ಕಾರವಾರ: ತಾಲೂಕಿನ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕಾರವಾರದ ದಿನಾಂಕ 16 ರಂದು ಮುಡಿಗೇರಿಯಲ್ಲಿ ಕಾಲೇಜಿನ ಎನ್.ಎಸ್.ಎಸ್ ಘಟಕ 1ರ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಉದ್ಘಾಟಕರಾಗಿ ಡಾ.ಜಿ.ಎಲ್.ರಾಠೋಡ, ಮುಖ್ಯ ಅತಿಥಿಗಳಾಗಿ ಶ್ರೀ ಸ್ಯಾಮ್ಸನ್ ಡಿಸೋಜಾ, ಶ್ರೀ ಸಂದೀಪ ಕೋಠಾರಕರ, ಶ್ರೀ ಗಜೇಂದ್ರ ನಾಯ್ಕ ಆಗಮಿಸಿದರು.
ಸಮಾರಂಭದಲ್ಲಿ ‘ಜೀವ ಜಲ ಸಂರಕ್ಷಣೆ’ ವಿಷಯದ ಬಗ್ಗೆ ಡಾ. ಜಿ.ಎಲ್ ರಾಠೋಡ ಉಪನ್ಯಾಸ ನೀಡಿದರು ಹಾಗೂ ಡಾ. ಪ್ರತಿಭಾ ಹುಲ್ಲೂರುರವರು ‘ಜೀವನ ಎದುರಿಸುವ ವಿಧಾನಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಶ್ರೀ ಸ್ಯಾಮ್ಸನ್ ಡಿಸೋಜಾ ಇವರು ಸೇವೆಯ ಮಹತ್ವದ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪೊ ವಿಜಯಾ ನಾಯ್ಕ ವಹಿಸಿದ್ದರು. ಮತ್ತು ಕಾಲೇಜಿನ ಪೊ. ಉಲ್ಲಾಸ ಶೆಟ್ಟಿ ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಪೊ. ಐ.ಕೆ ನಾಯ್ಕ ಮಾತನಾಡಿ ಶಿಬಿರದ ಉದ್ದೇಶ ಮತ್ತು ಹಮ್ಮಿಕೊಂಡ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.