ಕುಮಟಾ : ವಿನಾಯಕ ಬ್ರಹ್ಮೂರು ನಿರ್ದೇಶನದ ಸೈಕಾಲಾಜಿಕಲ್ ಥ್ರಿಲ್ಲರ್ ಆಚೆ ಚಿತ್ರದ 2ನೇ ಟೀಸರ್ ರಿಲೀಸ್ ಆಗಿದೆ. ರಂಗಭೂಮಿ ಸ್ಟಾರ್ ಗಳಾದ ದಯಾನಂದ ಬಿಳಗಿ ಹಾಗೂ ಹರ್ಷ ಹಿರಿಯೂರು ನಟಿಸಿರುವ ಚಿತ್ರದಲ್ಲಿ ಮುಂಬೈ ಬೆಡಗಿ ತೇಜು ನಾಯ್ಕ ನಾಯಕಿಯಾಗಿ ಗಮನ ಸೆಳೆದಿದ್ದು ಚಿತ್ರದ ಟೀಸರ್ ಗಳು ಇದೀಗ ನೋಡುಗರ ಕುತೂಹಲವನ್ನು ಕೆರಳಿಸುತ್ತಿದೆ.

RELATED ARTICLES  ಅಪಘಾತದಲ್ಲಿ ಮೂರು ಕಾಲುಗಳನ್ನು ಕಳೆದುಕೊಂಡ ಗೋವು.

ಕೆಲದಿನಗಳ ಹಿಂದೆ ಬಿಳಗಿ ವರ್ಷನ್ ಟೀಸರ್ ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕಾಲಿವುಡ್ ನಟಿ ಪೂರ್ವಿ ಕೂಡ ಟೀಸರ್ ಮೆಚ್ಚಿ ಪ್ರತಿಕ್ರಿಯೆ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಚೆ ಚಿತ್ರಕ್ಕೆ ವಿಡಿಯೋ ಮೂಲಕ ಶುಭ ಹಾರೈಸಿದ್ದರು. ಇದೀಗ ಚಿತ್ರ ತಂಡವು ಹಿರಿಯೂರು ವರ್ಷನ್ ಟೀಸರ್ ಬಿಡುಗಡೆ ಮಾಡಿದ್ದು ಯೂಟ್ಯೂಬ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

RELATED ARTICLES  ಶಿರಸಿ ನಗರ ಸಭೆಯಲ್ಲೊಬ್ಬ ಕಾಯಕಯೋಗಿ

ಹರ್ಷ ಹಿರಿಯೂರು ಅವರು ಟೀಸರ್ ಉದ್ದಕ್ಕೂ ಮಿಂಚಿದ್ದಾರೆ. ಈ ಮೂಲಕ ಚಿತ್ರದಲ್ಲಿ ಆ ಮೂವರ ಪಾತ್ರವೇನು ಎನ್ನುವ ಕುತೂಹಲವನ್ನು ಕ್ರಿಯೇಟ್ ಮಾಡಿದೆ.


ಆಚೆ ಚಿತ್ರವು ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದು ಸದ್ಯದಲ್ಲಿ ಚಿತ್ರತಂಡ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಲಿದೆ.