ಹೊನ್ನಾವರ : ವಿಶೇಷ ತನಿಖಾದಳ ಹಾಗು ಸಹಾಯಕ ಪ್ರಾದೇಶಿಕ ಕಛೇರಿ ಹೊನ್ನಾವರ ಜಂಟಿ ಕಾರ್ಯಾಚರಣೆ ನಡೆಸಿ ರಾಷ್ಟೀಯಹೆದ್ದಾರಿಯಲ್ಲಿ ನಿಯಮಬಾಹಿರ ಕಾನೂನು ಉಲ್ಲಂಘಿಸಿ ಸಂಚಾರ ನಡೆಸುತ್ತಿದ್ದ ವಾಹನವನ್ನು ತಡೆದು ತಪಾಸಣೆ ಮಾಡಿ ಸರಿಸುಮಾರು ೨೫ ಕ್ಕೂ ಅಧಿಕ ವಾಹನಗಳನ್ನು ಪತ್ತೆ ಹಚ್ಚಿ ಕಾನೂನಾತ್ಮಕ ಕ್ರಮ ತೆಗೆದುಕೊಂಡಿದ್ದಾರೆ ನಿನ್ನೆಯಿಂದ ಪ್ರಾರಂಭವಾದ ಈ ಕಾರ್ಯಚರಣೆ ಇಂದಿಗು ಮುಂದುವರೆದಿದೆ. ಕಳೆದ ಕೆಲ ದಿನದ ಹಿಂದೆ ಜಿಲ್ಲೆಯಾದ್ಯಂತ ಚಾಲಕರ ನಿಲಕ್ಷತನದಿಂದ ನಡೆದ ಅವಘಡ ಸಾರ್ವಜನಿಕರಿಗೆ, ಆತಂಕ ಜೊತೆ ರಸ್ತೆ ವಾಹನ ಸಂಚಾರಕ್ಕೂ ತೊಂದರೆ ಉಂಟಾದ ಹಿನ್ನಲೆಯಲ್ಲಿ ಸಂಭದಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿರುವುದು ಒಳ್ಳೆಯ ಬೆಳವಣೆಗೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

RELATED ARTICLES  ಅಕ್ರಮ ಮದ್ಯ ಮಾರಾಟ: ಆರೋಪಿ ಪೋಲೀಸ್ ವಶಕ್ಕೆ.