ಕುಮಟಾ: ಈಗಿನ ಸಂಸದ ಅನಂತಕುಮಾರ ಹೆಗಡೆಯವರಿಗೆ ಅಭಿವೃದ್ಧಿ ಎನ್ನುವ ಶಬ್ದದ ಅರ್ಥವೇ ಗೊತ್ತಿಲ್ಲ  ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಕಳೆದ 5 ಬಾರಿ ಆಯ್ಕೆಯಾಗಿಯೂ ಏನೂ ಅಭಿವೃದ್ಧಿ ಮಾಡಿಲ್ಲವೆಂದು ಸೂರಜ ನಾಯ್ಕ ಸೋನಿ ಸಂಸದರ ವಿರುದ್ಧ ವ್ಯಂಗವಾಡಿದ್ದಾರೆ.

   ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆಯಲ್ಲಿರುವ ಸಿ.ಆರ್.ಝೆಡ್, ಅತಿಕ್ರಮಣದಾರರ ಸಮಸ್ಯೆ ಯಾವುದಕ್ಕೂ ಅನಂತಕುಮಾರ ಉತ್ತರ ನೀಡುತ್ತಿಲ್ಲ. ಯಾವ ಸಮಸ್ಯೆಯನ್ನೂ ಬಗೆಹರಿಸದ ಸಂಸದ ಎಂಬ ಕಿರೀಟ ಅನಂತಗೆ ಸಲ್ಲುತ್ತದೆ. ಪರೇಶ್ ಸಾವಿನ ಕೇಸಿನಲ್ಲಿ ಒಂದೊಂದು ಹನಿ ರಕ್ತಕ್ಕೂ ಉತ್ತರ ನೀಡುತ್ತೇನೆ ಎಂದ ಇವರ ಪೌರುಷ ಈಗೆಲ್ಲಿ ಹೋಯಿತು. ಒಬ್ಬ ಮೀನುಗಾರ ಕಾಣೆಯಾದಾಗಲೇ ಉತ್ತರ ನೀಡದವರು ಇವತ್ತು ಏಳು ಮೀನುಗಾರರು ಕಾಣೆಯಾಗಿರುವಾಗ ಉತ್ತರ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.ವ್ಯಕ್ತಿಯೇ  ಮೋದಿಯವರಿಗಾಗಿ ಅನಂತಕುಮಾರ ಹೆಗಡೆ ಎಂಬ ಮಾತು ಸರಿಯಲ್ಲ. ಏಕೆಂದರೆ ಅನಂತಕುಮಾರ ಹೆಗಡೆ ತಮ್ಮ ಸ್ವಂತ ಹೆಸರಿನಲ್ಲಿ ಮತ ಕೇಳುವ ಪರಿಸ್ಥಿತಿಯಿಲ್ಲ ಎಂದು ವ್ಯಂಗ್ಯ ಮಾಡಿದರು.

RELATED ARTICLES  ಲುಡೋ ಆಡುವಾಗ ಲುಡೋ ಕಾಯಿ ನುಂಗಿದ ಬಾಲಕ

     ಜಿಲ್ಲೆಯಾದ್ಯಂತ ನಿರುದ್ಯೋಗದ ಸಮಸ್ಯೆ ಅತಿಯಾಗಿ ಹೆಚ್ಚುತ್ತಿದೆ.ರಾಜ್ಯದಲ್ಲಿ ವರ್ಷಕ್ಕೆ 40-50 ಲಕ್ಷ ಉದ್ಯೋಗ ಸೃಷ್ಟಿಯಾಗದಿದ್ದಲ್ಲಿ ಒಬ್ಬ ಮಂತ್ರಿಯಾಗಿ ಏನು ಪ್ರಯೋಜನ. ನಮ್ಮ ಜಿಲ್ಲೆಯವರೇ ಆದ ಇವರು ನಮ್ಮ ಜಿಲ್ಲೆಯ ಯುವಕರಿಗಾಗಿ ಮಂತ್ರಿಸ್ಥಾನದಲ್ಲಿದ್ದು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು. ದುರ್ವರ್ತನೆ, ದುರಹಂಕಾರದ ಮಾತಿನಿಂದಲೇ ಜನತೆ ಇವರಿಂದ ದೂರವಾಗುತ್ತಿದ್ದಾರೆ. ಜಿಲ್ಲೆಯ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದರು.

ನಾನು ರಾಜಕೀಯವಾಗಿ ಕಷ್ಟದಲ್ಲಿದ್ದಾಗ ಅನಂತಕುಮಾರ ನನ್ನನ್ನು ಬಳಸಿಕೊಂಡು ಮೂಲೆ ಗುಂಪು ಮಾಡಿದ್ದಲ್ಲದೇ, ಸಂಪೂರ್ಣ ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ. ನನ್ನ ರಾಜಕೀಯ ಜೀವನವನ್ನೇ ಮುಗಿಸಲು ಹೊರಟ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನನ್ನ ಬೆನ್ನೆಲುಬಾಗಿ ಹುರಿದುಂಬಿಸಿದ್ದಾರೆ. ಆದ್ದರಿಂದ ನನ್ನ ಸಂಪೂರ್ಣ ಶಕ್ತಿಯನ್ನು ಜೆಡಿಎಸ್ ಪಕ್ಷಕ್ಕೆ ಮೀಸಲಿಡಲಿದ್ದೇನೆ. ಈ ಕುರಿತು ಹಿತೈಷಿಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದೇನೆ ಎಂದರು.

RELATED ARTICLES  ಇಂದಿನ(ದಿ-21/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಪರೇಶ ಮೇಸ್ತಾ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಗತಿಸಿದ ಅನೇಕ ಘಟನೆಗಳ ಕುರಿತು ಹಾಗೂ ರೈತರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ. ಈ ಬಗ್ಗೆ ಕುಮಾರಸ್ವಾಮಿಯವರು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬೆನ್ನಲ್ಲೇ, ಆನಂದ ಅಸ್ನೋಟಿಕರ್ ನನ್ನನ್ನು ಭೇಟಿಯಾಗಿ ಚುನಾವಣೆಯ ಕುರಿತು ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. 3 ದಿನದೊಳಗಾಗಿ ನನ್ನ ರಾಜಕೀಯ ನಿರ್ಧಾರದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.