ಶಿರಸಿ : ರೈತರ ಪರ ಸದಾ ಕಾಳಜಿ ಹೊಂದಿರುವ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ(ಉ.ಕ.) ತನ್ನ ಸದಸ್ಯರು ಸಂಘಕ್ಕೆ ತರುವ ಮಹಸೂಲುಗಳನ್ನು ಶಿಲ್ಕು ಇರಿಸಿಕೊಳ್ಳುವ ಸಲುವಾಗಿ ನಿರ್ಮಿಸಿರುವ ಬೃಹತ್ ಗಾತ್ರದ ಗೋದಾಮನ್ನು ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ ಹೆಗಡೆ ಶೀಗೇಹಳ್ಳಿ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು, ಪ್ರಧಾನ ವ್ಯವಸ್ಥಾಪಕರು ಹಾಗೂ ಸದರಿ ಗೋದಾಮು ನಿರ್ಮಾಣ ಕಾಮಗಾರಿಯನ್ನು ಮಾಡಿರುವ ಸಿವಿಲ್ ಇಂಜಿನೀಯರ್ ಆದ ಶ್ರೀ ವಿ.ಎನ್. ಹೆಗಡೆ ಶಿರಸಿ ಇವರುಗಳು ಹಾಜರಿದ್ದರು.

RELATED ARTICLES  ಕೊರೋನಾ ಹಿನ್ನೆಲೆ ಮಾರಿಕಾಂಬಾ ದೇವಸ್ಥಾನದ ಕಾರ್ತಿಕ ಉತ್ಸವ ಸರಳ ಆಚರಣೆ


ಸದರಿ ಗೋದಾಮು ಉದ್ಘಾಟಿಸಿದ ಸಂಘದ ಅಧ್ಯಕ್ಷರು ಇನ್ನು ಮುಂದೆ ರೈತರು ತರುವ ಮಹಸೂಲುಗಳನ್ನು ಶಿಲ್ಕು ಇಡಲು ಸಂಘದ ಸಿಹಿ ಅಡಿಕೆ ಪುಡಿ ತಯಾರಿಕಾ ಘಟಕದ ಪಕ್ಕದಲ್ಲಿ ನೂತನವಾಗಿ 21,000 ಚದರ ಅಡಿ ಸಾಮಥ್ರ್ಯದ ಗೋದಾಮನ್ನು ನಿರ್ಮಿಸಲಾಗಿದ್ದು, ಸದರಿ ಗೋದಾಮಿನಲ್ಲಿ ಅಜಮಾಸು ಸದಸ್ಯರ 10,000 ಅಡಿಕೆ ಚೀಲಗಳನ್ನು ಸಂಗ್ರಹಿಸಬಹುದಾಗಿದೆ. ಈ ಬೃಹತ್ ಗೋದಾಮು ನಿರ್ಮಾಣದಿಂದಾಗಿ ಸದಸ್ಯರ ಮಹಸೂಲುಗಳನ್ನು ಶಿಲ್ಕು ಮಾಡಲು ಇದ್ದ ಚಿಕ್ಕಪುಟ್ಟ ಅಡಚಣೆಗಳು ಬಗೆಹರಿದಂತಾಗಿ, ಖಾಸಗೀ ಗೋದಾಮುಗಳ ಅವಲಂಬನೆ ಸಹ ಕಡಿಮೆಯಾದಂತಾಗಿದೆ. ಈ ಮೂಲಕವಾಗಿ ಸದಸ್ಯರಿಗೆ ಯಾವ ಆತಂಕವಿಲ್ಲದೆ ಸುರಕ್ಷಿತ ಶಿಲ್ಕು ಮಾಡಲು ವಿಶಾಲವಾದ ಅವಕಾಶ ದೊರೆತಿದೆ. ಸಂಘದ ಸದಸ್ಯರು ಹಾಗೂ ಎಲ್ಲಾ ಪ್ರಾಥಮಿಕ ಸಹಕಾರಿ ಸಂಘದ ಸದಸ್ಯರು ಇದರ ಪ್ರಯೋಜನ ಪಡೆಯಬೇಕೆಂದು ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ವಿಶಿಷ್ಠತೆಯ ಬಣ್ಣ ಬಳಿದುಕೊಂಡು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ ವಿರೂಪಾ.