ಕುಮಟಾ:ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿನಡೆಸಿ ಮಾತನಾಡಿದ ಬಿಜೆಪಿ ಯುವಮೋರ್ಚಾ ತಾಲೂಕಾಧ್ಯಕ್ಷ ವಿಶ್ವನಾಥ ನಾಯ್ಕ ಸುರಜ್ ನಾಯ್ಕ ವಿರುದ್ಧ ಕಿಡಿ ಕಾರಿದ್ದಾರೆ. ಅನಂತ ಕುಮಾರ್ ವಿರುದ್ದ ಇಲ್ಲ ಸಲ್ಲದ ಹೇಳಿಕೆ ನೀಡುವ ಸೂರಜ್ ನಾಯ್ಕ ಎಂಬುದಾಗಿ ಹೇಳಿದ ಅವರು ಮಾತು ಮುಂದುವರಿಸಿ ಕೊಟ್ಟ ಕುದುರೆಯನ್ನು ಏರಲಾರದ ಸೂರಜ್ ನಾಯ್ಕ ಅನಂತಕುಮಾರ ಹೆಗಡೆ ಕುರಿತು ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಬಿಜೆಪಿ ಸೂರಜ್ ನಾಯ್ಕರಿಗೆ ಸಾಕಷ್ಟು ಅವಕಾಶ ನೀಡಿತ್ತು. ಪಕ್ಷಕ್ಕೆ ಅವರು ಸೇರ್ಪಡೆಯಾದ ಒಂದೇ ವರ್ಷದಲ್ಲಿ ಅವರಿಗೆ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದಲ್ಲಿ ಹುದ್ದೆ ನೀಡಲಾಗಿತ್ತು. ವಿಧಾನಸಭಾ ಚುನಾವಣೆಗೆ ಟಿಕೆಟ್ ಕೂಡ ನೀಡಲಾಯಿತು. ಎರಡು ಬಾರಿ ಅವರ ಪತ್ನಿ ವೀಣಾ ನಾಯ್ಕರಿಗೆ ಜಿಲ್ಲಾ ಪಂಚಾಯತ ಚುನಾವಣೆಗೆ ಟಿಕೆಟ್ ನೀಡಿ, ಆರಿಸಿತರಲಾಯಿತು. ಹೀಗೆ ಪಕ್ಷದಲ್ಲಿ ಸಿಕ್ಕ ಸಾಕಷ್ಟು ಅವಕಾಶಗಳನ್ನೆಲ್ಲ ಬಳಸಿಕೊಂಡು ಕಳೆದ ಬಾರಿ ಟಿಕೆಟ್ ನೀಡಿಲ್ಲವೆಂದು ಪಕ್ಷದ ವಿರುದ್ಧ ನಿಂತಿರುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಅನಂತಕುಮಾರ ಹೆಗಡೆಯವರಿಂದಲೇ ಬೆಳೆದು ಈಗ ಅವರ ವಿರುದ್ಧ ಮನಬಂದಂತೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇವರೇ ಅಧ್ಯಕ್ಷರಾಗಿರುವ ತಾಲೂಕಾ ಯುವ ಒಕ್ಕೂಟದ ಕಟ್ಟಡಕ್ಕೆ ಸಂಸದರು 3 ಲಕ್ಷ ಅನುದಾನ ನೀಡಿದರೂ ಈವರೆಗೆ ಕಟ್ಟಡ ಕಟ್ಟಿಸಲಿಲ್ಲ ಎಂದರು.
ಪರೇಶ್ ಸಾವಿನ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೂ ಪಕ್ಷ ಅವರ ತಂದೆ ಕಮಲಾಕರ ಮೇಸ್ತ ಅವರ ಜೊತೆಗಿದೆ. ಆ ಸಂದರ್ಭದಲ್ಲಿ ನಡೆದ ಘಟನೆಗಳಲ್ಲಿ ಯಾರು ಯಾರ ಮೇಲೆ ಪ್ರಕರಣ ದಾಖಲಿಸಲಾಗಿತ್ತೋ ಅವರ ಬಿಡುಗಡೆಯಿಂದ ಹಿಡಿದು, ಕಾನೂನು ನೆರವಿನ ಸಹಾಯದವರೆಗೂ ಪಕ್ಷ ಮಾಡುತ್ತಬಂದಿದೆ ಎಂದು ಪ್ರಶಾಂತ ನಾಯ್ಕ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಸದರ ಸಾಧನೆಯ ಕುರಿತು ಸೂರಜ್ ಪ್ರಶ್ನಿಸುತ್ತಾರೆ. ಏನೂ ಸಾಧನೆ ಮಾಡಿಲ್ಲವೆಂದು ಆರೋಪಿಸುತ್ತಾರೆ. ಜಿಲ್ಲೆಯಲ್ಲಿ 1.47 ಲಕ್ಷ ಸಿಲೆಂಡರ್ ಉಜ್ವಲ ಯೋಜನೆಯಲ್ಲಿ ವಿತರಿಸಲಾಗಿದೆ. 1.90ಲಕ್ಷ ಆಯುಷ್ಮಾನ್ ಭಾರತ ಕಾರ್ಡುಗಳನ್ನು ವಿತರಿಸಲಾಗಿದೆ. 1.89 ಲಕ್ಷ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ. ಈವರೆಗೂ ವಿದ್ಯುತ್ ಸಂಪರ್ಕವಿಲ್ಲದ 25 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದರಿಂದ 28.700 ಮನೆಗಳು ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದಿವೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸೀಬರ್ಡ ಪರಿಹಾರದ 566ಕೋಟಿ ರೂ. ಹಣ ವಿತರಿಸಲಾಗಿದೆ. ಇದೆಲ್ಲ ಸಾಧನೆಯಲ್ಲವೇನು ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೇಮಂತ ಗಾಂವಕರ ಮತ್ತಿತರು ಇದ್ದರು.