದು ಯೋಜನೆಯ ಹೆಸರು ಸ್ವದೇಶಿ ಸಮೃದ್ಧಿ ಸಿಮ್ ಅನ್ನು ಪರಿಚಯಿಸಿದೆ. ಪತಂಜಲಿ ಹೇಳಿರುವಂತೆ ಈ ಸ್ವದೇಶಿ ಸಮೃದ್ಧಿ ಸಿಮ್ ಈ ದೇಶದ ಕಲ್ಯಾಣಕ್ಕಾಗಿ ಎಂದು ಹೇಳಿದೆ.

RELATED ARTICLES  ಸ್ಮಾರ್ಟ್ ಸಿಟಿ ಗಿಂತ ಸ್ಮಾರ್ಟ್ ಹಳ್ಳಿಗಳಿಗೆ ಪ್ರಾಮುಖ್ಯತೆ : ಶಿವರಾಮ ಹೆಬ್ಬಾರ

ಸಿಮ್‌ ಗ್ರಾಹಕರಿಗೆ ಆರೋಗ್ಯ ಮತ್ತು ಅಪಘಾತ ಹಾಗೂ ಜೀವ ವಿಮೆಯನ್ನು ಪತಂಜಲಿ ಒದಗಿಸಲು ಮುಂದಾಗಿದೆ. ಸಿಮ್ ಖರೀದಿಸಿದ ಗ್ರಾಹಕರಿಗೆ 2.5ಲಕ್ಷ ಮತ್ತು 5 ಲಕ್ಷ ರೂಪಾಯಿಗಳ ವೈದ್ಯಕೀಯಮತ್ತು ಜೀವ ವಿಮೆಯನ್ನು ಹೊಂದಿದೆ.

ಬಿಎಸ್‌ಎನ್‌ಎಲ್‌ ಸ್ವದೇಶಿ ನೆಟ್‌‌ವರ್ಕ್ ಆಗಿದ್ದು, ಬಿಎಸ್‌ಎನ್‌ಎಲ್‌ ಮತ್ತು ಪತಂಜಲಿ ಎರಡೂ ದೇಶದ ಏಳಿಗೆಗೆ ಶ್ರಮಿಸಲಿವೆ ಎಂದು ಹೇಳಿದ್ದಾರೆ.

RELATED ARTICLES  ಮೇಲಾಧಿಕಾರಿಗಳ ಹೆಸರಲ್ಲಿ ಹಣ ವಸೂಲಿ : ಎಸ್.ಪಿ ಹೇಳಿದ್ದೇನು?

ಕೇವಲ 144 ರೂಪಾಯಿ ರಿಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು ಅನ್‌ಲಿಮಿಟೆಡ್ ಉಚಿತ ಕರೆಗಳು, 100 ಎಸ್‌‌ಎಮ್‌ಎಸ್‌ಗಳು ಮತ್ತು 2 ಜಿಬಿ ಡೇಟಾ ಪಡೆಯಬಹುದು.

ಈ ಸಿಮ್ ಕಾರ್ಡ್‌ಗಳು ನೌಕರರು ಮತ್ತು ಕಚೇರಿ ಪದಾಧಿಕಾರಿಗಳಿಗೆ ಮಾತ್ರ ಲಭ್ಯವಾಗಲಿದೆ. ನಂತರ ಬಿಎಸ್‌ಎನ್‌ಎಲ್‌ನ ಐದು ಲಕ್ಷ ಕೌಂಟರ್‌‌ಗಳಲ್ಲಿ ‘ಸ್ವದೇಶಿ ಸಮೃದ್ಧಿ’ ಸಿಮ್ ಅನ್ನು ಪಡೆಯಹುದು ಎಂದು ಬಿಎಸ್‌ಎನ್‌ಎಲ್‌ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.