ಕಾರವಾರ: ಆ್ಯಸಿಡ್ ಚೆಲ್ಲಿ ಮೂವರು ಗಾಯಗೊಂಡ ಘಟನೆ ತಾಲೂಕಿನ ಕಡವಾಡ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ನಡೆದಿದೆ.

ಶೌಚಾಲಯ ಶುಚಿಗೊಳಿಸಲೆಂದು ಒಯ್ಯುತ್ತಿದ್ದ ಆ್ಯಸಿಡ್ ಇದಾಗಿತ್ತು ಎನ್ನಲಾಗಿದೆ.

RELATED ARTICLES  ಮೀನುಗಾರ ಇಬ್ಬರು ಮುಖಂಡರು ಬಿಜೆಪಿಗೆ.

ಗ್ರಾಮ ಪಂಚಾಯ್ತಿಯೊಂದರ ಶೌಚಾಲಯ ಸ್ವಚ್ಛಗೊಳಿಸುವ ಕೆಲಸಗಾರನಾಗಿದ್ದ ವ್ಯಕ್ತಿಯೊಬ್ಬ, ಸರ್ಕಾರಿ ಬಸ್ ನಲ್ಲಿ ಬಾಟಲಿಯಲ್ಲಿ ಆ್ಯಸಿಡ್ ಕೊಂಡೊಯ್ಯುತ್ತಿದ್ದ. ಈ ವೇಳೆ ಅದು ಆಕಸ್ಮಾತ್ ಆಗಿ ಚೆಲ್ಲಿದೆ. ಘಟನೆಯಲ್ಲಿ ಆ್ಯಸಿಡ್ ಒಯ್ಯುತ್ತಿದ್ದ ವ್ಯಕ್ತಿ ಸಮೇತ ಮೂವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES  ಹಿಟ್ ಆಡ್ ರನ್ ಕೇಸ್ : ವ್ಯಕ್ತಿಗೆ ಪೆಟ್ಟು

ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.