ಕುಮಟಾ: ಕಳೆದ ಮೂರು ವರ್ಷಗಳಿಂದ ನಮ್ಮಲ್ಲಿಯ ಅಜ್ಞಾನವನ್ನು ಹೋಗಲಾಡಿಸಿ, ಪ್ರತಿಭೆಯನ್ನು ಬಗೆದು ತೆಗೆದು ಒರೆಗೆ ಹಚ್ಚಿ ಪ್ರಕಾಶಿಸುವಂತೆ ಮಾಡಿ ಮುಕ್ತ ಅವಕಾಶ ನೀಡಿದ ಮೆಚ್ಚಿನ ಗುರುಗಳೇ ನಿಮಗೆ ಜೀವನ ಪರ್ಯಂತ ನಾವೆಲ್ಲರೂ ಸದಾ ಋಣ ಯಾಗಿರುತ್ತೇವೆ ಎಂದು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಕುಮಾರ ಪ್ರಣ ೀತ ರವಿರಾಜ ಕಡ್ಲೆ ಭಾವುಕರಾಗಿ ನುಡಿದರು. ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ದೀಪದಾನ ಸಮಾರಂಭದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಶಾಲೆಯ ಸುಂದರ ಕಲಿಕಾ ಪರಿಸರ, ಶಿಕ್ಷಕವೃಂದದವರ ಸೂಕ್ತ ಮಾರ್ಗದರ್ಶನ ತಮ್ಮ ಮುಂದಿನ ಜೀವನಕ್ಕೆ ಆಧಾರವಾಗಲಿದೆ ಎಂದರು.

ಸರ್ವಾಂಗೀಣ ಪ್ರಗತಿಗೆ ಸಾಧ್ಯವಾದ ತಮ್ಮ ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್ ಅಲ್ಲ ಅದಕ್ಕಿಂತ ಮಿಗಿಲಾದ ಪ್ಲಾಟಿನಮ್ ಲೈಫ್ ಆಗಿತ್ತೆಂಬುದನ್ನು ಕುಮಾರ ವಿಶ್ವಾಶ ವೆಂಕಟೇಶ ಪೈ ಹಂಚಿಕೊಂಡರು. ಮೌಲ್ಯಯುತ ಶಿಕ್ಷಣನೀಡಿ ನಮ್ಮನ್ನು ತಿದ್ದಿ ತೀಡಿ ದಾರಿ ದೀಪದಂತಿರುವ ಶಿಕ್ಷಕರಲ್ಲಿ ತಪ್ಪುಗಳ ಮನ್ನಿಸಿ ಎಂಬ ಅಳಲನ್ನು ಕುಮಾರಿ ನಯನಾ ಪಟಗಾರ ತೋಡಿಕೊಂಡರು. ಶಾಲೆಯ ಬಗ್ಗೆ ಅಭಿಮಾನ ಪ್ರೀತಿ ಹೊಂದಿರಬೇಕು. ಎಂದಿಗೂ ಕಲಿತ ಶಾಲೆ, ಕಲಿಸಿದ ಶಿಕ್ಷಕರನ್ನು ಮರೆಯಬಾರದೆಂದು ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಮೋಹನ ಶಾನಭಾಗ ಹಿತವಚನ ನುಡಿದರು.

RELATED ARTICLES  16 ವಿದ್ಯಾರ್ಥಿಗಳು 600 ಕ್ಕೆ 600 ಅಂಕ : ಕುಮಟಾ ಸರಸ್ವತಿ ಪಿ.ಯು ಕಾಲೇಜ್ ವಿದ್ಯಾರ್ಥಿಗಳ ಸಾಧನೆ.


ಮೊಬೈಲ್, ಟಿವಿ, ಇಂಟರ್‍ನೆಟ್‍ಗಳಿಂದ ದೂರ ಇದ್ದಷ್ಟೂ ಅಭ್ಯಾಸಕ್ಕೆ ಅನುಕೂಲವಾಗುತ್ತದೆ ಹೆಚ್ಚು ಅಂಕಗಳಿಸುವ ದೃಢ ಸಂಕಲ್ಪ ಮಾಡಿ ಎಂದು ಕೆನರಾ ಎಜ್ಯುಕೇಶನ್ ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ ಕರೆ ನೀಡಿದರು.


ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಅನವಶ್ಯಕ ಭಯಪಡದೇ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಆತ್ಮವಿಶ್ವಾಸವೊಂದಿದ್ದರೆ ಸಾಕು ಪರೀಕ್ಷೆ ಗೆಲ್ಲಬಹುದು. ಗೆದ್ದು ಉನ್ನತಿಗೇರುವ ನಲಿವು ನಿಮ್ಮನ್ನು ಆವರಿಸಲಿ ಭವಿಷ್ಯದ ಬಾಳು ಬಂಗಾರವಾಗಲಿ ಎಂದು ಶುಭ ಹಾರೈಸಿದರು. ಶಿಕ್ಷಕರ ಪರವಾಗಿ ವಿಷ್ಣು ಎನ್. ಭಟ್ಟ ಮಾತನಾಡಿ ಪ್ರಯತ್ನಕ್ಕೆ ತಕ್ಕ ಫಲ ನಿಮಗೆ ಸಿಕ್ಕೇ ಸಿಗುತ್ತವೆ ಎಂದು ಹುರಿದುಂಬಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತಿಯಂಚಿನಲ್ಲಿರುವ ಹಿರಿಯ ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗ ಅವರನ್ನು ವಿದ್ಯಾರ್ಥಿವೃಂದದ ಪರವಾಗಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ರಕ್ಷಿತಾ ಪಟಗಾರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಿಗಸ್ ಸ್ವಾಗತಿಸಿ ಪೂರ್ವ ತಯಾರಿ ಪರೀಕ್ಷೆಯ ಫಲಿತಾಂಶ ವಿಶ್ಲೇಷಿಸಿದರು. ಮೊದಲ ಹತ್ತು ಶ್ರೇಯಾಂಕಿತರಿಗೆ ಬಹುಮಾನಿಸಲಾಯಿತು. ಶಿಕ್ಷಕ ಸುರೇಶ ಪೈ ನಿರೂಪಿಸಿದರೆ ಶಿಕ್ಷಕ ಕಿರಣ ಪ್ರಭು ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ತನುಜಾ ಗೌಡ ಮತ್ತು ಕುಮಾರ ಪ್ರಣ ೀತ ಕಡ್ಲೆ ಗುರುವಂದನೆ ಸಲ್ಲಿಸಿದರು.

RELATED ARTICLES  ಗಾನ-ದಾನ-ಯಾನ ಕಾರ್ಯಕ್ರಮ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ದೀಪದಾನ ಸಮಾರಂಭದಲ್ಲಿ ವಿದ್ಯಾರ್ಥಿ ಪ್ರತಿನಿಧಿ ಪ್ರಣ ೀತ ಕಡ್ಲೆ ಮಾತನಾಡಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು, ಉದ್ಯಮಿ ಮೋಹನ ಶಾನಭಾಗ, ಕೆ.ಇ.ಸೊಸೈಟಿ ಸದಸ್ಯ ಕೃಷ್ಣದಾಸ ಪೈ, ಶಿಕ್ಷಕರು ಉಪಸ್ಥಿತರಿದ್ದರು.