ಕುಮಟಾ ,ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಸರಸ್ವತಿ ಕೊಂಕಣ ಮಹೇಶ್ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರದ ಹಿಂದಿನ ರಕ್ಷಣಾ ಮಂತ್ರಿಗಳು ಹಾಗೂ ಗೋವಾದ ಹಾಲಿ ಮುಖ್ಯ ಮಂತ್ರಿ ಗಳಾಗಿದ್ದ ಮನೋಹರ ಪರಿಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಶೃಂದ್ಧಾಂಜಲಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕ ಚಿದಾನಂದ ಭಂಡಾರಿ ಕಾಗಾಲ ಅವರು ಮನೋಹರ ಪರಿಕರ್ ಅವರ ವ್ಯಕ್ತಿತ್ವ ,ಅವರ ಸರಳ ನೇರ ನೆಡೆನುಡಿಯ ಬದುಕು ನಮಗೆಲ್ಲಾ ಮಾದರಿ ಅವರು ಕುಮಟಾಕೆ ಹಲವಾರು ಬಾರಿ ಬಂದುಹೋಗಿದ್ದಾರೆ.ಒಮ್ಮೆಯೂ ಅಧಿಕಾರದ ದರ್ಪ ವಿಜ್ರಂಭಣೆ ತೋರ್ಪಡಿಸದ ಸಜ್ಜನ ವ್ಯಕ್ತಿ.ಕೇಂದ್ರ ರಕ್ಷಣಾ ಮಂತ್ರಿ ಗಳಾಗಿ ಅವರು ತೆಗೆದುಕೊಂಡ ದಿಟ್ಟ ನಿಲುವುಗಳು ಭಾರತದ ವರ್ಚಸ್ಸನ್ನು ವಿಶ್ವದಲ್ಲಿಯೇ ಹೆಚ್ಚಿಸಿದೆ.ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಸುಲೋಚನಾ ರಾವ್ ಬಿ.ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತಿತರಿದ್ದರು.