ಮುರುಡೇಶ್ವರ : ಮುರುಡೇಶ್ವರ ಕಡಲ ತೀರದಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿಹೋಗುತ್ತಿದ್ದ ನಾಲ್ವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಗಳು ರಕ್ಷಿಸಿದ ಘಟನೆ ನಿನ್ನೆ ನಡೆದಿತ್ತು.
ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಯಿಂದ ಪ್ರವಾಸಕ್ಕೆ ಬಂದ ಶಿವಣ್ಣ ಮಡಿವಾಳ ಶೆಟ್ಟಿ , ಯೋಗೇಶ ಸುರೇಶ ನಾಯ್ಕ, ಸಿದ್ಧರಾಜು, ನಾಗರಾಜ ಶೆಟ್ಟಿ, ರವೀಶ್ ಮತ್ತು ಲೋಕೇಶ್ ಸಮುದ್ರದಲ್ಲಿ ಆಟವಾಡುತ್ತಿದ್ದರು. ಹಠಾತ್ತನೆ ಭಾರಿ ಅಲೆಯೊಂದು ಅಪ್ಪಳಿಸಿತು.
ಸ್ಥಳದಲ್ಲಿದ್ದ ಲೈಫ್ಗಾರ್ಡ್ಗಳಾದ ಜಯರಾಮ, ಹರಿಕಾಂತಾ, ಚಂದ್ರಶೇಖರ ದೇವಾಡಿಗ ಐವರನ್ನು ರಕ್ಷಿಸಿದರು. ಮಾದಪ್ಪ ಶಿವಣ್ಣ ಮಡಿವಾಳ ಶೆಟ್ಟಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಈ ವಿಷಯದ ಕುರಿತು ಮುರುಡೇಶ್ವರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.