ಹೊನ್ನಾವರ: ತಾಲೂಕಿನ ಎಮ್ಮೆಪೈಲ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಒರ್ವ ವ್ಯಕ್ತಿ ಸ್ಥಳದಲ್ಲೆ ಸಾವುಕಂಡು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಕುಮುಟಾ ಕಡೆಯಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಕಾರು ಭಟ್ಕಳದ ಕಡೆಯಿಂದ ಕುಮುಟಾ ಕಡೆ ಸಾಗುತ್ತಿದ್ದ ಲಾರಿ ನಡುವೆ ಹೊನ್ನಾವರದ ರಾಷ್ಟೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಅವಘಡಕ್ಕೆ ಕಾರು ಚಾಲಕನ ವೇಗದ ಚಾಲನೆಯೆ ಕಾರಣ ಎನ್ನಲಾಗುತ್ತಿದೆ.
ಗಾಯಗೊಂಡ ಮೂವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ .
ಸಮಯಕ್ಕೆ ಸರಿಯಾಗಿ ಬಂದ ೧೦೮ ಅಂಬುಲೆನ್ಸ ಇತರೆ ಖಾಸಗಿ ಅಂಬುಲೆನ್ಸ ವಾಹನ. ೩ ಪ್ರಾಣ ಉಳಿಸುವಲ್ಲಿ ನೆರವಾಯಿತು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೋಲಿಸರು ಗಾಯಳು ಆಸ್ಪತ್ರೆಗೆ ರವಾನಿಸಿದರು.ಕೆಲಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು ಗೊಂದಲವನ್ನು ಪೋಲೀಸರು ಸರಿಪಡಿಸಿ ರಸ್ತೆ ತೆರವು ಗೊಳಿಸಿದರು.