ಹೊನ್ನಾವರ: ತಾಲೂಕಿನ ಮುಗ್ವಾ ಮಹಾ ಶಕ್ತಿಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆ, ಮತ್ತು ಕೇಂದ್ರ ಸಚೀವ ಅನಂತ ಕುಮಾರ ಹೆಗಡೆ, ಶಾಸಕ ದಿನಕರ ಕೆ ಶೆಟ್ಟಿ ಭಟ್ಕಳ ಶಾಸಕ ಸುನಿಲ ನಾಯ್ಕ ಅವರಿಗೆ ಅಭಿನಂದನಾ ಸಮಾರಂಭ ಕಡ್ಲೆ ಗ್ರಾಮಪಂಚಾಯತ ವ್ಯಾಪ್ತಿಯ ಉಪ್ಲೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಬಾಭವನದಲ್ಲಿ ನೆರವೇರಿತು.

ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತ ಕುಮಾರ ಹೆಗಡೆಯವರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮುಗ್ವಾ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಕಳೆದ ಐದು ವರ್ಷದಲ್ಲಿ ಪ್ರಧಾನಮಂತ್ರಿ ನರೆಂದ್ರ ಮೋದಿಯವರು ದೇಶದ ಜನತೆಗೆ ನೀಡಿದ ಅಭಿವೃದ್ದಿ ಕಾರ್ಯಗಳನ್ನ ವಿವರಿಸಿ ದೇಶದಲ್ಲಿ ಹಿಂದುತ್ವ ಉಳಿಯಬೇಕು ಸಮರ್ಥ ನಾಯಕತ್ವ ಇರಬೇಕು ಎಂದಾದರೆ ಭಾರತೀಯ ಜನತಾಪಕ್ಷ ಅಧಿಕಾರಕ್ಕೆ ಬರಬೇಕು, ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆಗಬೇಕು ಅನಂತ ಕುಮಾರ ಹೆಗಡೆಯವರು ಮತ್ತೆ ಉತ್ತರ ಕನ್ನಡ ಜಿಲ್ಲೆಯ ಸಂಸದರಾಗಿ ಆಯ್ಕೆ ಆಗಬೇಕು ಎಂದರು.

ಶಾಸಕ ದಿನಕರ ಶೆಟ್ಟಿಯವರು ಮಾತನಾಡಿ ನಾನು ತಮ್ಮೆಲ್ಲರ ಸಹಕಾರದಿಂದ ಸುಮಾರು 59 ಸಾವಿರ ಮತಗಳಿಸಿ ಆಯ್ಕೆ ಆಗಿದ್ದೇನೆ ನಮ್ಮ ವಿದಾನಭಾ ಕ್ಷೇತ್ರದಲ್ಲು ಲಕ್ಷಕ್ಕೂ ಹೆಚ್ಚು ಮತ ಅನಂತಕುಮಾರ ಹೆಗಡೆಯವರು ಗಳಿಸುವಂತಾಗಬೇಕು ಎಂದರು

ಭಟ್ಕಳ ಶಾಸಕ ಸುನಿಲ ನಾಯ್ಕ ಮಾತನಾಡಿ ಇಂದು ಪ್ರತಿಯೊಂದು ವರ್ಗದ ಜನರಿಗೂ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರದಿಂದ ಅನುಕೂಲವಾಗಿದೆ ಪ್ರಪಂಚ ಕಂಡ ಅಪ್ರತಿಮ ನಾಯಕ ನರೇಂದ್ರ ಮೊದಿಯವರು ಮತ್ತೆ ಆಯ್ಕೆ ಆಗಬೇಕು ನನ್ನ ರಾಜಕೀಯ ಗುರುಗಳಾದ ಅನಂತ ಕುಮಾರ ಹೆಗಡೆಯವರು ಈ ಬಾರಿಯೂ ಗೆಲುವು ಸಾದಿಸಲಿದ್ದಾರೆ ಎಂದರು

RELATED ARTICLES  ಅಭಿವೃದ್ಧಿ ಮಾಡಿಸುವಲ್ಲಿ ದಿನಕರ ಶೆಟ್ಟಿ ಬೇರೆಲ್ಲಾ ಶಾಸಕರಿಗಿಂತ ಎರಡು ಪಟ್ಟು ಮುಂದೆ: ಶಾಸಕ ಸುನೀಲ್ ನಾಯ್ಕ

ಶ್ರೀ ಉಪ್ಲೆ ಮಹಾಲಿಂಗೇಶ್ವರ ದೇವಾಲಯದ ಮೊಕ್ತೆಸರರಾದ ಕೃಷ್ಣಾನಂದ ಭಟ್ಟ ಅವರು ಕೇಂದ್ರ ಸಚೀವ ಶ್ರೀ ಅನಂತ ಕುಮಾರ ಹೆಗಡೆಯವರನ್ನ ಶಾಸಕ ದಿನಕರ ಕೆ ಶೆಟ್ಟಿ ಹಾಗೂ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರನ್ನ ಶಾಲು ಹೊದೆಸಿ ಸನ್ಮಾನಿಸಿದರು.
ಗ್ರಾಮ ಪಂಚಾಯತ ಹಿರಿಯ ಸದಸ್ಯರು ಉಧ್ಯಮಿಗಳು ಆದ ಶ್ರೀ ಎಂ ಜಿ ಹೆಗಡೆಯವರು ಗ್ರಾಮ ಪಂಚಾಯತ ಮತ್ತು ಊರ ನಾಗರೀಕರ ಪರವಾಗಿ ಶ್ರೀ ಅನಂತ ಕುಮಾರ ಹೆಗಡೆ ಶ್ರೀ ದಿನಕರ ಕೆ ಶೆಟ್ಟಿ ಶ್ರೀ ಸುನಿಲ್ ನಾಯ್ಕ ಅವರನ್ನ ಸನ್ಮಾನಿಸಿದರು

RELATED ARTICLES  ಎರಡು ತಿಂಗಳಿಂದ‌ ಬಂಧನದಲ್ಲಿದ್ದಾರೆ ಉತ್ತರ ಕನ್ನಡದ ಮೀನುಗಾರರು: ಓಮನ್ ನ ಸಿನಾವ್ ಕಡಲಿನಲ್ಲಿ ಮೀನುಗಾರಿಕೆ ನಡೆಸಿದ ಕುರಿತಾಗಿ ಬಂಧಿಸಿದ ಪೋಲೀಸರು.

ಕೇನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅನಂತ ಕುಮಾರ ಹೆಗಡೆ ಮಾತನಾಡಿ ಕೇಂದ್ರ ಸರಕಾರ ಕಳೆದ 5 ವರ್ಷದ ಅವಧಿಯಲ್ಲಿ ಜನತೆಗೆ ಸಾಕಷ್ಟು ಅನಕೂಲಗಳನ್ನ ಮಾಡಿಕೊಟ್ಟಿದೆ ಈ ಬಾರಿಯ ಚುನಾವಣೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಆದಾರಿತ ಅಲ್ಲ ಮೋದಿಜಿಯವರ ಸಮರ್ಥ ನಾಯಕತ್ವ ಆಧಾರಿತ ಮತ್ತು ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ದಿ ಆದಾರಿತ ಎಂದರು ಅಲ್ಲದೆ ಪಾಕಿಸ್ತಾನದ ಮೇಲೆ ನಡೆಸಿದ ವಾಯುದಾಳಿ ಕುರಿತು ಸಾಕ್ಷಿಕೇಳುವ ರಾಹುಲ್ ಗಾಂದಿ ಒಬ್ಬ ಜೋಕರ್ ಎಂದು ವ್ಯಂಗ್ಯವಾಡಿದರು.

ಕಡ್ಲೆ ಗ್ರಾಮ ಪಂಚಾಯತ ಬಿಜೆಪಿ ಉಸ್ತುವಾರಿ ಸುಬ್ರಮಣ್ಯಭಟ್ಟ ಸ್ವಾಗತಿಸಿದರು ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಕಾರ್ಯದರ್ಶಿ ರಾಜು ಭಂಡಾರಿ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಅನುಪಮಾ ಮಡಿವಾಳ ಪಂಚಾಯತ ಉಪಾಧ್ಯಕ್ಷ ಗಜಾನನ ಮಡಿವಾಳ ಬಿಜೆಪಿ ಹಿರಿಯ ಮುಖಂಡ ಉಮೇಶ ನಾಯ್ಕ ಮಾಜಿ ಜಿಲ್ಲಾಧ್ಯಕ್ಷ ಎಂ ಜಿ ನಾಯ್ಕ ಮಹಾಭಲೇಶ್ವರ ಮಡಿವಾಳ ಮುಗ್ವಾ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ರವಿ ಹೆಗಡೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮಡಿವಾಳ ಉಪಸ್ಥಿತರಿದ್ದರು. ಬಿಜೆಪಿ ಹಿರಿಯಮುಖಂಡ ಎಂ ಎಸ್ ಹೆಗಡೆ ಕಣ್ಣಿ ಸಹಕರಿಸಿದರು