ಕುಮಟಾ: “ಎಲ್ಲರ ಒಳಗಿದೆ ಅದ್ಭುತ ಶಕ್ತಿ, ಎಲ್ಲರಿಗೂ ಇದೆ ಅದನ್ನು ಬಳಸುವ ಅವಕಾಶಗಳು, ಬಳಸಿಕೊಂಡವರೇ ಯಶಸ್ವಿಗಳು” ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಮಟಾ ತಾಲೂಕಾಧ್ಯಕ್ಷ ರವೀಂದ್ರ ಭಟ್ಟ ಸೂರಿ ನುಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕುಮಟಾ ಇದರ ಎನ್.ಎಸ್.ಎಸ್. ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅವಕಾಶಗಳ ಸದ್ಭಳಕೆ ಮಾಡಿಕೊಂಡವರು ಜೀವನದಲ್ಲಿ ಯಶಸ್ವಿಗಳಾಗುತ್ತಾರೆ ಎಂಬುದನ್ನು ಹಲವು ಕಥೆ, ಉದಾಹರಣೆಗಳ ಮೂಲಕ ವಿವರಿಸಿದರು.

RELATED ARTICLES  ಸಂಪನ್ನವಾದ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ

“ಪ್ರಕೃತಿಯಿಂದ ಪಾಠ ” ಮತ್ತು ” ಅವಕಾಶಗಳ ಸದ್ಭಳಕೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ಪ್ರಕೃತಿ ನಮಗೆ ಜೀವನದ ಪಾಠಗಳನ್ನು ಕಲಿಸಿಕೊಡುತ್ತದೆ ಆದರೆ ಅದನ್ನು ನೋಡುವ ಕಣ್ಣು , ಅನುಭವಿಸುವ ಹೃದಯ, ಅರ್ಥ ಮಾಡಿಕೊಳ್ಳುವ ಮನಸ್ಸು ಬೇಕು ಎಂದರು. ಕಾರ್ಯಕ್ರಮದಲ್ಲಿ ಕುಮಟಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಶಿಬಿರಾರ್ಥಿಗಳು ಹಾಜರಿದ್ದರು.

RELATED ARTICLES  ಮೊರಬದ ಹಳ್ಳೇರ ಸಮಾಜದ ಹೆಂಗಳೆಯರ ಮನಸೂರೆಗೊಂಡ ಶಿವರಾತ್ರಿ ಸಂಭ್ರಮ.