ಕುಮಟಾ: ಸಂಡಳ್ಳಿ, ಮತ್ತಳ್ಳಿ, ಕಂದಳ್ಳಿ, ಮಾವಳ್ಳಿ ಮತ್ತು ಮಾಸ್ತಿಹಳ್ಳದ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡುವಲ್ಲಿ ಎಲ್ಲಾ ಸ್ಥಳೀಯ ಸರ್ಕಾರ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ 45 ವರ್ಷಗಳಿಂದ ವಿಫಲವಾಗಿದೆ. ರಾಜಕಾರಣ ಗಳು, ಅಧಿಕಾರಿಗಳು ಚುನಾವಣಾ ಸಂಧರ್ಭದಲ್ಲಿ ಮಾತ್ರ ನಮ್ಮ ಊರುಗಳಿಗೆ ಭೇಟಿ ನೀಡಿ ಇಲ್ಲದ ಭರವಸೆಗಳನ್ನು ನೀಡಿ ಚುನಾವಣೆ ಮುಗಿದ ಮೇಲೆ ಒಮ್ಮೆಯೂ ನಮ್ಮ ಊರಿನ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ಇರುವುದರಿಂದ ಆಕ್ರೋಸಗೊಂಡ ಗ್ರಾಮಸ್ಥರು ಈ ವರ್ಷದಿಂದ ನಮ್ಮ ಮೂಲ ಸೌಕರ್ಯಗಳನ್ನು ಇಡೇರಿಸುವ ತನಕ ಮುಂಬರುವ ಎಲ್ಲಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಚುನಾವಣಾ ಆಯೋಗ ಮತ್ತು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ವಿಷಯ ತಿಳಿದು ಮಾನ್ಯ ತಹಶೀಲ್ದಾರರು, ತಾಲ್ಲೂಕಾ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಗಳು, ಸಹಾಯಕ ಹಿರಿಯ ಅಭಿಯಂತರರು, ಪಿ. ಆರ್. ಇ. ಡಿ. ಕುಮಟಾ, ಸೆಕ್ಟರ್ ಆಫೀಸರ್, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಗ್ರಾಮ ಲೆಕ್ಕಿಗರು ಅಳಕೋಡ ಇವರು ಗ್ರಾಮಕ್ಕೆ ಬೇಡಿ ನೀಡಿದ್ದರು.
ಸದರಿ ಸಮಸ್ಯೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿದಾಗ ಮಾಸ್ತಿಹಳ್ಳದಿಂದ ಸಂಡಳ್ಳಿಯವರೆಗೆ ಪಿ.ಆರ್.ಇ. ಡಿ ಮಣ ್ಣನ ರಸ್ತೆ ಇದ್ದು ಅದು ಅತೀ ಕೆಟ್ಟದಾಗಿ ಇರುವುದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತೆ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದೇ ಊರಿನವರು ಅನೇಕ ಸಮಸ್ಯೆ ಮತ್ತು ಅನಾಹುತಗಳು ಸಂಭವಿಸಿದ್ದು ಸತ್ಯವಾಗಿರುತ್ತದೆ ಮತ್ತು ಈ ಊರಿನಲ್ಲಿ ದೂರವಾಣ ಸಂಪರ್ಕದ ಸಮಸ್ಯೆ ಇರುವುದರಿಂದ ಸಂದರ್ಭಕ್ಕೆ ಅನುಗುಣವಾಗಿ ಫೋನ್ ಕರೆ ಮಾಡಲು ಕಷ್ಟವಾಗಿರುವುದರಿಂದ ಅನೇಕ ಸಮಸ್ಯೆಯನ್ನು ಅನುಭವಿಸುತ್ತಿರುವುದು ಸಹ ನಿಜ ಇರುತ್ತದೆ ಹಾಗೂ ಈ ಎಲ್ಲಾ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವ ಅಗತ್ಯ ಅತೀ ತುರ್ತು ಇದೆ ಎಂದು ಸ್ಥಳಕ್ಕೆ ಆಗಮಿಸಿದ ಎಲ್ಲಾ ಅಧಿಕಾರಿಗಳು ಮನಗಂಡಿರುತ್ತಾರೆ.
ಸ್ಥಳಕ್ಕೆ ಆಗಮಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚಿಸಿ ಮಾಸ್ತಿಹಳ್ಳದಿಂದ ಸಂಡಳ್ಳಿಯವರೆಗೆ ರಸ್ತೆ ನಿರ್ಮಾಣಕ್ಕೆ 2 ಕೋಟಿ ರೂ. ಹಣವನ್ನು ಮಂಜೂರು ಮಾಡಿಸುವುದಾಗಿ ಮತ್ತು ಬಿ.ಎಸ್.ಎನ್. ಎಲ್. ವತಿಯಿಂದ ನೆಟ್‍ವರ್ಕ್ ಪೂರೈಕೆ ಮಾಡಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಖಾಸಗಿ ವತಿಯಿಂದ ಆದರೂ ಮೊಬೈಲ್ ಟವರ್ ನಿರ್ಮಾಣ ಮಾಡಿಸಿ ಕೊಡುವುದಾಗಿ ಭರವಸೆ ನೀಡಿ ಗ್ರಾಮಸ್ಥರಿಗೆ ಮತದಾನ ಬಹಿಷ್ಕಾರವನ್ನು ಹಿಂದೆ ಪಡೆದು ಎಲ್ಲರೂ ಮತದಾನ ಮಾಡುವಂತೆ ಮನವಲಿಸಿದರು. ಇದಕ್ಕೆ ಜಗ್ಗದ ಗ್ರಾಮಸ್ಥರು ಲಿಖಿತವಾಗಿ ಹೇಳಿಕೆ ನೀಡುವವರೆಗೂ ಮತದಾನ ಬಹಿಷ್ಕಾರವನ್ನು ಹಿಂದೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದರು. ನಂತರ ಮಾನ್ಯ ತಹಶಿಲ್ದಾರರು ಗ್ರಾಮಸ್ಥರಿಗೆ ಲಿಖಿತವಾಗಿ ಹೇಳಿಕೆ ನೀಡಿದ ಮೇಲೆ ಮತದಾನ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದರು. ಚುನಾವಣೆ ನಂತರದಲ್ಲಿ ಬೇಡಿಕೆ ಇಡೇರದೇ ಇದ್ದ ಪಕ್ಷದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದರು. ಈ ಸಂಧರ್ಭದಲ್ಲಿ ಕುಮಟಾ ತಾಲ್ಲೂಕಿನ ಮಾನ್ಯ ತಹಶಿಲ್ದಾರಾದ ಶ್ರೀಮತಿ ಪ್ರಮೀಳಾ ದೇಶಪಾಂಡೆ, ತಾಲ್ಲೂಕಾ ಪಂಚಾಯತ್ ನಿರ್ವಹಣಾಧಿಕಾರಿಗಳಾದ ಶ್ರೀ ಟಿ. ಟಿ. ನಾಯ್ಕ, ಪಿ. ಆರ್. ಇ. ಡಿ. ಕುಮಟಾ ಅಧಿಕಾರಿಗಳಾದ ಶ್ರೀ ರಾಮದಾಸ ಗುನಗಿ, ಅಳಕೋಡ್ ಗ್ರಾಮ ಲೆಕ್ಕಿಗರಾದ ಶ್ರೀ ಬೀರಾ ಗೌಡ ಮತ್ತು ಗ್ರಾಮಸ್ಥರಾದ ಶ್ರೀ ನಾಗರಾಜ, ನಾಗೇಶ ನಾಯ್ಕ ಮಾಸ್ತಿಹಳ್ಳ, ಶ್ರೀ ರಾಜೇಶ ಶ್ರೀಧರ ಹೆಗಡೆ ಮತ್ತಳ್ಳಿ, ಶ್ರೀ ಶ್ರೀಧರ ದತ್ತಾತ್ರೇಯ ಹೆಗಡೆ ಮತ್ತಳ್ಳಿ, ಶ್ರೀ ಹರೀಶ ಗಜಾನನ ಶಾಸ್ತ್ರಿ ಸಂಡಳ್ಳಿ, ಶ್ರೀ ರಾಮ ಮಾದೇವ ಗೌಡ ಕಂದಳ್ಳಿ, ಶ್ರೀ ಶ್ರೀ ಲಕ್ಷ್ಮಣ ಮಾದೇವ ಗೌಡ ಕಂದಳ್ಳಿ, ಶ್ರೀ ಭಾಸ್ಕರ ಪರಮೇಶ್ವರ ಗೌಡ ಮತ್ತಳ್ಳಿ, ಶ್ರೀ ಗಣಪತಿ ಮಹಾಬಲೇಶ್ವರ ಹೆಗಡೆ ಕಂದಳ್ಳಿ, ಶ್ರೀ ರೋಹನ್ ಜೆ. ಫರ್ನಾಂಡೀಸ್ ಮತ್ತಳ್ಳಿ, ಶ್ರೀ ಫ್ರಾನ್ಸಿಸ್ ಫರ್ನಾಂಡೀಸ್, ಶ್ರೀ ಜೂವನ್ ಫರ್ನಾಂಡೀಸ್ ಮತ್ತಳ್ಳಿ, ಶ್ರೀ ಗಣಪತಿ ಲಕ್ಷ್ಮಣ ಗೌಡ, ಶ್ರೀ ಅಜೀತ್ ಗಣಪತಿ ಮುಕ್ರಿ ಕಂದಳ್ಳಿ, ಶ್ರೀ ಲಕ್ಷ್ಮಣ ಪಟಗಾರ ಸಂಡಳ್ಳಿ, ಶ್ರೀಮತಿ ಭಾರತಿ ಪಟಗಾರ ಸಂಡಳ್ಳಿ, ಶ್ರೀ ರಾಮ ಪಟಗಾರ ಸಂಡಳ್ಳಿ, ಶ್ರೀ ಪರಾಸ್ಥ ಫರ್ನಾಂಡೀಸ್ ಮತ್ತಳ್ಳಿ, ಶ್ರೀ ಶಂಭು ಕೆ. ಭಟ್ಟ್, ಶ್ರೀ ಗಜಾನನ ಸೀತಾರಾಮ ಹೆಗಡೆ ಸಂಡಳ್ಳಿ, ಶ್ರೀ ಗಣೇಶ ವೆಂಕಟರಮಣ ಭಟ್ಟ್ ಸಂಡಳ್ಳಿ, ಶ್ರೀ ದಯಾನಂದ ಗಣೇಶ ಶೇಟ್ಟಿ, ಶ್ರೀ ಉಮೇಶ ಮಾದೇವ ಪಟಗಾರ, ಶ್ರೀ ಬೀರಪ್ಪ ಪುಂಡಲಿಕ ಅಂಬಿಗ, ಶ್ರೀ ಉಮೇಶ ನಾರಾಯಣ ಪಟಗಾರ, ಶ್ರೀ ನಾಗರಾಜ ದಿವಾಕರ ಪಟಗಾರ ಮತ್ತು ಎಲ್ಲಾ ಗ್ರಾಮಸ್ಥರು ಈ ಸಭೆಯಲ್ಲಿ ಹಾಜರಿದ್ದರು.