ಗೋಕರ್ಣ:ಆಸ್ಸಾಂ ಮೂಲದ ನಾಲ್ಕು ಜನರು ಇಲ್ಲಿನ ಕುಡ್ಲೆ ಸಮುದ್ರದಲ್ಲಿ ಈಜಲು ತೆರಳಿದಾಗ ಸೆಳತಕ್ಕೆ ಸಿಕ್ಕು ಪ್ರಾಣಾಪಾಯದಲ್ಲಿದ್ದರು. ಈ ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ವರದಿಯಾಗಿದೆ.

ಆಸ್ಸಾಂ ಮೂಲದ ನಾಲ್ಕು ಜನ ಸ್ನೇಹಿತರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದವರು, ಸುಮದ್ರದಲ್ಲಿ ಈಜಲು ತೆರಳಿದ್ದರು. ಈ ಸಂದರ್ಭದಲ್ಲಿ ಒಬ್ಬ ಸಮುದ್ರ ಸುಳಿಯಲ್ಲಿ ಸಿಕ್ಕಿದ್ದಾನೆ ಎನ್ನಲಾಗಿದೆ.

RELATED ARTICLES  ಕಾರು ಮತ್ತು ಟ್ಯಾಂಕರ ಲಾರಿ ನಡುವೆ ಅಪಘಾತ

ಕರ್ತವ್ಯದಲ್ಲಿ ಜೀವರಕ್ಷಕ ಸಿಬ್ಬಂದಿ ಗಮನಿಸಿದ್ದು, ತಕ್ಷಣ ರಕ್ಷಣೆಗೆ ಧಾವಿಸಿ ಜೀವಾಪಾಯದಿಂದ ಪಾರುಮಾಡಿದ್ದಾರೆ. ಜೀವಾಪಾಯದಿಂದ ಪಾರಾಗಿ ಬಂದವನ್ನು ರಾಹುಲ್ಜಿತ್ ಕಲಿತ್ ಎಂದು ಗುರುತಿಸಲಾಗಿದೆ.

RELATED ARTICLES  ಅಘನಾಶಿನಿಗೆ ಶುದ್ಧ ನೀರು ಅಣೆಕಟ್ಟು ನಿರ್ಮಾಣ

ಲೈಫ ಗಾರ್ಡಗಳಾದ ಸಂಜೀವ ಹೊಸ್ಕಟ್ಟಾ, ನಿತ್ಯಾನಂದ ಹರಿಕಂತ್ರ ಜೀವರಕ್ಷಣೆ ಮಾಡಿದರಾಗಿದ್ದಾರೆ. ಇವರ ಈ‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.