ಯಲ್ಲಾಪುರ : ಸಂಗೀತಗಾರ ವಿದ್ವಾನ್ ದತ್ತಣ್ಣ ಚಿಟ್ಟೆಪಾಲ ಅವರಿಗೆ ೫೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಶಿಷ್ಯರು ಸೇರಿ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸನ್ಮಾನ ಸಮಿತಿಯ ಪ್ರಮುಖ ಪ್ರಸನ್ನ ಗಾಂವ್ಕರ್ ವಾಗಳ್ಳಿ ಹೇಳಿದರು.
ಅವರು ಶುಕ್ರವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಈ ವಿಷಯ ತಿಳಿಸಿದರು ಹಿಂದುಸ್ತಾನಿ ಸಂಗೀತದಲ್ಲಿ ಕಳೆದ ಹಲವಾರು ಪಟ್ಟಣದ ಅಡಿಕೆ ಭವನದಲ್ಲಿ ಆ.೬ ರಂದು ಮಧ್ಯಾಹ್ನ ೩. ೩೦ ಕ್ಕೆ ಏರ್ಪಡಿಸಲಾಗಿದೆ. ವರ್ಷಗಳಿಂದ ಗಾಯನ, ಸಿತಾರ ಹಾಗೂ ಹಾರ್ಮೊನಿಯಂ ವಾದನದಲ್ಲಿ ಪರಿಶ್ರಮ ಹೊಂದಿ, ಅಪಾರ ಶಿಷ್ಯರಿಗೆ ಸಂಗೀತವನ್ನು ಬೋಧಿಸುತ್ತ ಬಂದಿದ್ದಾರೆ. ಸಂಗೀತ ಶಿಕ್ಷಕರಾಗಿ, ಸಂಘಟಕರಾಗಿ ಅಪಾರ ಅನುಭವ ಹೊಂದಿದ್ದಾರೆ. ಕಾರ್ಯಕ್ರಮದಲ್ಲಿ ಇವರನ್ನು ಹಿಂದುಸ್ಥಾನಿ ಗಾಯಕ ಶ್ರಿೀಪಾದ ಹೆಗಡೆ ಕಂಪ್ಲಿ ಸನ್ಮಾನಿಸಲಿದ್ದಾರೆ ಎಂದರು.
ದತ್ತಣ್ಣ ಅವರ ಕುರಿತು ಡಾ.ಡಿ. ಕೆ. ಗಾಂವ್ಕಾರ ಅವರು ಬರೆದ ನಾದೋಪಾಸಕ ಪುಸ್ತಕವನ್ನು ಡಿಡಿಪಿಯು ಕೆ. ಟಿ. ಭಟ್ಟ ಬಿಡುಗಡೆಗೊಳಿಸಲಿದ್ದಾರೆ. ಸಿತಾರ್ ವಾದಕ ಶಫೀಕ್ ಖಾನ್ ಭಾಗವಹಿಸಲಿದ್ದಾರೆ. ವಾಗಳ್ಳಿ ರಾಮಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಎಸ್. ಎನ್. ಗಾಂವ್ಕಾರ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಶ್ರೀಪಾದ ಹೆಗಡೆ ಅವರ ಗಾಯನ, ಶಫೀಕ್ ಖಾನ್ ಅವರ ಸಿತಾರ್ ವಾದನ ನಡೆಯಲಿದ್ದು, ಸಂವಾದಿನಿಯಾಗಿ ನಾಗವೇಣಿ ಹೆಗಡೆ, ಶ್ರೀಧರ ಮಾಂಡ್ರೆ ಹಾಗೂ ಗಣೇಶ ಗುಂಡ್ಕಲ್ ತಬಲಾ ಸಾಥ್ ನೀಡಲಿದ್ದಾರೆ ಎಂದರು. ಡಾ.ದತ್ತಾತ್ರೇಯ ಗಾಂವ್ಕಾರ, ಕಲಾವಿದರಾದ ಹರೀಶ ಹೆಗಡೆ, ಧನಂಜಯ ಉಪಸ್ಥಿತರಿದ್ದರು.