ನವದೆಹಲಿ: ಈ ಬಾರಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರೈತರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸುವುದಾಗಿ ಪುನರುಚ್ಚರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೇಶದ ಶೇ.20ರಷ್ಟು ಅತಿ ಬಡ ಕುಟುಂಬಗಳ ಖಾತೆಯಲ್ಲಿ ವಾರ್ಷಿಕ 72 ಸಾವಿರ ರೂ. ಠೇವಣಿ ಇಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ .
ಅಲ್ಲದೇ, ಕನಿಷ್ಠ ಆದಾಯ ಖಾತರಿ ಯೋಜನೆಯಡಿ, ಅರ್ಹ ರೈತರಿಗೆ ತಿಂಗಳಿಗೆ ಆರು ಸಾವಿರ ರೂಪಾಯಿಯಂತೆ ವಾರ್ಷಿಕ 72 ಸಾವಿರ ರೂ. ನೀಡುವುದಾಗಿ ತಿಳಿಸಿದರು.
ಇದೊಂದು ಕ್ರಾಂತಿಕಾರಿ ಯೋಜನೆಯಾಗಲಿದೆ ಎಂದ ಅವರು, ಇದರಿಂದ ದೇಶದ 5 ಕೋಟಿ ಕುಟುಂಬಗಳು ಹಾಗೂ 25 ಕೋಟಿ ಜನರು ನೇರ ಲಾಭ ಪಡೆಯಲಿದ್ದಾರೆ. ಇದರ ಪ್ರಕಾರ, ಪ್ರತಿ ತಿಂಗಳು ರೈತರ ಖಾತೆಗೆ 6 ಸಾವಿರ ರೂ. ಜಮೆಯಾಗಲಿದೆ ಎಂದರು.
ಇಂತಹ ಯೋಜನೆ ದೇಶದಲ್ಲಿ ಬೇರೆಲ್ಲೂ ಇಲ್ಲ.ದೇಶದಲ್ಲಿನ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದೇ ನಮ್ಮ ಧ್ಯೇಯ. ಬಡತನವನ್ನು ನಾವು ನಿರ್ಮೂಲನೆ ಮಾಡಿಯೇ ತಿರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.