ವಿನಾಯಕ ಬ್ರಹ್ಮೂರು


ಕುಮಟಾ : ಓರ್ವನಿಗೆ ಕಣ್ಣಿಲ್ಲ . ಆದರೆ ಸುಂದರವಾಗಿ ಹಾಡಬಲ್ಲ. ಇನ್ನೋರ್ವನಿಗೆ ಮಾತಾಡಲು ಬರೊಲ್ಲ. ಆದರೆ ಅದ್ಭುತ ಕಲೆಗಾರನಾಗಿ ಚಿತ್ರಗಳಿಗೆ ಜೀವ ತುಂಬುತ್ತಾನೆ. ಇಬ್ಬರು ವಿಶೇಷ ಮಕ್ಕಳ ಜುಗಲ್‍ಬಂದಿಯ ಅಪರೂಪದ ಸಿನಿಮಾ ವಿರೂಪಾ. ಕನ್ನಡ ಚಿತ್ರರಂಗದಲ್ಲಿ ಮಾಸ್ ಚಿತ್ರಗಳ ಆರ್ಭಟದ ನಡುವೆ ಕ್ಲಾಸ್ ರೂಪದಲ್ಲಿ ವಿಶಿಷ್ಠತೆಯ ಬಣ್ಣ ಬಳಿದುಕೊಂಡು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ ವಿರೂಪಾ.

ವಿಶೇಷ ಚೇತನ ಮಕ್ಕಳು ಅಭಿನಯಿಸಿರುವ ವಿಭಿನ್ನ ಸಿನಿಮಾವೀಗ ಸೆನ್ಸಾರ್‍ಬೋರ್ಡ್‍ನಿಂದ ಯು ಸರ್ಟಿಫಿಕೇಟ್ ಪಡೆದುಕೊಂಡು ಬಿಡುಗಡೆಗೆ ಕಾದು ಕುಳಿತಿದೆ.
ಟೈಟಲ್‍ನಲ್ಲಿ ಮೂವರು : ಡುಬೋಯ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿ ಡ್ಯಾಫ್ನಿ ನೀತುವ ಡಿಸೋಜ ನಿರ್ಮಿಸಿರುವ ‘ವಿರುಪಾ’ ಚಿತ್ರವನ್ನು ಪುನೀಕ್ ಶೆಟ್ಟಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿನ್ಸೆಂಟ್, ರುಸ್ತುಂ, ಪಾಕ್ಷ ಎಂಬ ಹೆಸರಿನ ಮೂರು ಪಾತ್ರಗಳಿದ್ದು, ಪ್ರತಿಯೊಂದು ಪಾತ್ರದ ಹೆಸರಿನ ಮೊದಲ ಪದವನ್ನು ಬಳಸಿ ವಿಪಾ ಎಂದು ಚಿತ್ರಕ್ಕೆ ಟೈಟಲ್ ಇಟ್ಟಿರುವುದಾಗಿ ನಿರ್ದೇಶಕ ಪುನೀಕ್ ಶೆಟ್ಟಿ ಹೇಳಿದ್ದಾರೆ.

ಚಿತ್ರಕಥೆಯು ಹಂಪಿ ಸುತ್ತಮುತ್ತ ನಡೆಯುವ ಕಥೆಯಾಗಿದ್ದು, ಸಂಪೂರ್ಣ ಚಿತ್ರೀಕರಣವನ್ನು ಹಂಪಿಯಲ್ಲಿ ಶೂಟ್ ಮಾಡಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಪ್ರದೀಪ್ ಮಳ್ಳೂರುವ ಸಂಗೀತ ನೀಡಿದ್ದಾರೆ. ಅನಂತ್‍ರಾಜ್ ಅರಸ್ ಅವರ ಕ್ಯಾಮರಾ ವರ್ಕ್ ವಿರುಪಾ ಚಿತ್ರಕ್ಕಿದೆ.

RELATED ARTICLES  ವಿಧಾತ್ರಿ ಅಕಾಡೆಮಿ ಸಹಯೋಗದ ಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ IMU CET ಪರೀಕ್ಷೆಯಲ್ಲಿ ಉತ್ತಮ ಸಾಧನೆ


ಒಂದು ವಿಶೇಷವಾದ ಕತೆಯನ್ನು ವಿಶೇಷವಾದ ಮಕ್ಕಳ ಜೊತೆ ನಿಂತು ಮಾಡಬೇಕು ಅನಿಸಿತು. ಹೀಗಾಗಿ ಅಂತ ಪ್ರತಿಭಾವಂತ ಮಕ್ಕಳ ಆಡಿಷನ್‍ಗಾಗಿ ಹಂಪಿ ಉತ್ಸವದಲ್ಲಿ ಪ್ರಚಾರದ ಕರಪತ್ರ ಹಂಚಲಾಯಿತು. ಇದನ್ನು ನೋಡಿಕೊಂಡು ಚಿತ್ರದಲ್ಲಿ ನಟಿಸುವುದಕ್ಕೆ ಅಂಧ ಮಕ್ಕಳು ಮುಂದೆ ಬಂದರು. ಈ ಕಾರಣಕ್ಕೆ ನಾನು ಕಂಡ ಕನಸಿನ ಸಿನಿಮಾ ಯಾವುದೇ ರೀತಿಯ ಅಡ್ಡಿಗಳು ಇಲ್ಲದೇ ಚಿತ್ರೀಕರಣ ಮಾಡಲಾಗಿದೆ. ಒಳ್ಳೆಯ ಸಿನಿಮಾ ಎಲ್ಲ ವರ್ಗ್ಗ ನೋಡುವಂಥ ಚಿತ್ರವಿದು ಎಂಬುದು ಪುನಿಕ್ ಶೆಟ್ಟಿ ಅವರ ಮಾತು.


ಚಿತ್ರದ ಕಥೆ ಏನು? : ಒಬ್ಬ ಕುರುಡ, ಮತ್ತೊಬ್ಬ ಮೂಕನಾಗಿದ್ದು ಇವರೊಂದಿಗೆ ಪುಟ್ಟ ಹುಡುಗಿ ಇರುತ್ತಾಳೆ. ಹಂಪಿಯಲ್ಲಿ ಗೈಡ್ ಆಗಿರುವ ಮಂಜು, ಮಾತು ಬಾರದ ತನ್ನ ಸೋದರನನ್ನು ಚೆನ್ನಾಗಿ ಓದಿಸಬೇಕೆಂದು ಸಿಟಿಗೆ ಕಳುಹಿಸುತ್ತಾನೆ. ಅಲ್ಲಿನ ವಾತಾವರಣ, ಒತ್ತಡಗಳು ಸರಿ ಹೊಂದದೆ ತಪ್ಪಿಸಿಕೊಂಡು ಬರುವಾಗ ದಾರಿಯಲ್ಲಿ ಕುರುಡನ ಪರಿಚಯವಾಗಿ ಅವನೊಂದಿಗೆ ಹುಟ್ಟಿದ ಊರಿಗೆ ವಾಪಸ್ಸು ಬಂದು ಏನು ಮಾಡುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದೇ ‘ವಿರೂಪ’ ಚಿತ್ರದ ಒಂದು ಸಾಲಿನ ಕತೆ. ಪಟ್ಟಣ ಜೀವನ ಬಲು ಕಷ್ಟ. ಹಳ್ಳಿಯ ಬದುಕು ಸುಲಭ. ಇಲ್ಲಿಯ ಸಂಸ್ಕøತಿ, ಪರಂಪರೆಗಳು ಸನ್ನಿವೇಶದ ಮೂಲಕ ಬರುವುದು ಚಿತ್ರಕ್ಕೆ ಹೊಸ ಮೆರುಗು ತಂದಿದೆ. ಪ್ರದೀಪ್ ಮಳ್ಳೂರು ಸಂಗೀತ ನೀಡಿದ್ದು, ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ. ಅನಂತ್‍ರಾಜ್ ಅರಸ್ ಅವರು ಕ್ಯಾಮೆರಾ ಹಿಡಿದಿದ್ದು ಪೂರ್ತಿ ಸಿನಿಮಾ ಸಿಂಕ್ ಸೌಂಡಿನಲ್ಲೇ ಮಾಡಲಾಗಿದೆ ಎನ್ನುವುದು ವಿಶೇಷ.

RELATED ARTICLES  ಗುರು ಪ್ರೇರಣಾ ಕಾರ್ಯಾಗಾರ: ವಿಜ್ಞಾನ ಶಿಕ್ಷಕರಲ್ಲಿ ಕೌತುಕತೆ, ವೃತ್ತಿಪರತೆ ಮೇಳೈಸಬೇಕು- ಎನ್.ಆರ್.ಗಜು



ಭಟ್ಕಳದ ಶಾಯಲ್ ಮಿಂಚು


ವಿರೂಪಾದಂತಹ ವಿಭಿನ್ನ ಸಿನಿಮಾದಲ್ಲಿ ಜಿಲ್ಲೆಯವರೂ ಒಬ್ಬರಿದ್ದಾರೆ ಎನ್ನುವುದು ವಿಶೇಷ ಸಂಗತಿಯಾಗಿದ್ದು ಭಟ್ಕಳದ ಶಾಯಲ್ ಪ್ರಮುಖ ಪಾತ್ರದಲ್ಲಿ ಕಾಣ ಸಿಕೊಂಡಿದ್ದಾರೆ. ಸ್ನೇಹಾ ವಿಶೇಷ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಈತನಿಗೆ ಒಳ್ಳೆಯ ಅವಕಾಶವೊಂದು ಈಗ ಹುಡುಕಿ ಬಂದಿದೆ. ಅಂಧನಾಗಿದ್ದರೂ ಉತ್ತಮ ಹಾಡುಗಾರನಾಗಿರುವ ಈ ಪ್ರತಿಭೆಯನ್ನು ಬೆಳ್ಳಿತೆರೆ ಮೇಲೆ ನೋಡಲು ಜಿಲ್ಲೆ ಜನ ಕಾತರದಿಂದಿದ್ದಾರೆ. ನಿರ್ದೇಶಕರು ಕಲಿಸಿಕೊಟ್ಟಂತೆಯೇ ಅಭಿನಯ ಮಾಡಿದೆ, ಭಯವೆನಿಸಲಿಲ್ಲ, ತಂಡದವರಿಗೆ ಟ್ರೈನಿಂಗ್ ಕೊಟ್ಟು ಅಭಿನಯ ಮಾಡಿಸಲು ಪುನೀಕ್ ಅವರು ತುಂಬಾ ಶ್ರಮ ಪಟ್ಟಿದ್ದಾರೆ. ನನಗೆ ವಿರೂಪಾ ಒಂದು ವಿಶೇಷವಾದ ಅನುಭವ ನೀಡಿತು. ಇನ್ನೂ ಹೆಚ್ಚೆಚ್ಚು ಬೆಳೆಯಲು ತಾಲೂಕಿನ ಜನರ ಆಶೀರ್ವಾದ ಬೇಕು ಎಂದು ಹೇಳಿಕೊಂಡರು.