ಕುಮಟಾ: ದೇವರಹಕ್ಕಲಿನ ಪುರಾಣ ಪ್ರಸಿದ್ಧ ಶ್ರೀ ಶಾಂತಿಕಾ ಪರಮೇಶ್ವರಿ ದೇವರ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ ಸಾಂಗತ್ಯ ಪ್ರಸ್ತುತ ಶಿಖರ ಮಂಟಪಯುಕ್ತ ದೇವ ಮಂದಿರದ ಅಮೃತ ಮಹೋತ್ಸವದ ಕೊನೆಯ ದಿನದ ಸಾಂಸ್ಕøತಿಕ ಕಾರ್ಯಕ್ರಮಗಳು ದೇವಿಯ ರಜತ ರಥಾರೂಢ ನಗರೋತ್ಸವ ಪ್ರಾರಂಭವಾದೊಡನೆ ಆವಾಸದ ಪ್ರಧಾನ ವೇದಿಕೆಯಲ್ಲಿ ಖ್ಯಾತ ಹಾಡುಗಾರ ಶ್ರೀಕಾಂತ ಪಟಗಾರ ನೇತೃತ್ವದಲ್ಲಿ, ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ, ಕುಮಟಾ ಅವರಿಂದ ಅಭಂಗ ದಾಸವಾಣಿ ಮೂಡಿಬಂತು. ತಂಡದ ಪ್ರತಿ ಸದಸ್ಯರೂ ಭಜನಾ ಕಾರ್ಯಕ್ರಮದಲ್ಲಿ ಅನುಭಾವದ ರಚನೆಗಳನ್ನು ತಾಳ, ತಬಲಾ, ಹಾರ್ಮೋಯಮ್ ಮೂಲಕ ಹಾಡಿ ಸಮ್ಮೋಹಕಗೊಳಿಸಿದರು.

RELATED ARTICLES  ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರೇ? ಹಾಗಾದರೆ ಸದ್ಯವೇ ನಿಮ್ಮ ಈ ಸೇವೆ ರದ್ದಾಗಲಿದೆ!


ಮುಖ್ಯ ಆಕರ್ಷಣೆಯಾಗಿ ಬೆಂಗಳೂರಿನ ಸಿರಿಕಲಾ ಮೇಳ ಹಾಗೂ ಅತಿಥಿ ಕಲಾವಿದರಿಂದ ಬಡಗುತಿಟ್ಟಿನ ಕಾಳಿದಾಸ ಯಕ್ಷಗಾನ ಪ್ರದರ್ಶನಗೊಂಡಿತು. ಗಂಡು ಕಲೆ ಎಂದೇ ಪ್ರಸಿದ್ಧಿ ಹೊಂದಿರುವ ಈ ಯಕ್ಷಗಾನ ಪ್ರದರ್ಶನದಲ್ಲಿ ಮಹಿಳಾ ಕಲಾವಿದರೇ ತುಂಬಿರುವುದು ವಿಶೇಷತೆಯಾಗಿತ್ತು. ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ, ಮದ್ದಳೆ ಅನಂತ ಪದ್ಮನಾಭ ಪಾಟಕ, ಚಂಡೆ ಭಾರ್ಗವ ಹೆಗ್ಗೋಡು ಹಿನ್ನೆಲೆ ಒದಗಿಸಿದರೆ, ಮುಮ್ಮೇಳದಲ್ಲಿ ಕಲಾಧರ-ಅರ್ಪಿತಾ ಹೆಗಡೆ ಕಡತೋಕಾ, ವಿದ್ಯಾಧರೆ-ನಾಗಶ್ರೀ ಶಿಶುಗಾರ, ಕುಮುದ ಪ್ರಿಯಾ-ಕಿರಣಾ ಪೈ, ವಿಜಯವರ್ಮ- ಮಾನಸಾ ಉಪಾಧ್ಯಾಯ, ಕಾಳಿಯಾಗಿ ಮಾರುತಿ ನಾಯ್ಕ ಮತ್ತು ಕಾಳ(ಕಾಳಿದಾಸ) ನಾಗಿ ಶ್ರೀಧರ ಭಟ್ಟ, ಕಾಸರಕೋಡು ಅಭಿನಯಸಿದರು. ವೇಷಭೂಷಣ ಉದಯ ಆಡುಕೊಳ ಅವರದ್ದಾಗಿದ್ದರೆ, ಸುರೇಶ ಹೆಗಡೆ ಕಡತೋಕಾ ಬೆಂಗಳೂರು ಇವರು ಸಂಯೋಜನೆಗೊಳಿಸಿದ್ದರು. ಮಹಿಳೆಯರೇ ಪ್ರಧಾನ ಪಾತ್ರಗಳಲ್ಲಿ ಮೇಳೈಸಿ ಎಲ್ಲರ ಮನಗೆದ್ದು ಪುರುಷರಿಗಿಂತ ನಾವು ಕಡಿಮೆಯಿಲ್ಲ ಎಂಬುವುದನ್ನು ನಿರೂಪಿಸಿದರು. ಅಮೃತ ಮಹೋತ್ಸವದ ಸಂಪೂರ್ಣ ಸಾಂಸ್ಕøತಿಕ ಸಂಚಿಯ ಪರಿಚಯ, ಪ್ರಕಟಣೆ, ನಿರೂಪಣೆ ಹಾಗೂ ನಿರ್ವಹಣೆಯನ್ನು ಮಂಜುನಾಥ ನಾಯ್ಕ, ಈಶ್ವರ ಭಟ್ಟ, ಜಯದೇವ ಬಳಗಂಡಿ, ಎನ್.ಆರ್.ಗಜು, ಅರುಣ ಮಣಕೀಕರ ಮತ್ತು ಕಿರಣ ಪ್ರಭು ನೆರವೇರಿಸಿದರು.

RELATED ARTICLES  ಪ್ರಗತಿ ಟ್ಯುಟೋರಿಯಲ್ಸ್ ನಲ್ಲಿ ವಿಶೇಷ ತರಬೇತಿ ಪಡೆದು ಸಾಧನೆಮಾಡಿದ ಪೂರ್ಣಿಮಾ ಪಟಗಾರ