ಹೊನ್ನಾವರ ತಾಲೂಕಿನ ಅಗ್ರಹಾರದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದ್ದು ಅದನ್ನು ಗಮನಿಸದೆ ಅದೇ ಮಾರ್ಗದಲ್ಲಿ ತೆರಳಿದವ್ಯಕ್ತಿ ವಿದ್ಯುತ್ ಸ್ಪರ್ಷದಿಂದ ಸಾವಿಗೀಡಾದ ಘಟನೆ ಸಂಭವಿಸಿದೆ.

ವಿದ್ಯುತ್ ತಂತಿ ತಗುಲಿದ ಪರಿಣಾಮ ಸಾವನ್ನಪ್ಪಿದ ವ್ಯಕ್ತಿಯನ್ನು ಅಗ್ರಹಾರದ ದೇವಿದಾಸ ಗಜಾನನ ಕಲ್ಯಾಣಕರ ಎಂದು ಗುರ್ತಿಸಲಾಗಿದೆ. ವಯಸ್ಸು ಸುಮಾರು 80 ವರ್ಷಗಳಿರಬಹುದು.

RELATED ARTICLES  ಸಾಮಾಜಿಕ ಪರಿಶೋಧನೆಯಿಂದ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯ - ಉಮೇಶ ಮುಂಡಳ್ಳಿ

ಮಳೆ ಇದ್ದುದರಿಂದ ವಿದ್ಯುತ್ ತಂತಿ ಹರಿದು ಬಿದ್ದಿತ್ತು. ಅದನ್ನು ಗಮನಿಸದೇ ಅದೇ ಮಾರ್ಗದಲ್ಲಿ ಈತ ತೆರಳಿದ್ದರಿಂದ ದುರ್ಘಟನೆ ನಡೆದಿದೆ. ಇಲ್ಲಿ ವಿದ್ಯುತ್ ಸಂಪರ್ಕ ನೀಡುವ ಲೈನ್ ಗಳು ತುಂಬಾ ಹಳೆಯದಾಗಿದ್ದು ತುಂಡಾಗುತ್ತಿವೆ .ಇದರಿಂದ ಅದೆಷ್ಟು ಜೀವಗಳು ಬಲಿಯಾಗಬೇಕೋ ಎನ್ನುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

RELATED ARTICLES  ಅಗಲಿದ ಯಕ್ಷಲೋಕ ಕಣ್ಮಣಿಗೆ ದಾಂಡೇಲಿಯಲ್ಲಿ ಶೃದ್ಧಾಂಜಲಿ