ಶ್ರೀಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಅಧ್ಯಕ್ಷತೆಯನ್ನು ಸಂಸ್ಥೆಯಅಧ್ಯಕ್ಷರು ಸಾಮಾಜಿಕಚಿಂತಕರುಆದ ಶ್ರೀ ವಿಶ್ವನಾಥ ಶರ್ಮಾ ನಾಡಗುಳಿ ವಹಿಸಿ ಮಾತನಾಡಿ.ತಾವುರಾಜ್ಯದಲ್ಲೇರ್ಯಾಂಕ ಪಡೆದ ಶಿಕ್ಷಣ ಸಂಸ್ಥೆಯಲ್ಲಿಓದುತಿದ್ದೀರಿ, ಇಲ್ಲಿ ನುರಿತ ಹಾಗೂ ಬದ್ಧತೆಯುಳ್ಳ ಶಿಕ್ಷಕ ಸಮುದಾಯವಿದೆ, ದೂರದೃಷ್ಟಿಯುಳ್ಳ ಆಡಳಿತ ಮಂಡಳಿ ಇದೆ, ಸಂಸ್ಕಾರವಂತ ತಂದೆ-ತಾಯಿಗಳಿದ್ದಾರೆ, ಒಳ್ಳೆಯ ಪರಿಸರವಿದೆ,ವಿದ್ಯಾರ್ಥಿಗಳು ತಾವುಕಲಿತ ಶಾಲೆಗೆ,ತಂದೆ-ತಾಯಿಗಳಿಗೆ ಹಾಗೂ ಗುರುಗಳಿಗೆ ಸದಾ ವಿಧೇಯರಾಗಿರಬೇಕುಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಎಮ್‍ಆರ್ ಹೆಗಡೆ ಪಟ್ಟಿಗುಂಡಿಇವರು ಮಾತನಾಡಿ ನೀವೀಗ ಹದೆಹರೆಯದಲ್ಲಿದ್ದಿರಿ ನಿಮನ್ನುಆಕರ್ಷಿಸುವಎಲೆಕ್ಟ್ರಾನಿಕವಸ್ತುಗಳು ಬಹಳ ಇವೆ. ಆದರೆಇಂದು ಶಿಕ್ಷಣ ಸಾರ್ವತ್ರೀಕರಣವಾಗಿದೆ.ಶಿಕ್ಷಣದಲ್ಲಿ ಸ್ಪರ್ಧೆ ಅನಿವಾರ್ಯ ಸ್ಪರ್ಧೆಯಲ್ಲಿ ಸತತ ಸಾಧನೆಯ ಹಾದಿಯಲ್ಲಿರುವರಿಗೆ ಮಾತ್ರಉಜ್ವಲ್ ಭವಿಷ್ಯವಿದೆ ಹಾಗೆಯೆಕೃಷಿಯ ಬಗ್ಗೆಯೂ ಒಲವನ್ನು ತೋರಿಸಿಎಂದು ಮಾರ್ಮಿಕವಾಗಿ ನುಡಿದರು.ವೇದಿಕೆಯಲ್ಲಿಗೌರವ ಸದಸ್ಯರಾದಶ್ರೀ ಸತ್ಯನಾರಾಯಣ ಭಟ್ಟ ಬಾವಿಕೈ ಉಪಸ್ಥಿತರಿದರು.ಕುಮಾರಿ ನಿಖಿತಾ.ಹೆಗಡೆ ಪ್ರಾರ್ಥಿಸಿದರು. ಮುಖ್ಯದ್ಯಾಪಕರಾದ ಶ್ರೀ .ಎಮ್.ಜಿ ಹೆಗಡೆ ಸ್ವಾಗತಿಸಿದರು .
ಶ್ರೀ ನಾರಾಯಣದೈಮನೆಕಾರ್ಯಕ್ರಮವನ್ನು ನಿರೂಪಿಸಿದ್ದರು.ಶ್ರೀ ಆರ್.ಕೆಚೌವ್ಹಾಣ ವಂದಿಸಿದರು.ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಾವೇ ಸಂಗ್ರಹಿಸಿದ ಕಾಣಿಕೆಯನ್ನು ಸಂಸ್ಥೆಗೆ ಸಲ್ಲಿಸಿದರು.