ಸಿದ್ದಾಪುರ:ಸಿದ್ದಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಆನಂದ್ ಅಸ್ನೋಟಿಕರ್ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಆಸ್ತಿ ಅವನ ನಾಲಿಗೆಯೇ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಅನಂತಕುಮಾರ್ ಹೆಗಡೆ ಅರಬ್ ರಾಷ್ಟ್ರಗಳಿಂದ ಬಿಟುಮಿನ್ ಖರೀದಿಸಿ ವ್ಯಾಪಾರ ಮಾಡಿ ಡಾಂಬರ್ ದಂಧೆ ನಡೆಸುತ್ತಾರೆ. ಕದಂಬ ಸಂಸ್ಥೆ ಮುಖಾಂತರ ಅದನ್ನ ಮಾರಿ ಕಮಿಷನ್ ಹೊಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮುಸಲ್ಮಾನರ ಓಟು ಬೇಡ ಎನ್ನುತ್ತ ಅವರ ಜೊತೆನೇ ವೇದಿಕೆ ಹಂಚಿಕೊಳ್ಳುತ್ತಾರೆ. ಮಾತಾಡೋದೆ ಅವರ ಕೆಲಸ, ಅವನು ಒಬ್ಬ ಅಹಂಕಾರಿ, ದಡ್ಡ. ಶಿರಸಿಯಲ್ಲಿ ಮುಸಲ್ಮಾನರ ಜೊತೆಗೂಡಿ ರಿಯಲ್ ಎಸ್ಟೇಟ್ ದಂಧೆ ಮಾಡಿ ಜನರಿಗೆ ಮೋಸ ಮಾಡೋದು ಇವರ ಕೆಲಸ ಎಂದು ಕಿಡಿಕಾರಿದರು.
ಅಭಿವೃದ್ಧಿಗೆ ತಡೆ ಒಡ್ಡುವ ಪರಿಸರವಾದಿಗಳೆಲ್ಲ ಅನಂತಕುಮಾರ್ ಶಿಷ್ಯರು ಎಂದು ಆನಂದ ಹೇಳಿದರು.