ಯಲ್ಲಾಪುರ: ಯಲ್ಲಾಪುರದ ರಸ್ತೆಗಳು ಈಜುಗೊಳ ವಾಗಿ ಪರಿವರ್ತನೆಯಾಗಿದೆ ಈ ಕುರಿತು ಪಟ್ಟಣ ಪಂಚಾಯಿತಿ ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂದು ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರಸಾದ ಪ್ರಮೋದ್ ಹೆಗಡೆ ಆರೋಪಿಸಿದ್ದಾರೆ .

ಪಟ್ಟಣದಲ್ಲಿ ಪ್ರತಿಯೊಂದು ರಸ್ತೆಗಳು ಹೊಂಡ ತಗ್ಗು ಬಿದ್ದು ಹದಗೆಟ್ಟಿದ್ದು ರಸ್ತೆಯ ಪಕ್ಕದಲ್ಲಿ ಅನಧಿಕೃತವಾಗಿ ಸಂಗ್ರಹಿಸಲಾದ ಮಣ್ಣಿನಿಂದ ಕೆಸರು ಗದ್ದೆಯಂತಾಗಿದೆ
ಕಾಂಗ್ರೆಸ್‌ ಸರಕಾರ ಹೊಂಡ ಭಾಗ್ಯ ವನ್ನು ಜನರಿಗೆ ಕರುಣಿಸಿದೆ.

ದೇಶದಲ್ಲಿ ಒಂದು ಕಡೆ ಮೋದಿ ಸರಕಾರ ಸ್ವಚ್ಛತೆ ಕರೆ ಕೊಟ್ಟು ಅದರ ಬಗ್ಗೆ ಜನರಲ್ಲಿ ಜಾಗ್ರತೆ ಮೂಡಿಸುತ್ತಿದ್ದರೆ ಇನ್ನೊಂದು ಕಡೆ ಯಲ್ಲಾಪುರದ ಪ.ಪಂ ಸ್ವಚ್ಛತೆ ಬಗ್ಗೆ ನಿಷ್ಕಾಳಜಿ ವಹಿಸುತ್ತಿದೆ. ಈ ನೀತಿಯನ್ನು ಬಿಜೆಪಿಯು ಖಂಡಿಸುತ್ತದೆ.

RELATED ARTICLES  ಮಾರಿಕಾಂಬೆಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ ಕಾಗೇರಿ

ಅತಿ ಹೆಚ್ಚು ಬಾರಿ ಪ.ಪಂ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ನಗರದಲ್ಲಿ ಸಾರ್ವಜನಿಕರಿಗೆ ಶೌಚಾಲಯ ನಿರ್ಮಾಣ ಮಾಡದೇ ಇರುವಂತಹದ್ದು ನೋಡಿದರೆ ಮಂದಿನ ದಿನಗಳಲ್ಲಿ ಶೌಚಾಲಯ ಭಾಗ್ಯವನ್ನು ಶಾಸಕರು ಪ್ರಚಾರಕ್ಕಾಗಿ ಚುನಾವಣಾ ಸಮಯದಲ್ಲಿ ಷೋಷಿಸುವ ತಯಾರಿಯಲ್ಲಿ ಇರಬಹುದು ಎಂಬುದಾರ ಸಂಕೇತವಾಗಿದೆ.

RELATED ARTICLES  ಉತ್ತರಕನ್ನಡದಲ್ಲಿ ಜಾತ್ರೆ ಹಬ್ಬಹುಣ್ಣಿಮೆಗಳು ರದ್ದು..!

ಕಾಂಗ್ರೆಸ್ ನ ಪ.ಪಂ ಗೆ ಬಿಜೆಪಿ ಪಕ್ಷದ ಮನವಿ ಎನೆಂದರೆ ಒಣ ಪ್ರಚಾರಕ್ಕಾಗಿ ಶಾಸಕರು ನಗರದ ಮನೆಗೆ ತೆರಳಿ ಡಬ್ಬಿಯನ್ನು ವಿತರಣೆ ಮಾಡುವ ಬದಲು ನಗರದ ಅಭಿವೃದ್ಧಿ ಗೆ ಯೋಜನೆಯನ್ನು ರೂಪಿಸಿ.ಮತ್ತು ನಗರಕ್ಕೆ ಅಭಿವೃದ್ಧಿ ಹಣವನ್ನು ತರುವುದರ ಮೂಲಕ ಎಲ್ಲಾ ಪರರನ್ನು ಅತ್ಯಂತ ಸುಂದರ ಹಾಗೂ ಸ್ವಚ್ಛ ಪಟ್ಟಣವನ್ನಾಗಿ ಪರಿವರ್ತಿಸಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ .